ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಐತಿಹಾಸಿಕ ಭಾರತ ಭೇಟಿ ಇಂದಿನಿಂದ ಆರಂಭವಾಗಲಿದ್ದು, ತಮ್ಮ ಪತ್ನಿ ಸಹಿತ ಇಂದು ಮಧ್ಯಾಹ್ನ ಅಹಮದಾಬಾದ್’ಗೆ ಬಂದಿಳಿಯಲಿದ್ದಾರೆ.
ಮಧ್ಯಾಹ್ನ ಸುಮಾರು 2 ಗಂಟೆಗೆ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಟ್ರಂಪ್ ಜೊತೆಯಲ್ಲಿ ಅವರ ಪತ್ನಿ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್, ಅಲ್ಲಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ ಬ್ರಿಯಾನ್, ವಾಣಿಜ್ಯ ಕಾರ್ಯದರ್ಶಿ, ವಿಲ್ಬರ್ ರಾಸ್, ಇಂಧನ ಕಾರ್ಯದರ್ಶಿ ಡಾನ್ ಬ್ರೌಲೆಟ್ ಸೇರಿದಂತೆ 12 ಸದಸ್ಯರ ನಿಯೋಗ ಇರಲಿದೆ.
ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡುತ್ತಿರುವ 7ನೆಯ ಅಮೆರಿಕಾ ಅಧ್ಯಕ್ಷರಾಗಿದ್ದು, ಈ ಪ್ರವಾಸ ವಿಶ್ವದಲ್ಲೇ ಐತಿಹಾಸಿಕ ದಿನಗಳು ಎಂದೇ ಬಿಂಬಿತವಾಗಿದೆ. ಸ್ವತಃ ಅಮೆರಿಕಾ ಅಧ್ಯಕ್ಷರೇ ಈ ವಿಚಾರವನ್ನು ಟ್ವಿಟರ್’ನಲ್ಲಿ ಹೇಳಿಕೊಂಡಿದ್ದು ಮತ್ತೂ ವಿಶೇಷವಾಗಿದೆ.
ಇನ್ನು, ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ನಿನ್ನೆ ರಾತ್ರಿ ಪ್ರತಿಕ್ರಿಯಿಸಿದ್ದು, ಟ್ರಂಪ್ ಅವರು ನಾಳೆ ನಮ್ಮೊಂದಿಗೆ ಇರಲಿದ್ದಾರೆ. ಅಹಮದಾಬಾದ್’ನಲ್ಲಿ ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಉತ್ಸುಕತೆ ವ್ಯಕ್ತಪಡಿಸಿದ್ದಾರೆ.
ಇಂದು ಮಧ್ಯಾಹ್ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿರುವ ಟ್ರಂಪ್, ಸುಮರು 1 ಲಕ್ಷಕ್ಕೂ ಅಧಿಕ ಮಂದಿ ಸೇರಲಿರುವ ನಮಸ್ತೆ ಟ್ರಂಪ್ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.
ಅಹಮದಾಬಾದ್ ಕಾರ್ಯಕ್ರಮ ಮುಕ್ತಾಯಗೊಳಿಸಿದ ರಾಷ್ಟ್ರ ರಾಜಧಾನಿ ನವದೆಹಲಿಗೆ ಆಗಮಿಸುವ ಮುನ್ನ ಟ್ರಂಪ್ ದಂಪತಿಗಳು ಆಗ್ರಾದ ತಾಜ್ ಮಹಲ್’ಗೆ ಭೇಟಿ ನೀಡಲಿದ್ದಾರೆ.
ನವದೆಹಲಿಗೆ ಆಗಮಿಸಿದ ನಂತರ ಸುಮಾರು 36 ಗಂಟೆಗಳ ಕಾಲ ಬಹುತೇಕ ನಿರಂತರ ಕಾರ್ಯಕ್ರಮ ಹಾಗೂ ಸಭೆಗಳಲ್ಲಿ ಟ್ರಂಪ್ ಪಾಲ್ಗೊಳ್ಳಲಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post