ಕಲ್ಪ ಮೀಡಿಯಾ ಹೌಸ್
ಗೋಕರ್ಣ: ಭಾರತೀಯ ಭವ್ಯ ಪರಂಪರೆಯನ್ನು ಭಾವಿ ಪೀಳಿಗೆಯಲ್ಲಿ ಉಳಿಸಿ ಬೆಳೆಸುವ ಮಹತ್ಸಂಕಲ್ಪದೊಂದಿಗೆ ಶ್ರೀ ರಾಮಚಂದ್ರಾಪುರ ಮಠ ಆರಂಭಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲಗಳಿಗೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಸಾರ್ವಭೌಮ ಗುರುಕುಲ (ಬಾಲಕರಿಗೆ) ಮತ್ತು ರಾಜರಾಜೇಶ್ವರಿ ಗುರುಕುಲ (ಬಾಲಕಿಯರಿಗೆ)ಗಳಲ್ಲಿ ಎನ್‍ಐಓಎಸ್ ಪಠ್ಯಕ್ರಮದಂತೆ 4 ರಿಂದ 8ನೇ ತರಗತಿವರೆಗಿನ ಬಿ ಮತ್ತು ಸಿ ಲೆವೆಲ್ ತರಗತಿಗಳಿಗೆ ಮತ್ತು ಸೆಕೆಂಡರಿ ಹಾಗೂ ಸೀನಿಯರ್ ಸೆಕೆಂಡರಿ ತರಗತಿಗಳಿಗೆ ಪ್ರವೇಶಾವಕಾಶವಿದೆ.
ನಿಗದಿತ ಪಠ್ಯದ ಜತೆಗೆ ವೇದಪಥ, ಯೋಗ, ಜ್ಯೋತಿಷ್ಯ, ವಾಸ್ತು, ಆಯುರ್ವೇದ, ಭಗವದ್ಗೀತೆ, ಶ್ರೀಗಳಿಂದ ಮಹಾಪುರುಷರ ಚರಿತೆಗಳ ಬೋಧನೆ, ವ್ಯಾಯಾಮಕೀ ಸದಾಚಾರ ಮತ್ತು ವಿವಿಧ ಸ್ತೋತ್ರಗಳು, ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ, ಭಾವಸಂಗೀತ, ನೃತ್ಯ, ಯಕ್ಷಗಾನ, ಕರಕುಶಲಕಲೆ, ರಂಗೋಲಿ ಕಸೂತಿ, ಪಾರಂಪರಿಕ ಪಾಕಶಾಸ್ತ್ರ, ಗೃಹನಿರ್ವಾಹ ವಿಷಯಗಳನ್ನು ಬೋಧಿಸಲಾಗುತ್ತದೆ.
ಆಸಕ್ತರು ಮೊದಲು ಆನ್‍ಲೈನ್ ಆವೇದನಾ ಪತ್ರ ತುಂಬೇಕಾಗುತ್ತದೆ. ಸಂದರ್ಶನದಲ್ಲಿ ಆಯ್ಕೆಯಾದವರು ಆನ್‍ಲೈನ್ ಪ್ರವೇಶಪತ್ರ ತುಂಬಿ ಪ್ರವೇಶ ಪಡೆದುಕೊಳ್ಳಬಹುದು. ವಿವರಗಳಿಗೆ ವಿವಿವಿ ಆಡಳಿತಾಧಿಕಾರಿ (9449595207) ಅಥವಾ ವರಿಷ್ಠಾಚಾರ್ಯ (9449595248) ರನ್ನು ಸಂಪರ್ಕಿಸಬಹುದು. ಗುರುಕುಲ ಪ್ರವೇಶಕ್ಕೆ ಲಿಂಕ್: <https://forms.gle/
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















