ಕಲ್ಪ ಮೀಡಿಯಾ ಹೌಸ್ | ಉತ್ತರಪ್ರದೇಶ |
ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕರ ತಂಡ ಅಯೋಧ್ಯೆಗೆ ಭೇಟಿ ನೀಡಿ, ರಾಮ ಮಂದಿರ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ಹಾರಾಡಿಸಿದ್ದಾರೆ. ಈ ಸಂದರ್ಭ ಪವಿತ್ರ ಧಾರ್ಮಿಕ ಆವರಣದಲ್ಲಿ ರಾಜಕೀಯ ಧ್ವಜ ಯಾಕೆ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ.
ಕಾಂಗ್ರೆಸ್ ಮುಖಂಡರಾದ ದೀಪೇಂದ್ರ ಹೂಡ, ಅಜಯ್ ರೈ, ಕಾಂಗ್ರೆಸ್ ಮಹಿಳಾ ಮೋರ್ಚಾ ನಾಯಕಿ ರೇಣು ರೈ ಸೇರಿದಂತೆ ಹಲವು ನಾಯಕರು ಆಯೋಧ್ಯೆಗೆ ಭೇಟಿ ನೀಡಿ, ರಾಮ ಮಂದಿರ Ayodhya Rama Mandira ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ಹಾರಾಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಗುಂಪು ಜೈಶ್ರೀರಾಮ್ ಘೋಷಣೆ ಕೂಗುತ್ತಾ ಕಾಂಗ್ರೆಸ್ ಧ್ವಜ ಕಿತ್ತೆಸೆದು ರಾಮ ಮಂದಿರ ಆವರಣದಲ್ಲಿ ರಾಜಕೀಯ ಬೇಡ ಎಂದು ಎಚ್ಚರಿಕೆ ನೀಡಿದೆ ಎನ್ನಲಾಗಿದೆ.
Also read: ಮಥುರಾ ಕೃಷ್ಣನ ಜನ್ಮಸ್ಥಳ ವಿಚಾರ | ಹಿಂದೂಗಳಿಗೆ ಭಾರಿ ಹಿನ್ನಡೆ | ಏನಾಯಿತು?

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post