ಕಲ್ಪ ಮೀಡಿಯಾ ಹೌಸ್ | ಉತ್ತರ ಕನ್ನಡ |
ರಾತ್ರಿ ವೇಳೆ ಗಸ್ತು ಕಾರ್ಯ ಆರಂಭಿಸುವ ಮೂಲಕ ಜಿಲ್ಲಾ ಮಹಿಳಾ ಪೊಲೀಸರು ರಾಜ್ಯಕ್ಕೇ ಮಾದರಿಯಾಗುವ ಹೆಜ್ಜೆ ಇರಿಸಿದ್ದಾರೆ.
ಭಟ್ಕಳದಲ್ಲಿ ಪಿಎಸ್’ಐ ಬಿ. ಸುಮಾ ಅವರ ನೇತೃತ್ವದಲ್ಲಿ ಕತ್ತಲಿನಲ್ಲಿಯೇ ರಸ್ತೆಗೆ ಇಳಿದ ಮಹಿಳಾ ಪೊಲೀಸ್ ಸಿಬ್ಬಂದಿಗಳು ಆಯಕಟ್ಟಿನ ಸ್ಥಳಗಳಲ್ಲಿ ನಿಂತು ವಾಹನ ತಪಾಸಣೆ ನಡೆಸಿದರು.
ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆಯನ್ನೂ ನಡೆಸಿದರು. ಯಾವುದೇ ಅಳುಕು ಇಲ್ಲದೇ ತಂಡ ಕಟ್ಟಿಕೊಂಡು ಭಟ್ಕಳ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗಸ್ತು ನಡೆಸಿ, ಎಲ್ಲರ ಹುಬ್ಬೇರುವಂತೆ ಮಾಡಿದರು. ನಸುಕಿನ ವೇಳೆ 5 ಗಂಟೆಯವರೆಗೂ ನಿದ್ದೆ ಬಿಟ್ಟು ಗಸ್ತು ನಡೆಸಿದ್ದಾರೆ ಈ ವೀರ ವನಿತೆಯರು.
Also read: ಶ್ರೀರಂಗಪಟ್ಟಣದ ಹಿಂದೂ ರ್‍ಯಾಲಿ ಕೊನೆಯ ಕ್ಷಣದಲ್ಲಿ ರದ್ದು: ಕಾರಣವೇನು ಗೊತ್ತಾ?
ಮಾದರಿಯಾಗಿರುವ ಈ ವಿಶೇಷ ಕರ್ತವ್ಯ ನಿರ್ವಹಿಸಿದ ಪಿಎಸ್’ಐ ಸುಮಾ ನೇತೃತ್ವದ ಮಹಿಳಾ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ ಪನ್ನೇಕರ್ ಅವರು ಅಭಿನಂದನೆಗಳು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post