ಕಲ್ಪ ಮೀಡಿಯಾ ಹೌಸ್ | ಉತ್ತರಾಖಂಡ್ |
ಬಸ್ ಕಂದಕಕ್ಕೆ ಬಿದ್ದು, 31 ಮಂದಿ ಸಾವನ್ನಪ್ಪಿ, 20ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಾಖಂಡ್‌ನ ಪೌರಿ ಜಿಲ್ಲೆಯ ಬಿರೋನಕಾಲ್ ಪ್ರದೇಶದಲ್ಲಿ ನಡೆದಿದೆ.
The bus accident in Pauri, Uttarakhand is heart-rending. In this tragic hour my thoughts are with the bereaved families. I hope those who have been injured recover at the earliest. Rescue operations are underway. All possible assistance will be provided to those affected: PM Modi
— PMO India (@PMOIndia) October 5, 2022
ದುರ್ಘಟನೆಗೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿ PM Modi ಕಂಬನಿ ಮಿಡಿದಿದ್ದು, ಅಪಘಾತದ ಸುದ್ಧಿ ಕೇಳಿ ತುಂಬಾ ದುಃಖವಾಯಿತು. ಮೃತ ಕುಟುಂಬಕ್ಕೆ ಸಾಂತ್ವಾನ ತಿಳಿಸುತ್ತೇನೆ. ಹಾಗೂ ಗಾಯಗೊಂಡವರೆಲ್ಲ ಶೀಘ್ರವೇ ಗುಣಮುಖರಾಗಲಿ. ರಕ್ಷಣಾ ಕಾರ್ಯ ಮುಂದುವರೆದಿದ್ದು, ಅದಕ್ಕೆ ಬೇಕಾದ ಎಲ್ಲಾ ಸಹಕಾರ ನೀಡಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.
ಸುಮಾರು 55 ಮಂದಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದು, ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post