ಕಲ್ಪ ಮೀಡಿಯಾ ಹೌಸ್ | ಉತ್ತರಾಖಂಡ್ |
ಇಲ್ಲಿನ ಹಲ್ದ್ವಾನಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 5000 ಕ್ಕೂ ಅಧಿಕ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನಷ್ಟವನ್ನು ದುಷ್ಕರ್ಮಿಗಳಿಂದಲೇ ವಸೂಲಿ ಮಾಡಲು ಅಲ್ಲಿನ ಸರ್ಕಾರ ಮುಂದಾಗಿದೆ.
ಈ ಕುರಿತಂತೆ ಖಡಕ್ ನಿರ್ಧಾರ ಕೈಗೊಂಡಿರುವ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಸಿಸಿ ಕ್ಯಾಮೆರಾ, ವೀಡಿಯೋ ತುಣುಕು ಆಧರಿಸಿ ಹಲವಾರು ಜನರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 5000ಕ್ಕೂ ಅಧಿಕ ಮಂದಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದಿದ್ದಾರೆ.

Also read: ಬಾಲ ರಾಮನ ಕಣ್ಣು ಕೆತ್ತಿದ ಬೆಳ್ಳಿ ಸುತ್ತಿಗೆ, ಚಿನ್ನದ ಉಳಿ ಹೇಗಿದೆ ನೋಡಿ!
ಗಲಭೆಕೋರರ ಮೇಲೆ ಕಠಿಣ ಯುಎಪಿಎ ವಿಧಿಸಲಾಗಿದ್ದು, ಭಯೋತ್ಪಾದಕ ಕೃತ್ಯಗಳನ್ನು ಎಸಗುವವರ ಮೇಲೆ ಯುಎಪಿಎ ವಿಧಿಸಲಾಗುತ್ತದೆ. ಇನ್ನು, ಹಲ್ದ್ವಾನಿಗೆ ಭೇಟಿ ನೀಡಿದ ಸಿಎಂ ಸಿಂಗ್, ಹಿಂಸಾಚಾರದಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಗಳನ್ನು ಭೇಟಿಯಾಗಿ, ಧೈರ್ಯ ತುಂಬಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post