ಕಲ್ಪ ಮೀಡಿಯಾ ಹೌಸ್ | ವಾರಣಾಸಿ |
ಉತ್ತರ ಪ್ರದೇಶ ರಾಜ್ಯದಾದ್ಯಂತ ಬುಧವಾರ ಒಂದೇ ದಿನ ಸಿಡಿಲು #Thunder ಬಡಿದು ವಿವಿಧ ಪ್ರದೇಶಗಳಲ್ಲಿ 38 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ರಾಜ್ಯದ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿಯ ನಡುವೆಯೇ ಸಿಡಿಲು ಬಡಿದು ಸಾವನ್ನಪ್ಪುವವರ ಸಂಖ್ಯೆ ಆತಂಕಕ್ಕೆ ಕಾರಣವಾಗಿದೆ. ಇದು ಜನಜೀವವನ್ನು ಅಲ್ಲೋಲಕಲ್ಲೋಲಗೊಳಿಸಿದೆ.
Also read: ನಿಷೇಧಿತ ಫಾಲ್ಸ್ ಬಳಿ ಯುವಕರ ಹುಚ್ಚಾಟ | ಪೊಲೀಸರ ಪಾಠಕ್ಕೆ ಬರಿ ಚಡ್ಡಿಯಲ್ಲಿ ಓಡಿದ ಯುವಕರು | ಆಗಿದ್ದೇನು?
ಸಿಡಿಲು ಬಡಿದು ಪ್ರತಾಪ್’ಗಢದಲ್ಲಿ 11 ಮಂದಿ ಮೃತಪಟ್ಟಿದ್ದು, ಸುಲ್ತಾನ್‌ಪುರದಲ್ಲಿ 7, ಚಂದೌಲಿಯಲ್ಲಿ 6, ಮೈನ್ಪುರಿಯಲ್ಲಿ 5, ಪ್ರಯಾಗ್ ರಾಜ್’ನಲ್ಲಿ 4, ಔರೈಯಾ, ಡಿಯೋರಿಯಾ, ಹತ್ರಾಸ್, ವಾರಣಾಸಿ ಮತ್ತು ಸಿದ್ಧಾರ್ಥನಗರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇದೇ ವೇಳೆ ಸಿಡಿಲಿನ ಹೊಡೆತಕ್ಕೆ ಹತ್ತಾರು ಮಂದಿ ಸುಟ್ಟ ಗಾಯಗಳಿಗೆ ಒಳಗಾಗಿ, ನರಳುತ್ತಿದ್ದಾರೆ.
ಪ್ರತಾಪಗಢದಲ್ಲಿ, ಐದು ವಿವಿಧ ಪ್ರದೇಶಗಳಲ್ಲಿ ಸಾವುಗಳು ಸಂಭವಿಸಿವೆ ಮತ್ತು ಅವರ ದೇಹಗಳನ್ನು ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಏತನ್ಮಧ್ಯೆ, ಪೂರ್ವ ಉತ್ತರ ಪ್ರದೇಶದ ಚಂದೌಲಿಯಲ್ಲಿ, ಹಲವಾರು ಜನರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post