ಕಲ್ಪ ಮೀಡಿಯಾ ಹೌಸ್ | ವಾರಣಾಸಿ |
ಇಲ್ಲಿನ ಜ್ಞಾನವಾಪಿ Gnanavapi ಮಸೀದಿಯ ವೈಜ್ಞಾನಿಕ ಸರ್ವೆಗೆ ನೀಡಲಾಗಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ Supreme Court ತಾತ್ಕಾಲಿಕ ತಡೆ ನೀಡಿದೆ.
ಈ ಕುರಿತಂತೆ ಆದೇಶ ನೀಡಿರುವ ಸುಪ್ರೀಂ ಕೋರ್ಟ್, ಜ್ಞಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್’ಐ) ನಡೆಸುತ್ತಿರುವ ವೈಜ್ಞಾನಿಕ ಸಮೀಕ್ಷೆಯನ್ನು ಜುಲೈ 26 ರವರೆಗೆ ಇಂದು ತಡೆಹಿಡಿದಿದೆ.
ಮುಂದಿನ ಎರಡು ವಾರಗಳವರೆಗೆ ಸುತ್ತಮುತ್ತ ಯಾವುದೇ ಉತ್ಖನನ ಕಾರ್ಯವನ್ನು ನಡೆಸದಂತೆಯೂ ಆದೇಶಿಸಿದೆ. ಸುಪ್ರೀಂ ಕೋರ್ಟ್ ಕೂಡ ಮೊದಲು ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಮುಸ್ಲಿಂ ಪಕ್ಷವನ್ನು ಕೇಳಿದೆ. ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಮಸೀದಿ ಆವರಣವನ್ನು ಸರ್ವೆ ಮಾಡುವಂತೆ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ಜ್ಞಾನವಾಪಿ ಮಸೀದಿಯ ನಿರ್ವಹಣೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು ಅರ್ಜಿ ಸಲ್ಲಿಸಿದೆ.
Also read: ಮನವನ್ನು ಶುದ್ಧವಾಗಿಟ್ಟುಕೊಂಡರೆ ಮಾತ್ರ ವೈರಾಗ್ಯ ಭಾವ ಹತ್ತಿರ: ಪಂಡಿತ ಅನಿರುದ್ಧಾಚಾರ್ಯ
ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಎಎಸ್’ಐ ತಂಡ ಇಂದು ಬೆಳಗ್ಗೆ ಮಸೀದಿ ಆವರಣಕ್ಕೆ ಆಗಮಿಸಿ ಸಮೀಕ್ಷೆ ಆರಂಭಿಸಿತ್ತು. ಸಿಜೆಐ ಡಿ. ಚಂದ್ರಚೂಡ್ ಅವರು ಎಎಸ್’ಐಗೆ ಸಮೀಕ್ಷೆಯ ಬಗ್ಗೆ ಮಾಹಿತಿ ನೀಡುವಂತೆ ಕೇಳಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post