ಕಲ್ಪ ಮೀಡಿಯಾ ಹೌಸ್ | ವಾರಣಾಸಿ |
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೂರನೇ ಬಾರಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಕ್ಷೇತ್ರ ವಾರಣಾಸಿಯಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಗುಜರಾತ್ ಮೂಲದ ಪ್ರಧಾನಿ ನರೇಂದ್ರ ಮೋದಿ #PM Narendra Modi ಕಳೆದ ಎರಡು ಬಾರಿ ವಾರಣಾಸಿಯಿಂದ ಸ್ಪರ್ಧಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದರು. ಈಗ ಮೂರನೇ ಬಾರಿ ವಾರಣಾಸಿಯಿಂದಲೇ ನಾಮಪತ್ರ ಸಲ್ಲಿಸಿದ್ದು, ಹ್ಯಾಟ್ರಿಕ್ ಗೆಲವಿನ ನಿರೀಕ್ಷೆ ಹಾಗೂ ಉತ್ಸಾಹದಲ್ಲಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ #UP CM Yogi Adithyanath ಸೇರಿದಂತೆ ತಮ್ಮ ನಾಲ್ವರು ಆಪ್ತರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿದ ಪ್ರಧಾನಿಯವರು ನಾಮಪತ್ರ ಸಲ್ಲಿಸಿದರು.
Also read: ಹೊಸಪೇಟೆ | ಪ್ರಪ್ರಥಮ ಬಾರಿಗೆ ಶಂಕರಾಚಾರ್ಯರಿಗೆ ಆನೆ ಅಂಬಾರಿಯ ಉತ್ಸವ
ಪ್ರಧಾನಿಯವರು ಪ್ರತಿನಿಧಿಸುತ್ತಿರುವ ವಾರಣಾಸಿ ಕ್ಷೇತ್ರದಲ್ಲಿ ಜೂನ್ 1 ರಂದು ಸಾರ್ವತ್ರಿಕ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದ ಮತದಾನ ನಡೆಯಲಿದೆ.
ಸತತ ಮೂರನೇ ಬಾರಿಗೆ ತಮ್ಮ ಪಕ್ಷದ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಸಂಸತ್ತಿನ ಚುನಾವಣೆಯ ಫಲಿತಾಂಶ ಘೋಷಣೆ ನಂತರ ಮುಂದಿನ ತಿಂಗಳು ಜಿ -7 ಶೃಂಗಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಗಂಗಾನದಿಯ ದಶಾಶ್ವಮೇಧ ಘಾಟ್’ನಲ್ಲಿ ಮೋದಿಯವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇಂದು ಗಂಗಾ ಸಪ್ತಮಿಯ ಶುಭ ದಿನವಾಗಿದ್ದು, ಘಾಟ್’ನಲ್ಲಿ ಗಂಗಾ ಆರತಿ ಮಾಡಿ, ಕಾಲ ಭೈರವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post