Friday, May 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಕ್ಯಾನ್ಸರ್ ಪೀಡಿತೆ ಸಹಾಯಕ್ಕಾಗಿ ವೇಷ ಧರಿಸಿ ಉರಿ ಬಿಸಿಲಲ್ಲಿ ಬೆಂದ ವಿಕ್ಕಿ ಶೆಟ್ಟಿ ಮಾಧ್ಯಮಗಳಿಗೆ ಕಾಣಲೇ ಇಲ್ಲ

ಪರೋಪಕಾರಾರ್ಥಮ್ ಇದಂ ಶರೀರಮ್ ಎನ್ನುವ ನೊಂದವರ ಪಾಲಿನ ಆಶಾಕಿರಣದ ವಿಕಾಸ

February 7, 2020
in Special Articles
0 0
0
Share on facebookShare on TwitterWhatsapp
Read - 5 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ವಿದ್ಯಾ ದದಾತಿ ವಿನಯಂಡ ವಿನಯಾದ್ ಯಾತಿ ಪಾತ್ರತಾ॥ ಪಾತ್ರತ್ವಾದ್ ಧನಮಾಪ್ರೋ ಧನಾದ್ ಧರ್ಮಂ, ತತಃ ಸುಖವ॥ ವಿದ್ಯೆ ಮನುಷ್ಯನಿಗೆ ವಿನಯವನ್ನು ತಂದುಕೊಡುತ್ತದೆ. ವಿನಯದಿಂದ ಮನುಷ್ಯನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆ ವ್ಯಕ್ತಿತ್ವದಿಂದ ಹಣ ಸಂಪಾದನೆಯಾಗುತ್ತದೆ. ಸಂಪಾದಿಸಿದ ಹಣ ಧರ್ಮಕಾರ್ಯಗಳಲ್ಲಿ ಸದ್ವಿನಿಯೋಗವಾದರೆ ಸುಖ ದೊರೆಯುತ್ತದೆ ಎಂಬ ಶ್ಲೋಕವಿದೆ. ಅಂತೆಯೇ ಬಾಲ್ಯದಲ್ಲಿ ಅಥವಾ ಬೆಳೆಯುತ್ತಾ ದೊರಕಿದ ಸಂಸ್ಕಾರ ಅಥವಾ ಶಿಕ್ಷಣ ಎಂಥದ್ದು ಎಂಬುದನ್ನು ಇಂದಿನ ಯುವ ಜನಾಂಗದ ನಡವಳಿಕೆಯನ್ನು ನೋಡಿ ತಿಳಿಯಬಹುದು.

ಉತ್ತಮ ಸಂಸ್ಕಾರಯುತವಾದ ವಿದ್ಯೆಯಿಂದ ವ್ಯಕ್ತಿ ಸಮಾಜಕ್ಕೆ ಹತ್ತಿರನಾಗುತ್ತಾನೆ. ಇಂದಿನ ಯಾಂತ್ರಿಕ ಹಾಗೂ ಮಿಂಚಿನವೇಗದ ಜೀವನಶೈಲಿಯಲ್ಲಿ ತಮ್ಮ ತಮ್ಮ ಅವಶ್ಯಕತೆಗಳನ್ನು ಪೂರೈಸುತ್ತಾ, ದುಡ್ಡು ಗಳಿಸುತ್ತಾ, ಫ್ಯಾಷನ್ ಮಾಡುತ್ತಾ ಬದುಕುವಾಗ, ಸಿರಿ ಬಂದ ಕಾಲಕ್ಕೆ ಕಾಲ ಬುಡದಲ್ಲಿ ಕೂತು ಮುತ್ತಿಕ್ಕುತ್ತಿದ್ದವರೆಲ್ಲ ಕಷ್ಟ ಬಂದ ಕಾಲಕ್ಕೆ ನೀವು ನಮ್ಮವರಲ್ಲ ಎಂದು ಕಳಚಿಕೊಳ್ಳುತ್ತಿರುವಾಗ ಅಲ್ಲೊಬ್ಬರಿಲ್ಲೊಬ್ಬರು ಅಂತ ಬೆರಳೆಣಿಕೆಯ ಮಂದಿ ಮಾನವನ ಸೇವೆಯೇ ಮಾಧವನ ಸೇವೆ ಅನ್ನೋ ವಿವೇಕಾನಂದರ ಮಾತಿನಂತೆ ಕಾರ್ಯ! ಕಾರ್ಯ! ಕಾರ್ಯ! ಇದೇ ನಮ್ಮ ಧ್ಯೇಯವೆಂದು ಯೋಚಿಸುತ್ತಾ ಹೊಸ ಯೋಜನೆಗಳ ಮೂಲಕ ನೊಂದವರ ಕಣ್ಣೊರೆಸುತ್ತಾ, ಡಿವಿಜಿಯವರ ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ ಫಲ ಮಾಗುವಂದು ತುತ್ತೂರಿ ದನಿಗಳಿಲ್ಲ ಬೆಳಕನೀವ ಸೂರ್ಯಚಂದ್ರರದೊಂದು ಸದ್ದಿಲ್ಲ ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ ಎಂಬ ಕಗ್ಗವನ್ನು ಅರ್ಥೈಸಿಕೊಂಡ ತೆರದಿ ಸದ್ದು ಗದ್ದಲವಿಲ್ಲದೆ ಸಮಾಜಕ್ಕೆ ಒಳಿತಾಗುವ ಯಾವುದಾದರೊಂದು ಕಾಯಕವನ್ನು ಮಾಡುತ್ತಿರುತ್ತಾರೆ. ಮರದಿಂದುದುರಿದ ಪುಟ್ಟ ಬೀಜಕ್ಕೆ ಇರುವ ಹೆಮ್ಮರವಾಗುವ ಶಕ್ತಿ.


ಅದರಿಂದ ಕಳಚಿ ಬೀಳುವ ಬೃಹತ್ ಕೊಂಬೆಗೂ ಇಲ್ಲ ಅನ್ನುವಂತೆ ಬಡತನ ಇದ್ದರೂ, ವಿದ್ಯೆ ಕಡಿಮೆ ಇದ್ದರೂ ಅಧಿಕಾರ, ಸಿರಿವಂತಿಕೆ ಇರುವವರು ಮಾಡಲಾಗದ್ದನ್ನು ಮಾಡುತ್ತಾ ಬಳಲಿ ಬೆಂಡಾದವರಿಗೆ ನೆರಳು ನೀಡುತ್ತಿರುತ್ತಾರೆ.

ತಾರುಣ್ಯದಲ್ಲಿ ಎಲ್ಲರೂ ಓದು, ಹಣ, ಪ್ರೀತಿ, ಪ್ರೇಮ ಎಂದು ಒಂದೊಂದರ ಹಿಂದೆ ಒಬ್ಬೊಬ್ಬರು ಓಡುತ್ತಿದ್ದರೆ ಈತನೊಬ್ಬ ಕಡಿಮೆ ಓದಿದರೂ ಇನ್ನೊಬ್ಬರ ಬಾಳು ಬೆಳಗುವ ತವಕದಲ್ಲಿ ತನ್ನನ್ನು ತಾನು ಉರಿಸುತ್ತಾ ಬೆಳಕು ನೀಡುವ ದೀಪದಂತೆ, ತಾನು ಬೆಂಕಿಯುಂಡೆಯಂತೆ ಉರಿಯುತ್ತಾ ಜಗವ ಬೆಳಗುವ ಸೂರ್ಯನಂತೆ ಗದ್ದಲಗಳ ಮಾಡದೆ ಕಾರ್ಯವೆಸಗುತ್ತಾ ಸುದ್ದಿಯಾಗುತ್ತಿದ್ದಾನೆ. ಆ ಸದ್ದಿಲ್ಲದೆ ನೊಂದವರ ಕಣ್ಣೊರೆಸುವವರ ಸಾಲಿನಲ್ಲಿ ನಿಂತ ಆಶಾಕಿರಣವೇ ಮೂಡಬಿದಿರೆಯ ಚಿಗುರು ಮೀಸೆಯ ತರುಣ ವಿಕಾಸ್ ಶೆಟ್ಟಿ ಅಲಿಯಾಸ್ ವಿಕ್ಕಿ ಶೆಟ್ಟಿ ಬೆದ್ರ.


ವಿಕಾಸ್… ಹೆಸರಲ್ಲೇ ಇದೆ ಹೊಸ ಉದಯ. ಮೂಡಬಿದ್ರೆಯ ಭಾಸ್ಕರ ಶೆಟ್ಟಿ ಮತ್ತು ಶಶಿಕಲಾ ಶೆಟ್ಟಿ ದಂಪತಿಗಳ ತೃತೀಯ ಪುತ್ರನಾಗಿ ಇಪ್ಪತೈದು ವರ್ಷದ ಹಿಂದೆ ಮಾರ್ಚ್ 22 ರಂದು ಜನಿಸಿದ ವಿಕಾಸ್ ಪ್ರಾಥಮಿಕ ಶಿಕ್ಷಣವನ್ನು ಮೂಡಬಿದ್ರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ, ಜೈನ ಪ್ರೌಢ ಶಾಲೆ ಮೂಡಬಿದ್ರೆಯಲ್ಲಿ ಎಸ್’ಎಸ್’ಎಲ್’ಸಿ ಪೂರೈಸಿ ಸೀಕ್ರೆಡ್ ಹಾರ್ಟ್ ಇನ್ಸ್ಟಿಟ್ಯೂಟ್ ಮೂಡಬಿದ್ರೆಯಲ್ಲಿ ಐಟಿಐ ಇನ್ ಮೆಕ್ಯಾನಿಕ್ ಮಾಡಿದ್ದಾರೆ.

ಕೂಲಿ ಕೆಲಸ ಮಾಡೋ ತಂದೆ, ಬೀಡಿ ಕಟ್ಟುವ ತಾಯಿಯ ಮುದ್ದು ಕಂದ, ಪುಣೆ ಹಾಗೂ ಹೊರ ದೇಶದಲ್ಲಿ ದುಡಿಯುತ್ತಿರುವ ಅಣ್ಣಂದಿರ ಪ್ರೀತಿಯ ತಮ್ಮನಾಗಿರುವ, ಮಧ್ಯಮ ವರ್ಗದ ಪುಟ್ಟ ಕುಟುಂಬದ ಕುಡಿ ವಿಕಾಸ್ ಶೆಟ್ಟಿ ವೃತ್ತಿಯಲ್ಲಿ ಮೆಕ್ಯಾನಿಕ್. ಸೀದಾ, ಸಾದಾ, ಸರಳ ವ್ಯಕ್ತಿತ್ವದ ಸಜ್ಜನ, ಮಂದಹಾಸ ತುಂಬಿದ ಮುಖ, ತೆಳ್ಳಗೆ ಉದ್ದಕ್ಕಿರುವ ವಿಕಾಸ್‌ನನ್ನು ನೋಡಿದರೆ ಯಾವುದೋ ಕಾಲೇಜ್ ಹುಡುಗ ಇರಬಹುದೆಂಬ ಭಾವನೆ ಮೂಡುವುದಂತೂ ಸುಳ್ಳಲ್ಲ. ಫ್ಯಾಷನ್ ಲೋಕದಿಂದ ಮಾರು ದೂರ ಇರುವ ವಿಕ್ಕಿ ಸಮಾಜ ಸೇವೆಯಲ್ಲಿ ಸದಾ ಮುಂದು.


ನಾನು… ನನ್ನದು ಎನ್ನುವ ಸ್ವಾರ್ಥಿಗಳ ಲೋಕದಲ್ಲಿ ಈ ಯುವಕ ವಿಶೇಷ ಅನ್ನಿಸಲು ಕಾರಣಗಳು ಅನೇಕ. ವಾರದ ಆರು ದಿನಗಳಲ್ಲಿ ಮೆಕ್ಯಾನಿಕ್ ಆಗಿ ಮೈ ಕೈಯಲ್ಲಿ ಗ್ರೀಸ್ ಮೆತ್ತಿಕೊಳ್ಳುವ ಈ ಹುಡುಗ ಭಾನುವಾರ ಮುಂಜಾವಲ್ಲಿ ನೇತಾಜಿ ಬ್ರಿಗೇಡ್ ಎಂಬ ಸಂಸ್ಥೆಯಡಿಯಲ್ಲಿ ಮೂಡಬಿದಿರೆಯ ಆಸುಪಾಸಿನ ದೇವಸ್ಥಾನ, ದೈವಸ್ಥಾನ, ಬೀದಿ, ಪೇಟೆ ಮುಂತಾದ ಜಾಗಗಳಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲು ಪಡೆಯುವ ಮೂಲಕ ಪರಿಸರವನ್ನು ಆರೋಗ್ಯಯುತವಾಗಿಸುವ ಪಣ ತೊಟ್ಟು ಸ್ವಚ್ಛ ಭಾರತ ಯೋಜನೆಗೆ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.

ಬಲಗೈಯಲ್ಲಿ ಮಾಡಿದ ದಾನ ಎಡ ಕೈಗೆ ತಿಳಿಯದ ಹಾಗೆ ದಾನ ಮಾಡುವ ಪ್ರತಿ ತಿಂಗಳ ಸಂಬಳದಲ್ಲಿ ಒಂದಷ್ಟನ್ನು ಮಾನವ ಹಿತಕ್ಕಾಗಿ ದುಡಿಯುವ ಅಮೃತ ಸಂಜೀವಿನಿ, ಜೈ ತುಳುನಾಡ್ ಸೇವಾ ಚಾರಿಟೇಬಲ್ ಟ್ರಸ್ಟ್‌, ವೀರಾಂಜನೇಯ ಸೇವಾ ಸಮಿತಿ, ಕರಾವಳಿ ಕೇಸರಿ ಯೂತ್ ಕ್ಲಬ್ ಬೆದ್ರ ಮುಂತಾದ ಸೇವಾ ಸಂಸ್ಥೆಗಳಿಗೆ ಅರ್ಪಣೆ ಮಾಡುವ ಇಪ್ಪತ್ತೈದರ ಹರೆಯದ ವಿಕಾಸ್ ಅಷ್ಟಕ್ಕೇ ಸುಮ್ಮನಾಗದೆ, ಸಮಾಜದಿಂದ ಸಮಾಜಕ್ಕೆ ಒಂದಷ್ಟು ಹಂಚುವ ಕೆಲಸ ಮಾಡುವ ಸಾಹಸಕ್ಕೆ ಕೈ ಹಾಕಿದರು.


ಕಷ್ಟದಲ್ಲಿರೋ ಕೈಗಳ ಜೊತೆ ಸಹಾಯ ಮಾಡೋ ಮನಸ್ಸುಗಳು ಇದ್ದು ಸಹಾಯ ಮಾಡುವ ಅವಕಾಶ ಸಿಗದ ಕಾರಣ ದಾನಿಯಾಗಲಾಗದೆ ಇರುವವರಿಗೂ ಅವಕಾಶ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಕೆರೆಯ ನೀರನ್ನು ಕೆರೆಗೆ ಚೆಲ್ಲುವ ತೆರದಿ ಯಾವುದಾದರೊಂದು ಯೋಜನೆಯನ್ನು ಕೈಗೆತ್ತಿಕೊಳ್ಳುವ ಬಗ್ಗೆ ಯೋಚಿಸಿದರು. ನನ್ನಿಂದ, ನಾ ಪಡೆದು ಬಂದ ದೇಹದಿಂದ ಬೇರೆಯವರ ಪಾಲಿಗೇನಾದರೂ ಮಾಡಬೇಕು, ಪರೋಪಕಾರಾರ್ಥಮ್ ಇದಂ ಶರೀರಮ್ ಎನ್ನುತ್ತಾ ಯೋಚಿಸಿದಾಗ ಹೊಳೆದಿದ್ದು ವಿಭಿನ್ನವಾದ ವಿಶೇಷ ವೇಷ ಧರಿಸಿ ಹಣ ಸಂಗ್ರಹಿಸಿ ಸಹಾಯಕ್ಕಾಗಿ ಕಾಯುತ್ತಿರುವ ಕುಟುಂಬಕ್ಕೆ ಯಾವುದಾದರೂ ನೀಡುವುದು. ತಾನು ವೇಷ ಧರಿಸುವ ಬಗ್ಗೆ ಸಾಮಾಜಿಕ ಜಾಲದಲ್ಲಿ ಹಂಚಿಕೊಳ್ಳುವ ವಿಕ್ಕಿ ಶೆಟ್ಟಿ ಬೆದ್ರ ಇಲ್ಲಿ ಸಂಗ್ರಹವಾದುದರಲ್ಲಿ ಸ್ವಂತಕ್ಕಾಗಿ ಒಂದು ಪೈಸೆಯನ್ನೂ ಬಳಸಿಕೊಳ್ಳುವುದಿಲ್ಲ ಎಂದು ಹೇಳಿ ಅಂತೆಯೇ ನಡೆದುಕೊಳ್ಳುವ ಗಟ್ಟಿಗ.

ಆ ಹುಡುಕಾಟದಲ್ಲಿ ಸಿಕ್ಕಿದ್ದು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಶಿರ್ತಾಡಿಯ ಸಾನ್ವಿ ಎಂಬ ಪುಟಾಣಿ ಕಂದಮ್ಮ. ಮೊದಲ ಬಾರಿಗೆ ಅಮೃತ ಸಂಜೀವಿನಿ ಮತ್ತು ಜವನೇರ್ ಬೆದ್ರ ಸಂಘಟನೆಯ ಸಹಕಾರದೊಂದಿಗೆ ತನ್ನ ಮನದಾಸೆ ಪೂರೈಸಿಕೊಳ್ಳಲು, ಕಂದಮ್ಮಳ ಆರೋಗ್ಯದ ಕುಟುಂಬ ವರ್ಗದವರ ಕನಸು ನನಸಾಗಿಸಲು ಮೂಡಬಿದಿರೆಯ ಆಳ್ವಾಸ್ ನುಡಿಸಿರಿಯಲ್ಲಿ ವಿಶೇಷ ಆಕರ್ಷಕ ವೇಷದೊಂದಿಗೆ ನಿಂತರು. ಮೊದಲ ಆ ಪ್ರಯತ್ನದಲ್ಲಿ ಯಶಸ್ವಿಯಾದ ವಿಕಾಸ್ ಸಾನ್ವಿಯ ನೆರವಿಗೆ ನೀಡಿದ್ದು ಒಂದು ಲಕ್ಷ ಮೊತ್ತ.


ಮತ್ತೆ ವೇಷ ಧರಿಸಲು ಮನ ಮಾಡಿ ಹುಡುಕಿದಾಗ ತಿಂಗಳಿಗೆ 53 ಸಾವಿರ ಚಿಕಿತ್ಸಾ ವೆಚ್ಚ ತಗಲುವ ಗಂಟಾಲ್ಕಟ್ಟೆಯ ಭವಿಶ್ ಹೆಸರಿನ ಅಡ್ರಿನೊಮೈಲೋನ್ಯೂರೋಪತಿ ಎಂಬ ನರ ಸಂಬಂಧಿ ರೋಗದಿಂದ ಬಳಲುತ್ತಿರುವ ಆರ್ಥಿಕವಾಗಿ ಸಂಕಷ್ಟದಲ್ಲಿರುವ 9 ವರ್ಷದ ಬಾಲಕನೊಬ್ಬನ ಬಗ್ಗೆ ತಿಳಿಯುತ್ತದೆ. ಆತನ ನೆರವಿಗಾಗಿ ಒಂಟಿಕಟ್ಟೆಯಲ್ಲಿ ನಡೆದ ಮೂಡಬಿದಿರೆಯ ಕಂಬಳದಲ್ಲಿ ವಿಶೇಷ ವೇಷ ಧರಿಸಿ 86 ಸಾವಿರದಷ್ಟು ಧನ ಸಂಗ್ರಹಿಸಿ ನೀಡಿದ್ದರು.

ಹಾಗೆಯೇ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಉಡುಪಿಯ ಮಹೇಶ್ ಮಡಿವಾಳರ ಪುತ್ರಿ ನಿಹಾರಿಕಾ ಎಂಬ ಐದರ ಹರೆಯದ ಕಂದಮ್ಮಳ ರಕ್ತ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸಲು ಹದಿನೈದು ಲಕ್ಷದ ಅವಶ್ಯಕತೆಯಿದ್ದು ಅದಕ್ಕಾಗಿ ಶ್ರೀ ಕ್ಷೇತ್ರ ಕಟೀಲು ದುರ್ಗಾ ಪರಮೇಶ್ವರಿಯ ಬ್ರಹ್ಮಕಲಶದಲ್ಲಿ ವಿಭಿನ್ನ, ವಿಶೇಷ ವೇಷ ಧರಿಸಿ ಸುಮಾರು ಮೂರು ಲಕ್ಷದಷ್ಟು ಧನ ಸಂಗ್ರಹಿಸಿ ನೀಡಿ ದೊಡ್ಡ ಮಟ್ಟದ ಜನನಾಯಕರಿಂದ ಹಿಡಿದು ಸಾಮಾನ್ಯಾತಿ ಸಾಮಾನ್ಯರವರೆಗೆ ಜನ ಮೆಚ್ಚುಗೆ ಗಳಿಸಿರುತ್ತಾರೆ. ಇವರ ಈ ಕಾರ್ಯಕ್ಕೆ ಪ್ರತಿ ಬಾರಿ ಬೆಂಗವಲಾಗಿ ನಿಲ್ಲುತ್ತಿರುವವರು ಅಮೃತ ಸಂಜೀವಿನಿ ಹಾಗೂ ಕಳೆದ ಎರಡು ಯೋಜನೆಗೆ ಸಹಕರಿಸಿದರು ನೇತಾಜಿ ಬ್ರಿಗೇಡ್ ಸಂಸ್ಥೆಯ ಸದಸ್ಯರು. ಇನ್ನು ಮುಂದೆಯೂ ಇಂತಹ ಪರೋಪಕಾರಿ ನೊಂದವರ ಪಾಲಿನ ಆಶಾಕಿರಣ ಆಗುವಂತ ಯೋಜನೆಗಳನ್ನು ಮಾಡುತ್ತಾ ತನ್ನಿಂದ ಆದಷ್ಟು ಅಂತಹವರ ಮುಖದಲ್ಲಿ ನಗು ಮೂಡಿಸುವ ಪ್ರಯತ್ನ ಮಾಡುತ್ತೇನೆ ಎನ್ನುವ ವಿಕ್ಕಿ ಶೆಟ್ಟಿ ಹೇಗೆ ಸಮಾಜ ಸೇವೆ ಮಾಡಬಹುದೆಂದು ಯೋಚಿಸುವ ಯುವಕರ ಪಾಲಿಗೆ ಸ್ಫೂರ್ತಿ ಹಾಗೂ ಮಾದರಿಯಾಗಿದ್ದಾರೆ.


ನೇತಾಜಿ ಬ್ರಿಗೇಡ್, ಅಮೃತ ಸಂಜೀವಿನಿ, ಜೈ ತುಳುನಾಡ್ ಚಾರಿಟೇಬಲ್ ಟ್ರಸ್ಟ್‌, ವೀರಾಂಜನೇಯ ಸೇವಾ ಸಮಿತಿ, ಕರಾವಳಿ ಕೇಸರಿ ಯೂತ್ ಕ್ಲಬ್ ಬೆದ್ರ ಸಂಸ್ಥೆಗಳ ಸಕ್ರೀಯ ಸದಸ್ಯರಾಗಿರುವ ವಿಕಾಸ್ ಶೆಟ್ಟಿಗೆ ಪರಿವಾರ ಸಂಘಟನೆಗಳಲ್ಲೂ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿದ ಅನುಭವವಿದೆ. ನಮ್ಮ ತುಳುನಾಡ್ ಟ್ರಸ್ಟ್‌(ರಿ)ನ ಸಂಚಾಲಕರೂ ಆಗಿದ್ದು, ಟ್ರಸ್ಟ್‌’ನ ಯೋಜನೆಗಳಿಗೆ ಸಹಕಾರ ನೀಡುವುದರೊಂದಿಗೆ ಇತ್ತೀಚೆಗೆ ತುಳು ಲಿಪಿ ಕಲಿಯುವ ಹಾಗೂ ಸಾಮಾಜಿಕ ಜಾಲತಾಣವಾದ ಫೇಸ್’ಬುಕ್ ಗ್ರೂಪ್, ಪುಟಗಳಲ್ಲಿ ತುಳು ಲಿಪಿ ಕಲಿಸುವತ್ತಲೂ ತೊಡಗಿಸಿಕೊಂಡಿದ್ದಾರೆ.

ಒಳಿತು ಬಯಸೋ ಮನಸುಗಳು ಕಣ್ಣಿಂದ ದೂರ ಇದ್ರೆ ಕೆಡುಕು ಮಾಡೋ ಮನುಷ್ಯರು ಕಣ್ಮುಂದೆ ಇರ್ತಾರೆ ಅನ್ನೋ ಹಾಗೆ ವಿಕ್ಕಿ ಶೆಟ್ಟಿಯ ಉತ್ತಮ ಯೋಚನೆ ಹಾಗೂ ಯೋಜನೆಗೆ ಒದಗಿದ ಅಡ್ಡಿ ಆತಂಕಗಳು ಒಂದೆರಡಲ್ಲ. ಗೆಳೆಯರಂತೆ ಇರುವವರೂ ಕೆಲವೊಮ್ಮೆ ಆಡಿಕೊಂಡರೆ, ಇನ್ನು ಕೆಲವು ಸಾರಿ ನಿಸ್ವಾರ್ಥ ಸೇವೆಯಿಂದ ಹೆಸರು ಗಳಿಸುವ ಈತನ ಏಳಿಗೆ ಸಾಗಿಸದ ಕೆಲವರು ಸುಖಾಸುಮ್ಮನೆ ಈತನ ಬಗ್ಗೆ ಆರೋಪಗಳನ್ನು ಹುಟ್ಟುಹಾಕುವುದನ್ನೂ ಮಾಡುತ್ತಾರೆ. ಆದರೆ ಅವೆಲ್ಲಕ್ಕೂ ತಲೆ ಕೆಡಿಸಿಕೊಳ್ಳದೆ, ನೆಗೆಟಿವ್ ಕಾಮೆಂಟ್‌ಗಳನ್ನು ಗಣನೆಗೆ ತೆಗೆದುಕೊಳ್ಳದೆ, ಹಿರಿಯರ ಅನುಭವದ ಮಾತಾದ, ಮಧುರ ಮಾತುಗಳಿಂದ ಖಾರವಾದ ಮೆಣಸನ್ನೂ ಕೂಡಾ ಮಾರಬಹುದು. ಮಾತು ಕಠಿಣವಿದ್ದರೆ ಜೇನುತುಪ್ಪ ಮಾರುವುದೂ ಕಷ್ಟ ಎಂಬುದನ್ನು ಮನಗಂಡ ವಿಕ್ಕಿ ಮೌನ ಸಾಧಕನಂತೆ ತನ್ನ ಗಮ್ಯದತ್ತ ಸಾಗುತ್ತಿರುವುದು ಆತನ ಕಾರ್ಯಕ್ಷಮತೆಯನ್ನು ಸೂಚಿಸುತ್ತದೆ. ಎಲೆಯ ಮರೆಯ ಕಾಯಿಯಂತಿರುವ ವಿಕ್ಕಿಯನ್ನು ಮಡಿಲು ಸಮ್ಮಾನ್ ಕಾರ್ಯಕ್ರಮದಲ್ಲಿ ಶೇಖರ್ ಬೆಳಾಲ್‌ರವರು ಗುರುತಿಸಿದ್ದಾರೆ.


ವ್ಯಕ್ತಿ ಮಾತನಾಡುವುದಕ್ಕಿಂತ ಆತನ ಸಾಧನೆ ಮಾತನಾಡಬೇಕು ಎನ್ನುವಂತೆ ವಿಕ್ಕಿ ಶೆಟ್ಟಿ ಮಾತನಾಡುವುದು ತೀರಾ ಕಡಿಮೆ. ಮಾತನಾಡುವವರ ಮದ್ಯೆ ತಲೆಯಲ್ಲಾಡಿಸುತ್ತಾ, ನಗುನಗುತ್ತಾ ಇರುವ ವಿಕಾಸ್ ತಲೆಯಲ್ಲಿ ಏನು ಮಹತ್ಕಾರ್ಯ ಸಾಧಿಸಬೇಕೆಂಬ ಯೋಚನೆಗಳೇ ಸಾಗುತ್ತಿರುತ್ತದೆ. ವೇಷ ಧರಿಸಿ ಜನ ಸಾಗರದಲ್ಲಿ ನಿಲ್ಲುವ ವಿಕಾಸ್ ಶೆಟ್ಟಿಗೆ ಕಾಡುವ ಅಡ್ಡಿ ಆತಂಕಗಳು ಹಲವು. ಒಂದು ಕಡೆಯಿಂದ ಸುಡುವ ಬಿಸಿಲಿನ ಬೇಗೆ, ಇನ್ನೊಂದೆಡೆ ಹಾಕಿರುವ ವೇಷದ ಭಾರದಿಂದ ಅಥವಾ ಅದಕ್ಕೆ ಬಳಸಿದ ಗಮ್ ಮತ್ತು ಪೈಂಟ್ ವಾಸನೆಯ ಹಿಂಸೆ, ಮತ್ತೊಂದೆಡೆ ಜನಸಾಗರದ ನೂಕು ನುಗ್ಗಲು ಅಥವಾ ನಿಂತ ಸ್ಥಳ ಬದಲಾವಣೆಯ ಕಿರಿಕಿರಿ, ಮಗದೊಂದೆಡೆ ನಿಂತು ಹಾಗೂ ದೇಣಿಗೆ ಪೆಟ್ಟಿಗೆ ಹಿಡಿದು ಕೈ ಕಾಲು ನೋವು. ಎಲ್ಲಾ ಮುಗಿಸಿ ಮನೆಗೆ ಮರಳಿದ ಬಳಿಕ ಮೈ ಕೈ ಸೆಳೆತ, ಸಂಗ್ರಹಿಸಿದ ಧನವನ್ನು ಎಣಿಸಿ ಯೋಜನೆಯ ಫಲಾನುಭವಿಗಳ ಮನೆ ಮುಟ್ಟಿಸುವುದರ ಜೊತೆ ಹೊಟ್ಟೆಪಾಡಿನ ನಿತ್ಯ ಕಾಯಕಕ್ಕೆ ಹಾಜರಾಗಲೇ ಬೇಕಾದ ಅನಿವಾರ್ಯತೆ. ವೇಷ ಹಾಕಿದ ಮೇಲೆ ಹಸಿವು ಬಾಯಾರಿಕೆಗಳನ್ನೂ ಮರೆಯಬೇಕಾಗುತ್ತದೆ.

ಪುರಾಣ ಸಂಬಂಧಿ ಹಾಗೂ ತುಳುನಾಡು ಸಂಬಂಧಿ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಹಂಬಲದಲ್ಲಿರುವ ಹಾಗೂ ನಿರಂತರ ಹೊಸತನ ಕಲಿಯುವ ಕ್ರಿಯಾಶೀಲ ವ್ಯಕ್ತಿತ್ವ ಇವರದು. ಇನ್ನೊಬ್ಬರ ಕಷ್ಟಕ್ಕೆ ಮರುಗಿ ಕರಗಿ ನೀರಾಗುವ ಈ ಮುಗ್ಧ ತನ್ನವರೆನ್ನುವವರಿಗೆ ಸಹಾಯ ಮಾಡುವ ಅವಕಾಶ ಸಿಕ್ಕರೆ ಯಾವ ಕಷ್ಟವನ್ನೂ ಲೆಕ್ಕಿಸದೆ, ಎಷ್ಟು ದೂರವಾದರೂ ಕ್ರಮಿಸಿ, ಏನೇ ತ್ಯಾಗಕ್ಕೂ ಸಿದ್ಧನಾಗುತ್ತಾನೆ. ವಿಕಾಸ್ ವೇಷ ಧರಿಸಿ ಕಾರ್ಯಕ್ರಮದಲ್ಲಿ ಹಣ ಸಂಗ್ರಹಿಸುವುದು, ತನ್ನ ದುಡಿಮೆಯ ಸಂಪಾದನೆ, ಶ್ರಮ ಸಮಾಜಕ್ಕೆ ವಿನಿಯೋಗಿಸುವುದು ಬಿಟ್ಟು ಮನೆ ಕೆಲಸವನ್ನಷ್ಟೇ ನೋಡಿಕೊಂಡರೆ ಸಾಕೆನ್ನುವ ಹೆತ್ತವರು, ಜನರು ಮಗನ ಒಳ್ಳೆಯ ಕೆಲಸವನ್ನು ಪ್ರಶಂಸಿಸುವಾಗ ಅದನ್ನು ತಾವೂ ಪ್ರೋತ್ಸಾಹಿಸುತ್ತಾರೆ. ಮಗನಿಂದ ಯಾರಿಗೋ ಒಳ್ಳೆಯದಾಗುತ್ತಿದೆಯಲ್ಲ ಎಂದು ಸಂತೋಷ ಪಡುತ್ತಾರೆ.


ಅವನೊಬ್ಬ ಅಮೋಘ ಚೇತನ. ದಿನವಿಡೀ ಬಿಸಿಲಲ್ಲಿ ದಣಿದು, ಮಣ ಭಾರದ ದಿರಿಸು ಧರಿಸಿ ಜನಸಾಗರಲ್ಲಿ ಪುಟ್ಟದೊಂದು ಕಂದಮ್ಮಳಿಗಾಗಿ ಧನ ಸಂಗ್ರಹ ಮಾಡಿದ. ಸಂಗ್ರಹಿಸಿದ ದೇಣಿಗೆಯನ್ನು ನೇತಾಜಿ ಬ್ರಿಗೇಡ್ ಸಂಸ್ಥೆಯವರು ಕಂದಮ್ಮನ ಮಾತೆಗೆ ನೀಡುವಾಗ ತಾನು ಮನೆಯಲ್ಲಿರುವ ತನ್ನ ಮಾತೆಯ ಕೈಯಲ್ಲಿ ಬೈಸಿಕೊಳ್ಳುತ್ತಾ, ಎಲ್ಲೋ ಮನೆಯಲ್ಲೋ ಕೆಲಸದಲ್ಲೋ ಇದ್ದ. ಇದಲ್ಲವೇ ನಿಸ್ವಾರ್ಥತೆ. ಜೊತೆಗೆ ಅವನ ಕೈಂಕರ್ಯಕ್ಕೆ ತಮ್ಮ ಸೇವೆ ನೀಡಿದ ಅಮೃತ ಸಂಜೀವಿನಿ ಸಂಸ್ಥೆಯ ಯುವಕರು. ಅವರೂ ಅಷ್ಟೇ. ದೈನಂದಿನ ಕೆಲಸಕ್ಕೂ ಹೋಗದೆ ರಜೆ ಹಾಕಿ ಪೆಟ್ಟಿಗೆ ಹಿಡಿದು ಅವನ ಸಹಾಯಕ್ಕೆ ನಿಂತರು.

ದೇಣಿಗೆ ನೀಡುವ ಸಮಯ ಆ ಯುವಕರೂ ನಾಪತ್ತೆ. ಇದಕ್ಕಿಂತ ಮಿಗಿಲಾದ ಸೇವೆ ಎಲ್ಲಿಹುದು. ಮಾಡಿದ ಒಂದು ರೂಪಾಯಿ ದಾನವನ್ನು ದೊಡ್ಡದಾಗಿ ಬ್ಯಾನರ್ ಮಾಡಿ ಹಾಕಿಸುವವರ ನಡುವೆ ಇವರುಗಳು ಆದರ್ಶಪ್ರಾಯರು. ಬೇರೆಯವರಿಗೆ ಮಾದರಿ, ಸ್ಫೂರ್ತಿ, ಆದರ್ಶ ಎಲ್ಲವೂ…. ಅವರ ಸೇವಾ ಕೈಂಕರ್ಯದ ಬಗ್ಗೆ ಹೇಳಲು ಪದಗಳಿಲ್ಲ. ಅವರನ್ನು ಪಡೆದ ಹೆತ್ತವರು ಪುಣ್ಯವಂತರು. ಅವರಂಥ ಸೋದರರನ್ನು ಪಡೆದವರುಗಳು ಧನ್ಯರು. ಇದು ಅತಿಶಯೋಕ್ತಿಯಲ್ಲ. ನಿಜಕ್ಕೂ ಅವರೆಲ್ಲರನ್ನೂ ಭಗವಂತ ಜೊತೆಯಲ್ಲೇ ನಿಂತು ಮುನ್ನಡೆಸುತ್ತಾನೆ.

ಮಿತ್ರೇ ನಿವೇದಿತೇ ದುಃಖೇ ದುಃಖಿನೋ ಜಾಯತೇ ಲಘು ಭಾರಂ ಭಾರವಹಸ್ಯೇವ ಸ್ಕಂಧಯೋಃ ಪರಿವರ್ತತೇ॥ ಗೆಳೆಯನಲ್ಲಿ ಹೇಳಿಕೊಂಡ ದುಃಖದಿಂದಾಗಿ ದುಃಖ್ಖಿತನ ಮನಸ್ಸು ಹಗುರಾಗುತ್ತದೆ. ಹೊರೆಹೊತ್ತವರು ಹೆಗಲಿನಿಂದ ಹೆಗಲಿಗೆ ಬದಲಿಸಿಕೊಂಡಂತೆಯೇ! ನಮ್ಮ ಆಯಸ್ಸಿಗೆ ಅಂತ್ಯವಿದೆಯಾದರೂ ನಾವು ಮಾಡಿದ ಒಳ್ಳೆತನಕ್ಕೆಂದಿಗೂ ಅಂತ್ಯವಿಲ್ಲ. ಇನ್ನೊಬ್ಬರ ಬದುಕ ಆಶಾಕಿರಣವಾಗಿರುವ ನಿಮ್ಮ ಬದುಕೂ ಸುಖಮಯವಾಗಿರಲೆಂದು ನಮ್ಮೆಲ್ಲರ ಆಶಯ.


Get in Touch With Us info@kalpa.news Whatsapp: 9481252093

Tags: CancerDisguiseDonationHeart SurgeryKalpa NewsKannada News WebsiteLatestNewsKannadaNetaji BrigadeSouth KendraSpecial ArticleUdupiVicky Shetty BedraVikas Shettyಉಡುಪಿಕಲ್ಪ ನ್ಯೂಸ್ಕ್ಯಾನ್ಸರ್ತುಳುನಾಡ್ದೇಣಿಗೆನೇತಾಜಿ ಬ್ರಿಗೇಡ್ವಿಕಾಸ್ ಶೆಟ್ಟಿವಿಕ್ಕಿ ಶೆಟ್ಟಿ ಬೆದ್ರವೇಷಹೃದಯ ಚಿಕಿತ್ಸೆ
Previous Post

ನವಜಾತ ಶಿಶುಗಳ ಪ್ರಾಣ ಉಳಿಸುವ ಅಮೃತ ತಾಯಿಯ ಎದೆ ಹಾಲು

Next Post

ಕರ್ನಾಟಕ ಮಿನಿ ಒಲಿಂಪಿಕ್ಸ್‌: ಬಾಕ್ಸಿಂಗ್’ನಲ್ಲಿ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದ ಲಿಖಿತ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕರ್ನಾಟಕ ಮಿನಿ ಒಲಿಂಪಿಕ್ಸ್‌: ಬಾಕ್ಸಿಂಗ್’ನಲ್ಲಿ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದ ಲಿಖಿತ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮೇ 10ರಿಂದ ಮೂರು ದಿನ ಶ್ರೀ ನರಸಿಂಹ ಜಯಂತಿ ಉತ್ಸವ, ಬ್ರಹ್ಮರಥೋತ್ಸವ

May 9, 2025

ಪಾಕ್ ದಾಳಿ ವಿಫಲ | ವೈಮಾನಿಕ ದಾಳಿ ನಡೆಸಿ ಭಾರತ ದಿಟ್ಟ ಉತ್ತರ

May 9, 2025

ಪಾಕಿಸ್ತಾನದ ಪ್ರಧಾನಿ ನಿವಾಸದ ಬಳಿಯೇ ಭಾರತ ಅಟ್ಯಾಕ್ | ಭಾರಿ ಸ್ಫೋಟಕ್ಕೆ ನಡುಕ

May 8, 2025

ಪಾಕಿಸ್ತಾನಿಗಳನ್ನು ಗಡಿಪಾರು ಮಾಡಲು ರಾಜ್ಯಪಾಲರು ತಕ್ಷಣ ನಿರ್ದೇಶನ ನೀಡಬೇಕು: ದತ್ತಾತ್ರಿ ಮನವಿ

May 8, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮೇ 10ರಿಂದ ಮೂರು ದಿನ ಶ್ರೀ ನರಸಿಂಹ ಜಯಂತಿ ಉತ್ಸವ, ಬ್ರಹ್ಮರಥೋತ್ಸವ

May 9, 2025

ಪಾಕ್ ದಾಳಿ ವಿಫಲ | ವೈಮಾನಿಕ ದಾಳಿ ನಡೆಸಿ ಭಾರತ ದಿಟ್ಟ ಉತ್ತರ

May 9, 2025

ಪಾಕಿಸ್ತಾನದ ಪ್ರಧಾನಿ ನಿವಾಸದ ಬಳಿಯೇ ಭಾರತ ಅಟ್ಯಾಕ್ | ಭಾರಿ ಸ್ಫೋಟಕ್ಕೆ ನಡುಕ

May 8, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!