ಕಲ್ಪ ಮೀಡಿಯಾ ಹೌಸ್ | ವಿಜಯನಗರ |
ವಿಜಯನಗರದ ಮಾರುತಿ ಮೆಡಿಕಲ್ಸ್ ಮಾಲೀಕ, ಗೋಸೇವಕ ಮಹೇಂದ್ರ ಮುನ್ನೋತ್ ಅವರು ಗೋಮಾತೆಯ ಸೇವೆಗಾಗಿ ಸುಮಾರು 10ಕ್ಕೂ ಅಧಿಕ ಗೋಶಾಲೆಗಳಿಗೆ ಸುಮಾರು 44 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಇವರ ಮಾತಾ ಪಿತೃಗಳಾದ ದಿವಂಗತ ಮೋತಿಲಾಲ್ ಮುನ್ನೋತ್ ಜೈನ್ ವಿಮಲಾಬಾಯಿ ಮುನ್ನೋತ್ ಜೈನ್ ಅವರುಗಳ ಪುಣ್ಯತಿಥಿಯ ಹಿನ್ನೆಲೆಯಲ್ಲಿ ನೂರಾರು ಗಿಡಗಳನ್ನು ನೆಡುವ ಭಿವೃಕ್ಷಾರೋಹಣ ಕಾರ್ಯಕ್ರಮದೊಂದಿಗೆ ನಾಡಿನ ವಿವಿಧ ಗೋಶಾಲೆಗಳಿಗೆ ಅವಶ್ಯಕತೆಗೆ ಅನುಗುಣವಾಗಿ ದೇಣಿಗೆ ನೀಡಿದ್ದಾರೆ.
ಈ ಬಾರಿ ಸುಮಾರು ಹತ್ತಕ್ಕೂ ಹೆಚ್ಚು ಗೋಶಾಲೆಗಳನ್ನು ಒಳಗೊಂಡಂತೆ 44 ಲಕ್ಷ ರೂಪಾಯಿಗಳನ್ನು ಚೆಕ್ ಮುಖಾಂತರ ವಿತರಿಸಿದ್ದಾರೆ. ವಿವಿಧ ಗೋಶಾಲ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಚೆಕ್’ಗಳನ್ನು ಸ್ವೀಕರಿಸಿದ್ದಾರೆ.
Also read: ವೃತ್ತಿ ನಿರತರ ಒತ್ತಡ ನಿವಾರಿಸಲು ವೈ ಬ್ರೇಕ್ ಯೋಗ ಸಹಕಾರಿ: ಡಾ. ಮಹೇಶ್
ಈ ವೇಳೆ ಮಾತನಾಡಿದ ಮುನ್ನೋತ್, ಮೊನ್ನೆ ಗೋಹತ್ಯೆ ನಿಷೇಧ ಹಿಂಪಡೆಯುವ ಸಂಬಂಧ ಪಶು ಸಂಗೋಪನಾ ಸಚಿವರು ನೀಡಿರುವ ಹೇಳಿಕೆ ಗೋಹತ್ಯೆಯ ಪರವಾಗಿರುವುದು ಕರ್ನಾಟಕ ರಾಜ್ಯದ ದೌರ್ಭಾಗ್ಯ. ಗೋ ಸೇವೆ, ರಕ್ಷಣೆ ಯಾವುದೇ ಒಂದು ಸಮುದಾಯದವರದ್ದಲ್ಲ, ಮನುಕುಲದ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಅಮೃತಧಾರ ಗೋಶಾಲೆಯ ಅಧ್ಯಕ್ಷ ಶರ್ಮಾ, ಸಂಚಾಲಕ ಸಂತೋಷ್ ತಿವಾರಿ, ವಾಟ್ಸ್ ಫೌಂಡೇಶನ್ ಮುಖ್ಯಸ್ಥ ಆನಂದ ಕೃಷ್ಣ ದಾಸ್, ಕೃಪಾ ಲವಿಂಗ್ ಅನಿಮಲ್ಸ್ ಸೆಂಟರ್’ನ ಮಹೇಂದ್ರ ಜೈನ್, ಅರಸೀಕೆರೆ ಗೋಶಾಲೆಯ ಗೋ ಪರಿವಾರದ ಪರಸ್ ಜೈನ್, ಕ್ಯೂಪ ಸಂಸ್ಥೆಯ ಡಾ. ಪ್ರಾಗ್ನೇಕರ್, ಧ್ಯಾನ್ ಫೌಂಡೇಶನ್’ನ ಸಹನಾ ಮತ್ತು ರೀಣು, ಓಂಕಾರ್ ಗೋಶಾಲದ ಮಲಿಕಾರ್ಜುನ್, ಶಿವ ಗೋಸೇವಾ ಚಾರಿಟಬಲ್ ಟ್ರಸ್ಟ್’ನ ಹನುಮಾನ್ ಮಾಲಿ, ಮೋತಿಲಾಲ್ ಮಾಲಿ, ಸರ್ವ ಪ್ರಾಣಿ ಸಂಸ್ಥೆ, ಮಾತೇಶ್ವರಿ ಭಕ್ತ ಮಂಡಳದ ಭಕ್ತಾದಿಗಳು, ಚಿಕ್ಕಮಗಳೂರಿನ ಕಾಮಧೇನು ಗೋಶಾಲೆಯ ಪ್ರತಿನಿಧಿ, ಗೋಭಕ್ತರಾದ ಗೌತಮ್ ಶರ್ಮಾ, ಉಪೇಂದ್ರ ಕುಮಾರ್ ಸೇರಿದಂತೆ ಗೋಸೇವಕರು ಗೋಶಾಲೆಗಳ ಫಲಾನುಬಾವಿಗಳಾಗಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















