ಕಲ್ಪ ಮೀಡಿಯಾ ಹೌಸ್ | ವಿಜಯನಗರ |
ರೈಲ್ವೆ ಗೇಟ್ ಹಾಕಿದ್ದರಿಂದ ಹೃದಯಾಘಾತವಾಗಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ಹೊಸಪೇಟೆ ತಾಲೂಕಿನಲ್ಲಿ ನಡೆದಿದೆ.
ರೈಲ್ವೆ ಇಲಾಖೆಯ 88 ಮುದ್ಲಾಪುರದ ನಿವಾಸಿ ಬಸವರಾಜ ಅವರಿಗೆ ಹೃದಯಾಘಾತವಾಗಿತ್ತು, ಈ ವೇಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತರುವಾಗ ರೈಲ್ವೆ ಗೇಟ್ ಹಾಕಲಾಗಿತ್ತು. ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಎಷ್ಟೆ ಮನವಿ ಮಾಡಿದರೂ ಗೇಟ್ ಓಪನ್ ಮಾಡಲು ವಿಳಂಬ ಮಾಡಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
88 ಮುದ್ಲಾಪುರದ ನಗರಸಭೆ ಸದಸ್ಯ ಮಾತನಾಡಿ, ಸುಮಾರು 8 ಹಳ್ಳಿಗಳ ಜನ ರು ನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಈ ಕೂಡಲೇ ಫ್ಲೈವೋವರ್ ಮಾಡಬೇಕೆಂದು ಆಗ್ರಹಿಸಿದರು.
ದಿನಕ್ಕೆ ಹತ್ತಾರು ಬಾರಿ ಗೂಡ್ಸ್ ಗಳು ಮತ್ತು ರೈಲುಗಳು ಸಂಚರಿಸುತ್ತಿದ್ದು, ಈ ಭಾಗದಲ್ಲಿರುವ ಕೆಲವು ಊರುಗಳಾದ 88 ಮುದ್ಲಾಪುರ, ಬೆಳಗೋಡು, ಕಳ್ಳಿರಾಂಪುರ, ಬಸವನದುರ್ಗ, ನರಸಾಪುರ, ಜಾಗಿರ್ದಾರ್ ಬಂಡೆ, ಮತ್ತು ನಾಗೇನಹಳ್ಳಿ ಗ್ರಾಮಗಳ ದಿನನಿತ್ಯ ಅಗತ್ಯ ವಸ್ತುಗಳ ಖರೀದಿಗೆ ಸಾವು ಬದುಕಿನ ನಡುವೆ ಸಾರ್ವಜನಿಕರು ಓಡಾಡುತ್ತಿದ್ದಾರೆ. ಮಕ್ಕಳು ವಿದ್ಯಾಭ್ಯಾಸ ಮಾಡುವುದಕ್ಕೆ, ಆಸ್ಪತ್ರೆಗೆ ತೆರಳುವುದಕ್ಕೆ ರೈಲ್ವೆ ಗೇಟ್ ಮುಖಾಂತರ ಹಾದು ಹೋಗುವ ಅನಿವಾರ್ಯ ಇದೆ.
Also read: ಹೆರಿಗೆ ನೋವಿನಿಂದ ನರಳಾಡುತ್ತಿದ್ದರೂ ಕರ್ತವ್ಯ ಮರೆತ ವೈದ್ಯಕೀಯ ಸಿಬ್ಬಂದಿ!
ಹೆರಿಗೆ ನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ತೆರಳುವುದಕ್ಕೆ ಮುಂದಾದಾಗ ಗೇಟ್ ಹಾಕಿದ್ದರಿಂದ ಗರ್ಭಿಣಿಯರು ಹಸುಗೂಸು ಮೃತ ಪಟ್ಟ ಸಾಕಷ್ಟು ಉದಾಹರಣೆಗಳಿವೆ. ಈ ಕೂಡಲೇ ರೈಲ್ವೆ ಫ್ಲೈವೋವರ್ ನಿರ್ಮಿಸುವಂತೆ ಈ ಭಾಗದ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















