ಕಲ್ಪ ಮೀಡಿಯಾ ಹೌಸ್ | ವಿಜಯನಗರ |
ಭಾನುವಾರದಿಂದ ಹಂಪಿಯಲ್ಲಿ ಜಿ20 ಶೃಂಗಸಭೆ G20 Summit ಆರಂಭವಾಗಲಿದ್ದು, ಸುಮಾರು 52 ದೇಶಗಳಿಂದ ಬರಲಿರುವ ಗಣ್ಯರ ಭದ್ರತೆಗಾಗಿ 100 ಸಿಸಿಟಿವಿ ಕ್ಯಾಮೆರಾಗಳು ಹಾಗೂ ಕೇಂದ್ರೀಯ ಭದ್ರತಾಪಡೆಗಳು, ಎಸ್ಪಿಗಳು, ಡಿವೈಎಸ್ಪಿಗಳು ಸೇರಿದಂತೆ 300 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.
ಆಯ್ದ ಸ್ಥಳಗಳಲ್ಲಿ 100 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಮತ್ತು ಹಾನಿಗೊಳಗಾದ ಕೆಲವು ಕ್ಯಾಮೆರಾಗಳನ್ನು ಬದಲಾಯಿಸಿದ್ದೇವೆ. 2 ಎಸ್ಪಿಗಳು, 5 ಡಿವೈಎಸ್ಪಿಗಳು ಮತ್ತು ಸುಮಾರು 300 ಪೊಲೀಸರು ಹಂಪಿಯಲ್ಲಿ ಪ್ರತಿನಿಧಿಗಳ ಭದ್ರತೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಮಾವೇಶದ ಸಮಯದಲ್ಲಿ ಹಂಪಿಗೆ ಪ್ರವಾಸಿಗರ ಪ್ರವೇಶಕ್ಕೆ ಯಾವುದೇ ನಿರ್ಬಂಧವಿಲ್ಲ ಹೇರಲಾಗಿಲ್ಲ. ಆದರೆ, ಶೃಂಗಸಭೆ ನಡೆಯುವ ಸ್ಥಳಗಳಿಗೆ ಇತರರ ಪ್ರವೇಶಕ್ಕೆ ಅನುಮತಿಯಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ
Also read: ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡನೀಯ: ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ ವಿಷಾದ
ನೀತಿ ಆಯೋಗದ ಸಿಇಒ ಅಮಿತ್ಭಾ ಕಾಂತ್ ಮತ್ತು ಆಂತರಿಕ ಭದ್ರತಾ ವಿಭಾಗದ ಐಜಿಪಿ ವಿಪುಲ್ ಕುಮಾರ್ ಈಗಾಗಲೇ ಹಂಪಿಗೆ ಭೇಟಿ ಪರಿಶೀಲನೆ ನಡೆಸಿದ್ದು, ವಿಜಯನಗರ ಜಿಲ್ಲಾಡಳಿತ ಮಂಡಳಿಯು ಕಳೆದ ಮೂರು ತಿಂಗಳಿನಿಂದ ಜಿ20 ಶೃಂಗಸಭೆಗೆ ಸಿದ್ಧತೆ ನಡೆಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post