ಕಲ್ಪ ಮೀಡಿಯಾ ಹೌಸ್ | ವಿಜಯನಗರ |
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿಜಯನಗರ Vijayanagara ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಪಣ ತೊಟ್ಟಿದ್ದು, ರಾಜಶೇಖರ್ ಹಿಟ್ನಾಳ್ Rajashekar Hitnal ಅವರೇ ಪಕ್ಷದ ಅಭ್ಯರ್ಥಿಯಾಗುತ್ತಾರಾ ಎಂಬ ವಿಚಾರ ಬಿಸಿಬಿಸಿ ಚರ್ಚೆಯಾಗುತ್ತಿದೆ.
ಕಳೆದ ಒಂದು ತಿಂಗಳಲ್ಲಿ ಎರಡನೆಯ ಬಾರಿಗೆ ಸತೀಶ್ ಜಾರಕಿಹೂಳೆ ಮತ್ತು ಅವರ ಅಭಿಮಾನಿ ಬಳಗ ವಿಜಯನಗರ ಕ್ಷೇತ್ರದಲ್ಲಿ ಸಭೆಯನ್ನು ಆಯೋಜಿಸಿ ಮತದಾರರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಕೊಪ್ಪಳ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರು, ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಇವರ ಸಹೋದರರಾದ ರಾಜಶೇಖರ್ ಹಿಟ್ನಾಳ್ ಅವರು ಈ ಭಾಗದಲ್ಲಿ ಆಯೋಜಿಸುತ್ತಿರುವ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕ್ರಮದಲ್ಲಿ ಮುಂದಾಗಿ ಓಡಾಡುವುದನ್ನು ನೋಡಿ ಈ ಬಾರಿ ವಿಜಯನಗರ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಎಂದು ಎಲ್ಲಾ ಮತದಾರರು ಮಾತನಾಡುತ್ತಿದ್ದಾರೆ.
ಮಾರ್ಚ್ 24 ರಂದು ಶ್ರೀ ಸಾಯಿ ಲೀಲಾ ಕಲ್ಯಾಣ ಮಂದಿರದಲ್ಲಿ ಡಿಜಿಟಲ್ ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸತೀಶ್ ಜಾರಕಿಹೂಳೆ ಮತ್ತು ಡಿ.ಕೆ. ಶಿವಕೂಮಾರ್ ಹಾಜರಾಗಿ ಪ್ರಗತಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈಗಾಗಲೇ ರಾಜಶೇಖರ್ ಹಿಟ್ನಾಳ್ ಅವರಿಗೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಪಾರಂ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಕಾಂಗ್ರೆಸ್ ಮುಖಂಡರು ಅಂದೇ ವಿಜಯನಗರ ಕ್ಷೇತ್ರದಿಂದ ಹೆಸರನ್ನು ಸೂಚಿಸುವ ಸಾಧ್ಯತೆ ಇದೆ.
Also read: ಗುಡವಿ ಪಕ್ಷಿಧಾಮದಲ್ಲಿ ಅಕ್ರಮ ವೈನ್ ಶಾಪ್, ಅನೈತಿಕ ಚಟುವಟಿಕೆ ತಡೆಯುವಂತೆ ಡಿಸಿಗೆ ಮನವಿ
ಆನಂದ್ ಸಿಂಗ್ ಅವರು ಈ ಬಾರಿ ಅವರ ಮಗ ಸಿದ್ದಾರ್ಥ ಸಿಂಗ್ ಅವರನ್ನು ವಿಜಯನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ನೆಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ಕಳುಹಿಸುತ್ತಿದ್ದಾರೆ. ಈ ಬಾರಿ ಅನಂದ್ ಸಿಂಗ್ ಅವರು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಮಗ ಸಿದ್ದಾರ್ಥ ಸಿಂಗ್ ಇಲ್ಲವೇ ಅವರ ಸಂಬಂಧಿಗಳಿಗೆ ವಿಜಯನಗರ ಕ್ಷೇತ್ರದ ಅಭ್ಯರ್ಥಿ ಸ್ಥಾನ ನೀಡುವ ಮಾತುಗಳು ಕೇಳಿಬರುತ್ತಿವೆ. ರಾಜಕೀಯ ಲೆಕ್ಕಾಚಾರ ಇನ್ನೂ ಸರಿಯಾಗಿ ಯಾರಿಗೂ ತಿಳಿದಿಲ್ಲ. ವಿಜಯನಗರ ಕ್ಷೇತ್ರದಲ್ಲಿ ಸಂಭವನೀಯ ಪಟ್ಟಿಯಲ್ಲಿ ರಾಜಶೇಖರ್ ಹಿಟ್ನಾಳ್ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಪಕ್ಷದಿಂದ ಸಿದ್ದಾರ್ಥ ಸಿಂಗ್ ಮೊದಲ ಸ್ಥಾನದಲ್ಲಿ ಇರುತ್ತಾರೆ. ಇನ್ನೂ ಈ ಎರಡು ಪಕ್ಷದ ನಡುವೆ ಜೆಡಿಎಸ್ ಯಾರನ್ನು ಅಭ್ಯರ್ಥಿಯಾಗಿ ಕರೆ ತರುತ್ತಾರೆ ಅಥವಾ ಯಾರಿಗೆ ಬೆಂಬಲವನ್ನು ಸೂಚಿಸುತ್ತಾರೆ ಕಾದು ನೋಡಬೇಕಿದೆ.
ಒಟ್ಟಾರೆ ಈ ಬಾರಿ ವಿಜಯನಗರ ಕ್ಷೇತ್ರದಲ್ಲಿ ಎಲ್ಲಾ ಕಡೆ ಕಾಂಗ್ರೇಸ್ ಪಕ್ಷದ ಮುಖಂಡರಾದ ರಾಜಶೇಖರ್ ಹಿಟ್ನಾಳ್ ಅವರ ಭಾವಚಿತ್ರ ಇರುವ ಬ್ಯಾನರ್ ಕಳೆದ ಒಂದು ತಿಂಗಳಿಂದ ಎಲ್ಲಾ ಕಡೆ ಎದ್ದು ನಿಂತಿದೆ. ಒನ್ನಿ ಕಾದು ನೋಡಬೇಕು ವಿಜಯನಗರ ಸಾಮ್ರಾಜ್ಯ ಯಾರ ಕೈಯಲ್ಲಿ ಅರಳುವುದು.
ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಆಗಮಿಸಲಿದ್ದು, ಈ ಸಭೆಯಲ್ಲೇ ಪಕ್ಷದ ಅಭ್ಯರ್ಥಿಯ ಹೆಸರು ಅಂತಿಮಗೊಳಿಸುವುದು ಬಹುತೇಕ ಖಚಿತ ಎನ್ನಲಾಗಿದೆ.
(ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ/ವಿಜಯನಗರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post