ಕಲ್ಪ ಮೀಡಿಯಾ ಹೌಸ್ | ವಿಜಯನಗರ |
ನಗರದ ಮೂರು ದ್ವಿಪಥದ ರಸ್ತೆಗಳನ್ನು ಪ್ರವಾಸೋದ್ಯಮ ಇಲಾಖೆ ಮತ್ತು ಡಿಎಂಎಫ್ ಯೋಜನೆ ಅಡಿ ಚತುಷ್ಪಥ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ರಸ್ತೆಗಳ ಅಗಲೀಕರಣ ಸಂದರ್ಭದಲ್ಲಿ ಸುಮಾರು 900 ಮರಗಳನ್ನು ಕಟಾವು ಮಾಡುವ ಪ್ರಕ್ರಿಯೆಗೆ ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೊಸಪೇಟೆ ತಾಲೂಕ ಸಂಡೂರ-ಸಿರುಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಒರುವ 149 ಮರಗಳು, ಅನಂತಶಯನ ಗುಡಿಯಿಂದ ಕಮಲಾಪುರದವರೆಗೆ ಬಲಭಾಗದ 237 ಮರಗಳು ಮತ್ತು ಎಡಭಾಗದ 120 ಮರಗಳು, ಹೊಸಪೇಟೆ ನಗರದ ಹೆಚ್ ಎಲ್ ಸಿ ಕಾಲುವೆಯಿಂದ ಇಂಗಳಿಗಿ ಕ್ರಾಸ್‍ವರೆಗೆ ಚತುಷ್ಪತ ರಸ್ತೆಯ ಬಲಭಾಗದ 137 ಮರಗಳು, ಎಡಭಾಗ 120 ಮರಗಳು, ಸಾಯಿಬಾಬಾ ಸರ್ಕಲ್‍ನಿಂದ ಟಿ.ಬಿ ಡ್ಯಾಂ ವರೆಗೆ ಬಲಭಾಗದ 95 ಮತ್ತು ಎಡಭಾಗ 166 ಮರಗಳನ್ನು ಕಡಿಯುವ ಉದ್ದೇಶಿಸಲಾಗಿದೆ ಎಂದು ಬಳ್ಳಾರಿ ಉಪವಿಭಾಗ ಅರಣ್ಯಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಈ ಮಿತಿಮೀರಿದ ಮರಗಳನ್ನು ಕಡಿಯುವುದನ್ನು ತಡೆಯಲು ಪರಿಸರ ಪ್ರೇಮಿಗಳು ಸಹಿ ಹಾಕುವ ಮೂಲಕ ಮರ ಕಡಿಯುವುದನ್ನು ತಡೆ ಕೋರಿ ಮನವಿ ಸಲ್ಲಿಸಿದ್ದಾರೆ.
ಈ ದ್ವಿಪಥದ ರಸ್ತೆಗಳ ಕಾಮಗಾರಿಗಳ ಬಲಭಾಗ ಮತ್ತು ಎಡಭಾಗದಲ್ಲಿ ರಸ್ತೆ ಬದಿ ಮರಗಳು ಅಗಲೀಕರಣಕ್ಕೆ ಅಡ್ಡಿಬರುವುದರಿಂದ ಮರಗಳ ಕಟಾವಣೆಗೆ ಹೊಸಪೇಟೆ ಲೋಕೋಪಯೋಗಿ ಇಲಾಖೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ತಿಳಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾ ವತಿಯಿಂದ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ರಸ್ತೆಬದಿ ಮರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ರಸ್ತೆ ಅಗಲೀಕರಣ ಸಂಧರ್ಭದಲ್ಲಿ ಕಟಾವಣೆಯಿಂದ ಉಳಿಸಬಹುದಾದ ಮರಗಳನ್ನು ಹೊರತುಪಡಿಸಿ ಉಳಿದ ಮರಗಳಿಗೆ ಸಂಖ್ಯೆ ನಮೂದಿಸಿ ಮರ ಕಡಿಯುವ ಪ್ರಕ್ರಿಯೆಯನ್ನು ಮಾಡಲಾಗುತ್ತದೆ ಎಂದು ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಸದ್ಯದಲ್ಲಿ 900 ಮರ ಎಂದು ಲೆಕ್ಕಹಾಕಲಾಗಿದೆ. ಆದರೆ ಕೆಲಸ ಪ್ರಾರಂಭವಾದ ನಂತರ ಇದರ ಲೆಕ್ಕ 1500 ಕ್ಕೂ ಹೆಚ್ಚು ಮರ ಕಡಿಯುವ ಸಾಧ್ಯತೆ ಇರುತ್ತದೆ. ಈ ದೂಡ್ಡ ಪ್ರಮಾಣದಲ್ಲಿ ಕತ್ತರಿಸುವ ಅಗತ್ಯವಿದೆಯೇ ವಿಜಯನಗರ ಹೊಸಪೇಟೆ ಅಭಿವೃದ್ಧಿಯಾಗಬೇಕು ಹಾಗೂ ನಮ್ಮ ಮರಗಿಡಗಳು ಸಹ ಉಳಿಯಬೇಕು ಇದರಿಂದ ಪರಿಸರವು ಸಹ ಉಳಿಯುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮತ್ತೊಮ್ಮೆ ಸಂಬಂಧಿಸಿದ ಇಲಾಖೆ ಸರ್ವೇ ಮಾಡಿ ಮರಗಳನ್ನು ಕಡಿಯದೆ ಅಭಿವೃದ್ಧಿ ಮಾಡಲು ಸಾಧ್ಯತೆ ಇದೆ ಮತ್ತು ಮರಗಳನ್ನು ಕಡಿಯುವಾಗ ಅವುಗಳನ್ನು ಬೇರೆಡೆಗೆ ಬದಲಾಯಿಸಿ ಮರವನ್ನು ಉಳಿಸುವ ಕಾರ್ಯಕ್ರಮ ಮುಂದಾಗುವಂತೆ ಒತ್ತಾಯಿಸಲಾಗಿದೆ.
ಸಚಿವ ಆನಂದ್ ಸಿಂಗ್ ರವರು ಪ್ರಕೃತಿ ಸಂರಕ್ಷಕರಾಗಲು ಮತ್ತು 1024 ಮರಗಳನ್ನು ಉಳಿಸುವಂತೆ ವಿಜಯನಗರ ಜಿಲ್ಲೆಯ ಸಮಸ್ತ ಪರಿಸರ ಪ್ರೇಮಿಗಳು ವಿನಂತಿಸಿದ್ದಾರೆ.
ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post