ಕಲ್ಪ ಮೀಡಿಯಾ ಹೌಸ್ | ವಿಜಯಪುರ |
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಮಹಾರಾಷ್ಟ್ರ ಸಚಿವರು ಭಾರೀ ಅನಾಹುತದಿಂದ ಪಾರಾದ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ತಾಂಡಾದಲ್ಲಿ ಭಾನುವಾರ ಆಯೋಜನೆಗೊಂಡಿದ್ದ ದುರ್ಗಾದೇವಿ ಜಾತ್ರೆ ವೇದಿಕೆ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು 10ಕ್ಕೂ ಅಧಿಕ ಮಡಿಕೆಗಳನ್ನು ಒಂದರ ಮೇಲೊಂದರಂತೆ ತಲೆಯ ಮೇಲಿಟ್ಟುಕೊಂಡು ಗ್ಲಾಸ್ ಮೇಲೇ ನಿಂತು ನೃತ್ಯ ಮಾಡುತ್ತಿದ್ದ ವೇಳೆ ಮಡಿಕೆಗಳು ಬಿದ್ದಿದ್ದು, ಮಹಾರಾಷ್ಟ್ರ ದ ಆಹಾರ ಸಚಿವ ಸಂಜಯ್ ಬಾವು ರಾಠೋಡ್ ಬಚಾವ್ Minister Sanjaya Bavu Rathod ಆಗಿದ್ದಾರೆ.
ಮಂಟಪದ ಮೇಲ್ಭಾಗ ತಗುಲಿ ಏಕಾಏಕಿ ಕೆಳಗೆ ಮಡಿಕೆಗಳು ಸಚಿವರ ಕುಳಿತ ಜಾಗದಲ್ಲೇ ಮಡಿಕೆಗಳು ಬಿದ್ದವು. ಪಕ್ಕದಲ್ಲಿ ಕುಳಿತ ವ್ಯಕ್ತಿಗಳು ಮಡಿಕೆಗಳಿಗೆ ಕೈ ಅಡ್ಡ ಹಿಡಿದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿ ಸಚಿವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.
Also read: ತಂದೆ-ಮಕ್ಕಳ ಸಂಭ್ರಮ ಉತ್ಸಾಹ ಹೆಚ್ಚಿಸಿದೆ: ಡಿ. ಎಸ್. ಅರುಣ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post