ಕಲ್ಪ ಮೀಡಿಯಾ ಹೌಸ್ | ಮೊರೆನಾ |
ಪ್ರೀತಿಸುತ್ತಿದ್ದ ಜೋಡಿಯೊಂದನ್ನು ಯುವತಿಯ ಹೆತ್ತವರು ಕೊಂದು ಮೊಸಳೆಗಳಿಗೆ ಆಹಾರವಾಗಿ ಬಿಸಾರುವ ಆಘಾತಕಾರಿ ಘಟನೆ ಮಧ್ಯಪ್ರದೇಶ ರಾಜ್ಯದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಹಿನ್ನೆಲೆ
ರಾಧೆ ಶ್ಯಾಂ ತೋಮರ್ (21), ಶಿವಾನಿ ತೋಮರ್ (18) ಪರಸ್ಪರ ಪ್ರೀತಿಸುತ್ತಿದ್ದು, ಇವರಿಬ್ಬರು ಒಟ್ಟಿಗೆ ಇದ್ದಾಗ ಅವರನ್ನು ಹಿಡಿದ ಯುವತಿ ಮನೆಯವರು ಇಬ್ಬರ ಮೇಲೂ ಗುಂಡು ಹಾರಿಸಿ ಕೊಂದಿದ್ದಾರೆ. ನಂತರ ಇಬ್ಬರ ಶವಕ್ಕೆ ಭಾರವಾದ ಕಲ್ಲುಗಳನ್ನು ಕಟ್ಟಿ, ಮೊಸಳೆಗಳ ಸಂಚಾರ ಇರುವ ಚಂಬಲ್ ನದಿಯ ನಿರ್ಜನ ಪ್ರದೇಶಕ್ಕೆ ಹೋಗಿ ನದಿಯೊಳಗೆ ಶವಗಳನ್ನು ಎಸೆದಿದ್ದು, ಶವಗಳನ್ನು ಮೊಸಳೆಗಳು ತಿನ್ನಲಿ ಎನ್ನುವುದು ಇವರ ಉದ್ದೇಶವಾಗಿತ್ತು ಎಂದು ಆರೋಪಿಗಳು ಹೇಳಿದ್ದಾರೆ.
ಕೃತ್ಯ ಎರಡು ವಾರಗಳ ನಂತರ ಬೆಳಕಿಗೆ ಬಂದಿದ್ದು, ಯುವಕನ ಹೆತ್ತವರು ಶಿವಾನಿ ತೋಮರ್‌ನ ಮನೆಯವರ ವಿರುದ್ಧ ಆರೋಪ ಮಾಡಿದ ಹಿನ್ನೆಲೆಯಲ್ಲಿ ಶಿವಾನಿ ತೋಮರ್‌ನ ಕುಟುಂಬಸ್ಥರನ್ನು ವಶಕ್ಕೆ ಪಡೆದ ಪೊಲೀಸರು, ವಿಚಾರಣೆ ನಡೆಸಿದಾಗ ಈ ಕೃತ್ಯ ಬಯಲಾಗಿದೆ ಎನ್ನಲಾಗಿದೆ.
Also read: ಭಾರೀ ಅನಾಹುತದಿಂದ ಪಾರಾದ ಮಹಾರಾಷ್ಟ್ರ ಸಚಿವರು: ಏನಿದು ಘಟನೆ?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post