ಕಲ್ಪ ಮೀಡಿಯಾ ಹೌಸ್ | ವಿಜಯಪುರ |
ವಯೋಸಹಜ ಅನಾರೋಗ್ಯೀದಮ ಬಳಲುತ್ತಿರುವ ಇಲ್ಲಿನ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಗಳು Siddeshwara swamy ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾತನಾಡಿರುವ ಡಾ.ಎಸ್.ಜಿ. ಪಾಟೀಲ್, ಸ್ವಾಮಿಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರ ಆರೋಗ್ಯ ಉತ್ತಮವಾಗುತ್ತಿದೆ. ಹಾಲು ಹಾಗೂ ಹಣ್ಣನ್ನು ಅವರು ಸೇವಿಸುತ್ತಿದ್ದಾರೆ. ಭಕ್ತರು ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಇನ್ನು, ಸಿದ್ಧೇಶ್ವರ ಸ್ವಾಮಿಗಳ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಪ್ರಮುಖರಾದ ಎಂ.ಬಿ. ಪಾಟೀಲ್, ಪ್ರಕಾಶ್ ಹುಕ್ಕೇರಿ ಸೇರಿದಂತೆ ಹಲವು ಗಣ್ಯರು ಆಶ್ರಮಕ್ಕೆ ಆಗಮಿಸಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಅಲ್ಲದೇ, ರಾಜ್ಯ ಮೂಲೆ ಮೂಲೆಗಳಿಂದ ಭಕ್ತರು ವಿಜಯಪುರಕ್ಕೆ ಆತಂಕದಿಂದ ಆಗಮಿಸುತ್ತಿದ್ದು, ಆಶ್ರಮದ ಬಳಿಯಲ್ಲಿ ಸಾವಿರಾರು ಮಂದಿ ನೆರೆದಿದ್ದಾರೆ.
Also read: ಆಸ್ಟೇಲಿಯಾದಲ್ಲಿ ಉಡುಪಿ ಪುತ್ತಿಗೆ ಶ್ರೀಗಳು: ವೈಕುಂಠ ಏಕಾದಶಿ ನಿಮಿತ್ತ ತಪ್ತಮುದ್ರಾಧಾರಣೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post