ಕಲ್ಪ ಮೀಡಿಯಾ ಹೌಸ್ | ವಿಜಯಪುರ |
ಐತಿಹಾಸಿಕ ಭೂತನಾಳ ಕೆರೆಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಯ ಉತ್ತರ ಮತ್ತು ಪಶ್ಚಿಮ ಭಾಗದ 10 ವಾರ್ಡಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ನಗರದಲ್ಲಿ ಕುಡಿಯುವ ನೀರಿಗೆ ಎಳ್ಳಷ್ಟು ತೊಂದರೆ ಆಗುವುದಿಲ್ಲ ಎಂದು ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ Basavana Gowda Patil Yatnal ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೃಷ್ಣಾ ನದಿಯಿಂದ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿರುವ ನಗರ ಹೊರವಲಯದ ಐತಿಹಾಸಿಕ ಭೂತನಾಳ ಕೆರೆಗೆ ನೀರು ತುಂಬಿಸುತ್ತಿದ್ದು, ಶೀಘ್ರ ಕೆರೆ ಸಂಪೂರ್ಣ ತುಂಬಲಿದೆ. ಇದರಿಂದ ವಿಜಯಪುರ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಆಗುವುದಿಲ್ಲ. ಸಾರ್ವಜನಿಕರು ಕುಡಿಯುವ ನೀರಿಗಾಗಿ ಆತಂಕ ಪಡುವ ಅಗತ್ಯವಿಲ್ಲ. ಸಮರ್ಪಕವಾಗಿ ನೀರು ಸರಬರಾಜು ಆಗಲಿದೆ.
ಪ್ರಸಕ್ತ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯದೆ ಇರುವುದರಿಂದ ಕೆರೆಗೆ ನೀರು ಹರಿದು ಬರದೆ ಇರುವ ಕಾರಣ ಕೆರೆಯಲ್ಲಿ ನೀರು ಡೆಡ್ ಸ್ಟೋರೇಜ್ ಗಿಂತ ಕಡಿಮೆ ಆಗಿತ್ತು. ಆಲಮಟ್ಟಿ ಜಲಾಶಯ ಹಿನ್ನಿರಿನಿಂದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಲಿಂಗದಳ್ಳಿ ಜಾಕವೆಲ್ ದಿಂದ ಕೆರೆಗೆ ನೀರು ತುಂಬಿಸುವ ಕಾರ್ಯ ಆರಂಭಗೊಂಡಿದ್ದು, ಶೀಘ್ರದಲ್ಲೇ ಭೂತನಾಳ ಕೆರೆ ಸಂಪೂರ್ಣ ಭರ್ತಿ ಆಗಲಿದೆ. ಇದರಿಂದ ನಗರದ ಶೇ 30 ರಷ್ಟು ಭಾಗಕ್ಕೆ ನೀರು ಪೂರೈಕೆಯಾಗುತ್ತದೆ. ಉಳಿದ ಶೇ 70 ರಷ್ಟು ಭಾಗಕ್ಕೆ ಕೊಲ್ಹಾರ್ ಜಾಕವೆಲ್ ದಿಂದ ನೀರು ಪೂರೈಕೆ ಆಗುತ್ತದೆ ನಗರ ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Also read: ವಿಐಎಸ್‌ಎಲ್ ಪುನರಾರಂಭ ಹಿನ್ನೆಲೆ: ವಾಣಿಜ್ಯ, ಕೈಗಾರಿಕಾ ಸಂಘದಿಂದ ಸಂಸದ ರಾಘವೇಂದ್ರರಿಗೆ ಅಭಿನಂದನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post