ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವೆ ರಕ್ಷಿಸುತ್ತದೆ ಎನ್ನುವ ಸಂದೇಶದೊಂದಿಗೆ ಯುವಕರಲ್ಲಿ ದೇಶಾಭಿಮಾನ, ಧರ್ಮಜಾಗೃತಿಗೊಳಿಸಲು ಬರುತ್ತಿದ್ದಾನೆ ವಿಕ್ರಾಂತ್.ರಾಧ ನಿಸರ್ಗ ಸಂಸ್ಥೆ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಥೆ-ಚಿತ್ರಕತೆ ಬರೆದು ನಿರ್ದೇಶಿಸಲಿದ್ದಾರೆ ನವೀನ್ ಮಾರ್ಲ ಕೊಡಂಗೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ-ರವಿ ಸುವರ್ಣ ಬೆಂಗಳೂರು, ಸಂಗೀತ-ಭಾಸ್ಕರ್ ರಾವ್ ಬಿ.ಸಿ ರೋಡ್, ಸಾಹಸ-ಕೌರವ ವೆಂಕಟೇಶ್, ವರ್ಣಾಲಂಕಾರ-ಪ್ರದೀಪ್ ಆಚಾರ್ಯ ತುಂಬೆ, ಸಹನಿರ್ದೇಶನ-ಪುಷ್ಪರಾಜ್ ರೈ ಮಲಾರ್ ಬೀಡು ಮತ್ತು ಜಯರಾಜ್ ಹೆಜಮಾಡಿ, ಸಂಕಲನ-ಮಹಾಬಲ ಹೊಳ್ಳ, ನೃತ್ಯ ನಿರ್ದೇಶನ-ವಿನೋದ್ ರಾಜ್, ಎಚ್.ಕೆ. ನಯನಾಡು ರವರ ಸಾಹಿತ್ಯವನ್ನು ಅನುರಾಧ ಭಟ್ ಬೆಂಗಳೂರು, ಭಾಸ್ಕರ್ ರಾವ್ ಅವರೊಂದಿಗೆ ಯಕ್ಷ ರಂಗದ ಯುವ ಭಾಗವತರು ಗಿರೀಶ್ ರೈ ಕಕ್ಕೆ ಪದವು ಹಾಡಿದ್ದಾರೆ.
ನಾಯಕ ವಿನೋದ್ ಶೆಟ್ಟಿ ಕೆಂಜಾರು ನಾಯಕಿ ಶೀತಲ್ ನಾಯಕ್ ಅಲ್ಲದೆ ರಾಜ್ಯ ಪ್ರಶಸ್ತಿ ಪಡೆದ ಅರುವ ಕೊರಗಪ್ಪ ಶೆಟ್ಟರು ವಿಭಿನ್ನ ಶೈಲಿಯಲ್ಲಿ ಬರಲಿದ್ದಾರೆ. ಕೊಡ್ಮಣ್ ಕಾಂತಪ್ಪ ಶೆಟ್ಟಿ, ರಾಧಾಕೃಷ್ಣ ನಾವುಡ ಮಧೂರು, ರಮೇಶ್ ರೈ ಕುಕ್ಕುವಳ್ಳಿ, ಎಚ್.ಕೆ. ನಯನಾಡು, ಪೂರ್ಣಿಮಾ ಯತೀಶ್ ರೈ, ಸುನೀತ ಎಕ್ಕೂರು, ಪವಿತ್ರ ಹೆಗ್ಡೆ ಪುತ್ತೂರು, ಶೃತಿ ಕಾಸರಗೋಡು, ಮುರಳಿ ನಾವುಡ, ಸಂದೀಪ್ ಶೆಟ್ಟಿ ರಾಯಿ, ರಾಕೇಶ್ ಬಿ.ಸಿ. ರೋಡ್, ಗಂಗಾಧರ ಆಳ್ವ ಮಲಾರ್ ಬೀಡು, ಇನ್ನು ನಗಿಸುವುದಕ್ಕಾಗಿ ತುಳುವ ಮಾಣಿಕ್ಯ ಅರವಿಂದ ಬೋಳಾರ್’ರವರ ಜೊತೆ ಯಕ್ಷಗಾನ ಹಾಸ್ಯ ಕಲಾವಿದರು ಬಂಟ್ವಾಳ ಜಯರಾಮ ಆಚಾರ್ಯ, ದಿನೇಶ್ ಶೆಟ್ಟಿಗಾರ್ ಕೋಡಪದವು, ಇವರೊಂದಿಗೆ ಯಕ್ಷ ಬೊಲ್ಲಿ ಕಡಬ ದಿನೇಶ್ ರೈ ತುಳು ಚಿತ್ರರಂಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಿನಿಮಾ, ನಾಟಕ, ಯಕ್ಷಗಾನದ ಹೆಸರಾಂತ ಕಲಾವಿದರ ಸಂಗಮದೊಂದಿಗೆ ವಿಕ್ರಾಂತ್ ತೆರೆಗೆ ಬರಲು ಸಿದ್ದತೆ ನಡೆಸುತ್ತಿದ್ದಾನೆ.
ಮಾಹಿತಿ: ಕಡಬ ದಿನೇಶ್ ರೈ
ಬರಹ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
ಚಿತ್ರಸಂಗ್ರಹ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
Discussion about this post