ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮಂಗಳೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಕೇರಳದಿಂದ ಬಂದಿದ್ದ ಜನರು ಕಾರಣ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳೂರು ಹಿಂಸಾಚಾರ ಕುರಿತಂತೆ ಮಾತನಾಡಿರುವ ಅವರು, ಎರಡು ಮೂರು ದಿನಗಳಿಂದ ಮಂಗಳೂರಿನಲ್ಲಿ ಈ ವ್ಯಕ್ತಿಗಳು ಜಮಾವಣೆಯಾಗಿದ್ದರು. ಮಂಗಳೂರು ಉತ್ತರದಲ್ಲಿ ಪ್ರತಿಭಟಕಾರರು ಪೊಲೀಸ್ ಠಾಣೆ ಸುಡುವ ಪ್ರಯತ್ನ ನಡೆಸಿದಾಗ ಅವರ ಮೇಲೆ ಬಲ ಪ್ರಯೋಗ ಮಾಡಿದ್ದು, ಮಂಗಳೂರಿನ ಐದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದಿದ್ದಾರೆ.
ಹಿಂಸಾಚಾರ ತಡೆಯುವುದು ನಮ್ಮ ಮೊದಲ ಪ್ರಾಶಸ್ತ್ಯವಾಗಿದೆ. ಆ ಬಳಿಕ ಹಿಂಸೆಯ ಹಿಂದಿರುವ ವ್ಯಕ್ತಿಗಳ ಮೇಲೆ ಕಾರ್ಯಾಚರಣೆ ಮಾಡಲಾಗುವುದು ಎಂದರು.
Get in Touch With Us info@kalpa.news Whatsapp: 9481252093
Discussion about this post