ಭದ್ರಾವತಿ: ನಗರದ ವಿಐಎಸ್‌ಎಲ್ ಕಾರ್ಖಾನೆಗೆ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ಎ.ವಿ. ಕಮಲಾಕರ್ ಅಧಿಕಾರ ಸ್ವೀಕರಿಸಿದರು. ಈ ಹಿಂದಿನ ಕಾರ್ಯಪಾಲಕ ನಿರ್ದೇಶಕರಾಗಿದ್ದ ವಿವೇಕ್ ಗುಪ್ತರವರಿಗೆ ಮುಂಬಡ್ತಿ ದೊರೆತ್ತಿದ್ದರಿಂದ ಈ ಸ್ಥಾನವು ತೆರವಾಗಿತ್ತು.
ಎ.ವಿ. ಕಮಲಾಕರ್ ರವರು ಕಳೆದ 3 ದಶಕಗಳಿಂದ ದುರ್ಗಾಪುರ್ ಸ್ಟೀಲ್ ಪ್ಲ್ಯಾಾಂಟ್ ಹಾಗೂ ಸೇಲಂ ಸ್ಟೀಲ್ ಪ್ಲಾಾಂಟ್ ಗಳಲ್ಲಿ ಉನ್ನತ ಹುದ್ದೆ ನಿರ್ವಹಿಸಿದ್ದಾರೆ. ಬಿಲಾಯ್ ಸ್ಟೀಲ್ ಪ್ಲ್ಯಾಾಂಟ್ ಮುಂತಾದ ವಿಶೇಷ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಅನುಭವ ಹೊಂದಿರುವ ಇವರು ಕಾರ್ಖಾನೆಯ ಅಭಿವೃದ್ದಿಗೆ ಕೇಂದ್ರ ಸರಕಾರ ಮತ್ತು ಉಕ್ಕು ಪ್ರಾಧಿಕಾರ ಸಹಕಾರದ ನಿರೀಕ್ಷೆಯಲ್ಲಿದ್ದಾರೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post