ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಮುಕ್ತಾಯವಾಗಿದ್ದು, ಜಿಲ್ಲಾಧಿಕಾರಿಗಳ ಪ್ರಯತ್ನದಿಂದಾಗಿ ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಶೇ.82.30ರಷ್ಟು ಮತದಾನವಾಗುವ ಮೂಲಕ ಸೊರಬ ಮೊದಲ ಸ್ಥಾನದಲ್ಲಿದ್ದರೆ, ಶೇ.67.55ರಷ್ಟು ಮತದಾನವಾಗುವ ಮೂಲಕ ಶಿವಮೊಗ್ಗ ನಗರ ಕೊನೆಯ ಸ್ಥಾನದಲ್ಲಿದೆ.
ಹೀಗಿದೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಶೇಕಡಾವಾರು ಮತದಾನ:
- ಶಿವಮೊಗ್ಗ ನಗರ: 67.55
- ಶಿವಮೊಗ್ಗ ಗ್ರಾಮೀಣ: 80.11
- ಭದ್ರಾವತಿ: 69.56
- ತೀರ್ಥಹಳ್ಳಿ: 81.67
- ಶಿಕಾರಿಪುರ: 80.71
- ಸೊರಬ: 82.30
- ಸಾಗರ: 78.89
- ಬೈಂದೂರು: 75.23
ಕಳೆದ ನಾಲ್ಕು ತಿಂಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ ಶೇ.65.06ರಷ್ಟು ಮತದಾನವಾಗಿತ್ತು. ಆದರೆ, ಈ ಪ್ರಮಾಣವನ್ನು ಹೇಗಾದರೂ ಮಾಡಿ ಹೆಚ್ಚಳ ಮಾಡಲೇಬೇಕು ಎಂಬ ಸತತ ಹಾಗೂ ಪ್ರಾಮಾಣಿಕವಾಗಿ ಹಗಲಿರುಳು ಪ್ರಯತ್ನಪಟ್ಟ ಜಿಲ್ಲಾಧಿಕಾರಿ ದಯಾನಂದ್ ಅವರ ಶ್ರಮ ಒಂದಷ್ಟು ಸಾರ್ಥಕವಾಗಿದೆ.
Discussion about this post