ಕಲ್ಪ ಮೀಡಿಯಾ ಹೌಸ್
ವಾಷಿಂಗ್ಟನ್: ಅಮೆರಿಕಾದ ಅವಳಿ ಕಟ್ಟಡಗಳ ಮೇಲೆ ಭಯೋತ್ಪಾದಕ ದಾಳಿ ನಡೆದು ಇಂದಿಗೆ 20 ವರ್ಷಗಳು ಕಳೆದಿದ್ದು, ದಾಳಿಯ ವೇಳೆ ಪ್ರಾಣ ಕಳೆದುಕೊಂಡವರನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಸ್ಮರಿಸಿಕೊಂಡಿದ್ದಾರೆ.
20 years after September 11, 2001, we commemorate the 2,977 lives we lost and honor those who risked and gave their lives. As we saw in the days that followed, unity is our greatest strength. It’s what makes us who we are — and we can’t forget that. pic.twitter.com/WysK8m3LAb
— President Biden (@POTUS) September 10, 2021
2001ರ ಸೆಪ್ಪೆಂಬರ್ 11ರಂದು ನಡೆದ ದುರಂತದಲ್ಲಿ 90 ದೇಶಗಳ 2,977 ಜನರು ಮೃತಪಟ್ಟಿದ್ದರು. ಸಾವಿರಾರು ಮಂದಿ ಗಾಯಗೊಂಡಿದ್ದರು. ನಿಮ್ಮನ್ನು ಮತ್ತು ನಿಮ್ಮ ಪ್ರೀತಿ ಪಾತ್ರರನ್ನು ಅಮೆರಿಕಾ ಸ್ಮರಿಸುತ್ತದೆ ಎಂದು ಬೈಡನ್ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆಯಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ದಾಳಿಯ ನಂತರ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡಿದ ಭದ್ರತಾ ಪಡೆಗಳನ್ನು ಶ್ಲಾಘಿಸಿರುವ ಅವರು, ಈ ದುರಂತದಿಂದಾಗಿ ಐಕ್ಯತೆಯು ನಮ್ಮ ದೊಡ್ಡ ಶಕ್ತಿಯಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ, ಅಗ್ನಿಶಾಮಕ ದಳದವರು, ಪೊಲೀಸ್ ಅಧಿಕಾರಿಗಳು, ಕಾರ್ಮಿಕರು, ವೈದ್ಯರು ಮತ್ತು ದಾದಿಯರು ಸೇರಿದಂತೆ ಸಹಾಯ ಹಸ್ತ ಚಾಚಿದ ಎಲ್ಲರನ್ನೂ ನಾವು ಗೌರವಿಸುತ್ತೇವೆ ಎಂದು ಜೋ ಬೈಡನ್ ತಿಳಿಸಿದ್ದಾರೆ.
ವಿಶ್ವದ ದೊಡ್ಡಣ ಎಂದೇ ಕರೆಯಲ್ಪಡುವ ಅಮೆರಿಕ ಇತಿಹಾಸದಲ್ಲೇ ಈ ದಾಳಿ ಅತ್ಯಂತ ಭೀಕರವಾಗಿದ್ದು, ಸುಮಾರು 102 ನಿಮಿಷಗಳಲ್ಲಿ ಅಲ್‌ಖೈದಾ ಭಯೋತ್ಪಾದಕ ಸಂಘಟನೆಯಿಂದ ಅಪಹರಿಸಲ್ಪಟ್ಟಿದ್ದ ಎರಡು ವಿಮಾನಗಳು ಕೇವಲ 102 ನಿಮಿಷಗಳ ಅವಧಿಯಲ್ಲಿ ಅವಳಿ ಗೋಪುರಗಳಿಗೆ ಅಪ್ಪಳಿಸಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post