ಶ್ರೀನಗರ: ಭಾರತೀಯ ಸೇನೆ ಇಡಿಯ ವಿಶ್ವದಲ್ಲೇ ಅತ್ಯಂತ ಸಮರ್ಥ ಹಾಗೂ ತ್ಯಾಗಮಯಿ ಎಂದು ಹೆಸರಾಗಿದ್ದು, ಇದನ್ನು ಪುಷ್ಠೀಕರಿಸುವಂತೆ ಕಣಿವೆ ರಾಜ್ಯದಲ್ಲಿ ವಾಯುಪಡೆ ಯೋಧರು ಸಾಹಸ ಮೆರೆದಿದ್ದಾರೆ.
ಜಮ್ಮುವಿನಲ್ಲಿರುವ ಥಾವಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಬಳಿ ಇಬ್ಬರು ಯುವಕರು ತೆರಳಿದ್ದಾರೆ. ಇವರು ತೆರಳುವಾಗ ಕಡಿಮೆಯಿದ್ದ ನೀರು ಏಕಾಏಕಿ ಹೆಚ್ಚಾಗಿದ್ದು, ಪ್ರವಾಹ ಉಂಟಾಗಿದೆ. ಪರಿಣಾಮವಾಗಿ ನದಿಯ ನಡುವೆಯೇ ಪ್ರವಾಹದಲ್ಲಿ ಯುವಕರು ಸಿಲುಕಿದ್ದು, ರಕ್ಷಣೆಗಾಗಿ ಮೊರೆಯಿಟ್ಟಿದ್ದರು.
ತತಕ್ಷಣವೇ ಸುದ್ದಿ ತಿಳಿದ ವಾಯುಪಡೆ ಹೆಲಿಕಾಪ್ಟರ್ ಸ್ಥಳಕ್ಕೆ ಆಗಮಿಸಿ, ಇಬ್ಬರನ್ನೂ ರಕ್ಷಿಸುವ ಕಾರ್ಯಕ್ಕೆ ಮುಂದಾಗುತ್ತದೆ. ಹೆಲಿಕಾಪ್ಟರ್ ರೋಪ್ ಮೂಲಕ ಯುವಕರು ಸಿಲುಕಿದ್ದ ಸ್ಥಳಕ್ಕೆ ಯೋಧರೊಬ್ಬರು ಇಳಿದು, ಇಬ್ಬರೂ ಯುವಕರನ್ನು ಅದೇ ರೋಪ್ ಮೂಲಕ ರಕ್ಷಿಸುತ್ತಾರೆ. ಅದರೆ, ಈ ವೇಳೆ ಪ್ರವಾಹ ರೀತಿಯಲ್ಲಿ ಹರಿಯುತ್ತಿದ್ದ ನೀರಿನ ನಡುವೆಯೇ ಉಳಿದ ಯೋಧನನ್ನು ಆನಂತರ ಮೇಲಿತ್ತಿಕೊಳ್ಳಲಾಗುತ್ತದೆ.
ಅಲ್ಲಿ ಹರಿಯುತ್ತಿದ್ದ ನೀರಿನ ರಭಸ ಎಷ್ಟಿತ್ತೆಂದರೆ ಯಾರೇ ಬಿದ್ದರೂ ಕೊಚ್ಚಿಕೊಂಡು ಹೋಗುವ ಪರಿಸ್ಥಿತಿಯಿತ್ತು. ಇಂತಹ ಸನ್ನಿವೇಶದಲ್ಲೂ ಸಹ ಯೋಧ ತನ್ನ ಪ್ರಾಣದ ಹಂಗು ತೊರೆದು ಇತರರನ್ನು ರಕ್ಷಿಸಿದ್ದು, ಇಡಿಯ ದೇಶವೇ ಭಾರತೀಯ ಸೇನೆಯ ಬಗ್ಗೆ ಮತ್ತೊಮ್ಮೆ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ನಮ್ಮ ಸೇನೆ ನಮ್ಮ ಹೆಮ್ಮೆ
Discussion about this post