ಶಿವಮೊಗ್ಗ: ದೊಡ್ಡಪೇಟೆ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಆರು ಮಂದಿ ಮನೆಗಳ್ಳರನ್ನು ಬಂಧಿಸಿದ್ದು, ಇವರಿಂದ 24.79 ಲಕ್ಷ ರೂ.ಗಳ ಮೊತ್ತದಷ್ಟು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ಅವರು, ದೊಡ್ಡಪೇಟೆ ಹಾಗೂ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳ್ಳತನದ ಹಲವು ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಕಳ್ಳರ ಪತ್ತೆಗಾಗಿ ಅಧಿಕಾರಿಗಳ ತಂಡವನ್ನು ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ, ಆರು ಕಳ್ಳರನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದು, ಇವರಿಂದ ಒಟ್ಟು 24.79 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಅತಿ ಕಡಿಮೆ ಅವಧಿಯಲ್ಲಿ ಪ್ರಕರಣವನ್ನು ಭೇದಿಸಿ, ಕಳ್ಳರನ್ನು ಪತ್ತೆ ಮಾಡುವಲ್ಲಿ ಶ್ರಮವಹಿಸಿದ ಅಧಿಕಾರಿಗಳ ತಂಡವನ್ನು ಎಸ್’ಪಿ ಅವರು ಶ್ಲಾಘಿಸಿದ್ದಾರೆ.
ಇನ್ನು, ಬಂಧಿತ ಕಳ್ಳರನ್ನು ಬೊಮ್ಮನಕಟ್ಟೆಯ ಕೆ.ಸಿ. ಪ್ರಕಾಶ್, ಶಿವಮೊಗ್ಗದ ಕ್ಲಾರ್ಕ್ ಪೇಟೆಯ ಅಬ್ದುಲ್ ರೋಷನ್, ಸೈಫುಲ್ಲಾ ಖಾನ್, ಆಜಾದ್ ನಗರದ ಮೊಹಮದ್ ಇಬ್ರಾಹಿಂ, ಚೀಲೂರು ಗ್ರಾಮದ ಇಲಿಯಾಸ್, ಹಾಸನ ಜಿಲ್ಲೆಯ ರಾಜಘಟ್ಟದ ವಿಜಿಕುಮಾರ್ ಎಂದು ಗುರುತಿಸಲಾಗಿದೆ.
SWR Vigilance Dept Organizes Inter-School Competitions to Promote Integrity & Ethical Values
Kalpa Media House | Hubballi | The Vigilance Department of South Western Railway (SWR) organized a series of inter-school competitions...
Read moreDetails






