ನವದೆಹಲಿ: ಆಕೆ ಕೇವಲ ಎರಡು ವರ್ಷ ಪೋರಿ… ಆದರೆ, ಆಕೆ ಮಾಡಿರುವ ದಾಖಲೆ ಮಾತ್ರ ಇಡಿಯ ದೇಶ ಹೆಮ್ಮೆ ಪಡುವಂತಹುದ್ದು.. ಏನೆಂದು ತಿಳಿಯಲು ಮುಂದೆ ಓದಿ…
ಹರಿಯಾಣ ಮೂಲದ ದಂಪತಿಗಳ ಪುತ್ರಿ ಎರಡು ವರ್ಷದ ಅಮಯ್ರಾ ಗುಲಾಟಿ ಕೇವಲ ಒಂದು ನಿಮಿಷದಲ್ಲಿ ದೇಶದ ಎಲ್ಲ ರಾಜ್ಯಗಳ ರಾಜಧಾನಿ ನಗರದ ಹೆಸರನ್ನು ಹೇಳುವ ಮೂಲಕ ದಾಖಲೆ ಬರೆದಿದ್ದಾಳೆ.
ಒಂದು ನಿಮಿಷದ ಅವಧಿಯಲ್ಲಿ ದೇಶದ ಎಲ್ಲ ರಾಜ್ಯಗಳ ರಾಜಧಾನಿ ನಗರಗಳ ಹೆಸರನ್ನು ತನ್ನ ಪುಟ್ಟ ಬಾಯಿಯಲ್ಲಿ ಹೇಳುವ ಈಕೆ, ಬೆಂಗಳೂರು ಹೆಸರನ್ನು ಹೇಳಲು ಮಾತ್ರ ಕೊಂಚ ಕಷ್ಟಪಟ್ಟಿದ್ದು ಆಶ್ಚರ್ಯ ಮೂಡಿಸಿದೆ.
ವೀಡಿಯೋ ನೋಡಿ:
#WATCH: 2-year-old Amayra Gulati, from Panchkula, who had set a world record by reciting names of all Indian states in 1 minute last month, recites names of all Indian state capitals. #Haryana pic.twitter.com/lJRX4t2aGP
— ANI (@ANI) July 10, 2018
ಪೋರಿಯ ತಾಯಿ ಕೇಳುತ್ತಾ ಹೋದ ಪ್ರಶ್ನೆಗಳಿಗೆ ಪಟಪಟನೆ ಉತ್ತರ ಹೇಳುತ್ತಾ ಹೋದ ಆಕೆಯ ಗಮನವನ್ನು ಕೊಂಚ ಬೇರೆಡೆಗೆ ಸೆಳೆದಿದ್ದು ವೇಫರ್ ರೋಲ್. ಅದನ್ನು ತಿಂದ ಬಾಲಕಿ ಮತ್ತೆ ಕ್ಷಣ ಮಾತ್ರದಲ್ಲಿ ಉತ್ತರ ಹೇಳಲು ಆರಂಭಿಸಿದ್ದು ಮಾತ್ರ ಅತ್ಯಾಶ್ಚರ್ಯ.
ಹರಿಯಾಣದ ಪಂಚಕುಲಾ ನಿವಾಸಿಗಳಾದ ಊರ್ವಶಿ ಗುಲಾಟಿ ಹಾಗೂ ರುಬಲ್ ಗುಲಾಟಿ ದಂಪತಿಗಳಿಗೆ 2016ರ ಎಪ್ರಿಲ್ 9ರಂದು ಜನಿಸಿದ ಈ ಚೂಟಿ ಬಾಲಕಿ ಈಗ ದೇಶದಾದ್ಯಂತ ಸುದ್ದಿಯಾಗಿದ್ದಾಳೆ.
Discussion about this post