ಗಾಂಧಿನಗರ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗುಜರಾತ್’ನ ಅಹ್ಮದಾಬಾದ್’ನಲ್ಲಿ ಮತವನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಹಕ್ಕು ಚಲಾಯಿಸಲು ಆಗಮಿಸಿದ್ದಾರೆ.
ತಮ್ಮ ಸ್ವರಾಜ್ಯಕ್ಕೆ ಆಗಮಿಸಿದ ಪ್ರಧಾನಿಯವರು ಗಾಂಧಿನಗರಕ್ಕೆ ಭೇಟಿ ನೀಡಿ ತಮ್ಮ ತಾಯಿ ಹೀರಾಬೆನ್ ಮೋದಿ ಅವರನ್ನು ಭೇಟಿಯಾಗಿ, ಆರ್ಶೀವಾದ ಪಡೆದರು.
Gujarat: Prime Minister Narendra Modi met his mother at her residence in Gandhinagar today. He will cast his vote in Ahmedabad, shortly. pic.twitter.com/CUncTSpBTt
— ANI (@ANI) April 23, 2019
ಇಂದು ಮುಂಜಾನೆ ತಮ್ಮ ತಾಯಿ ವಾಸವಿರುವ ನಿವಾಸಕ್ಕೆ ಆಗಮಿಸಿದ ಮೋದಿಯವರನ್ನು ಕುಟುಂಬಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು. ತಮ್ಮ ತಾಯಿಯವರೊಂದಿಗೆ ಉಭಯಕುಶಲೋಪರಿ ಮಾತನಾಡಿದ ಮೋದಿಯವರಿಗೆ ಹೀರಾಬೆನ್ ಮೋದಿಯವರು ಸಿಹಿ ತಿನ್ನಿಸಿ, ಹರಸಿದರು. ಮೋದಿಯವರೂ ಸಹ ತಮ್ಮ ತಾಯಿಗೆ ಸಿಹಿ ತಿನ್ನಿಸಿ ಆರ್ಶೀವಾದ ಪಡೆದರು.
Gujarat: Prime Minister Narendra Modi meets people outside his mother's residence in Gandhinagar. He will cast his vote in Ahmedabad, shortly. pic.twitter.com/HhjPyB1c5F
— ANI (@ANI) April 23, 2019
ಈ ವೇಳೆ ತಮ್ಮ ಮಗನ ಶ್ರೇಯೋಭಿವೃದ್ಧಿಗಾಗಿ ವಿಶೇಷವಾಗಿ ಪೂಜೆ ಸಲ್ಲಿಸಿದ್ದ ಪ್ರಸಾದ ಹಾಗೂ ವಸ್ತ್ರವನ್ನು ನೀಡಿದರು.
#WATCH PM Narendra Modi meets his mother Heeraben Modi at her residence in Gandhinagar and takes her blessings. #Gujarat pic.twitter.com/uRGsGX0fcw
— ANI (@ANI) April 23, 2019
Discussion about this post