ಕಲ್ಪ ಮೀಡಿಯಾ ಹೌಸ್ | ವಯನಾಡ್ |
ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತ #Landslide in Wayanad ಸಂಭವಿಸಿದ ಗ್ರಾಮಕ್ಕೆ ಗ್ರಾಮವೇ ನಾಶವಾಗಿರುವ ಬೆನ್ನಲ್ಲೇ ಚಾರಲ್ಮಲೈ ನದಿಗೆ ಅಡ್ಡಲಾಗಿ ಕಟ್ಟಲಾದ 190 ಅಡಿ ಉದ್ದದ ಸೇತುವೆಯನ್ನು ಭಾರತೀಯ ಸೇನೆ ದಾಖಲೆಯ ಕೇವಲ 16 ಗಂಟೆಯಲ್ಲಿ ಪೂರ್ಣಗೊಳಿಸಿದೆ.
ಚೂರಲ್ಮಲ ಮತ್ತು ಮುಂಡಕ್ಕೈಗೆ ಸಂಪರ್ಕ ಕಲ್ಪಿಸುವ ಈ ಸೇತುವೆಯನ್ನು ಕೇವಲ 16 ಗಂಟೆಗಳಲ್ಲಿ ಪೂರ್ಣಗೊಳಿಸುವ ಮೂಲಕ ಭಾರತೀಯ ಸೇನೆಯ ಇಂಜಿಯರ್’ಗಳು ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಜುಲೈ 31 ರ ರಾತ್ರಿ 9 ಗಂಟೆಗೆ ನಿರ್ಮಾಣಕ್ಕೆ ಕೈ ಹಾಕಿದ ಸೇನೆಯ ಎಂಜಿನಿಯರ್’ಗಳು ಆಗಸ್ಟ್ 01 ರ ಸಂಜೆ 5.30ಕ್ಕೆ ಪೂರ್ಣಗೊಳಿಸಿದರು. ಈ ಸೇತುವೆ 24 ಟನ್ ತೂಕದ ಸಾಮರ್ಥ್ಯವನ್ನು ಹೊಂದಿದೆ.
Also read: ಕೊಲ್ಲೂರು ಕಾರಿಡಾರ್’ಗೆ ಎಂಪಿ ರಾಘವೇಂದ್ರ ಪ್ರಯತ್ನ | ಹೇಗಿದೆ ಮಾಸ್ಟರ್ ಪ್ಲಾನ್? ಏನೆಲ್ಲಾ ಇರಲಿದೆ?
ಎಲ್ಲಾ ರೀತಿಯ ಸವಾಲುಗಳನ್ನು ಮೀರಿ 1 ಮದ್ರಾಸ್ ಎಂಜಿನಿಯರ್ಸ್ ಗ್ರೂಪ್’ನ ಮೇಜ್ ಸೀತಾ ಶೆಲ್ಕೆ ಮತ್ತು ಅವರ ತಂಡ ಈ ಸೇತುವೆಯನ್ನು ಯಶಸ್ವಿಯಾಗಿ ನಿರ್ಮಿಸಿದೆ.
ಈ ಸೇತುವೆ ನಿರ್ಮಾಣವನ್ನು ಮಧ್ಯಾಹ್ನ 12 ಗಂಟೆಯ ಒಳಗಡೆ ಪೂರ್ಣಗೊಳಿಸಲು ಸೇನೆ ಟಾರ್ಗೆಟ್ ಹಾಕಿಕೊಂಡಿತ್ತು.ಆದರೆ ಭಾರೀ ಮಳೆಯಿಂದ ಕೆಲಸಕ್ಕೆ ಅಡ್ಡಿಯಾಗಿದ್ದರೂ ಸೇನೆಯ ಎಂಜಿನಿಯರ್ಗಳು ದಾಖಲೆಯ ಅವಧಿಯಲ್ಲಿ ಸೇತುವೆ ನಿರ್ಮಿಸಿ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post