ಆತ್ಮವೂ ಕೂಡ ಚಿರಂಜೀವ, ಸಾವಿಲ್ಲ. ಯಾರೂ ಸೃಷ್ಟಿಸಿದ್ದಲ್ಲ, ಸೃಷ್ಟಿಸಿದ್ದರೆ ಅದಕ್ಕೂ ಸಾವಿರುತ್ತಿತ್ತು!
ಕೆಲವರು ಸದಾ ಸುಖಿ, ಮತ್ತೆ ಕೆಲವರು ನಿರಂತರ ದುಃಖಿ, ಕೆಲವರಿಗೆ ಅಂಗವಿಕಲತ್ವ, ಇನ್ನು ಕೆಲವರು ಮೂರ್ಖರು, ಮೂಢರು, ಮಂಕ, ಮಡೆಯ ಮುಟ್ಟಾಳರು. ಎಲ್ಲರೂ ಪರಮಾತ್ಮನ ಸೃಷ್ಟಿಯಾಗಿದ್ದಲ್ಲಿ, ಈ ವಿಚಿತ್ರ ವ್ಯತ್ಯಾಸಗಳೇಕೆ? ಕರುಣಾಮಯ ಸೃಷ್ಠಿಕರ್ತನಿಂದ ಈ ತರತಮ್ಯವೇಕೆ? ಸೃಷ್ಟಿಕರ್ತನಕಲ್ಪನೆಗೆ ಇದು ಅಸಾಮಂಜಸ್ಯ!
ಹಾಗೆಯೇ, ಜನ್ಮಕ್ಕೆ ಪೂರ್ವವಾಗಿ ಪೂರ್ವಜನ್ಮದ ಕ್ರಿಯೆಗಳೇ ಮನುಷ್ಯನ ಸುಖ – ದುಃಖಗಳಿಗೆ ಸಂಬಂಧವಿರಬೇಕು. ವೇದಗಳ ಪ್ರಕಾರ ದೇಹದ ಕಲ್ಪನೆ ಹೇಗೆ ಎಂದರೆ, ಆತ್ಮವು ದೇಹದೊಳಗೆ ವ್ಯಾಪ್ತವಾಗಿದೆ, ಆದರೆ ಆತ್ಮವು ದೇಹವಲ್ಲ. ದೇಹಕ್ಕೆ ಸಾವಿದೆ – ನೋವಿದೆ, ಆತ್ಮಕ್ಕೆ ಸಾವಿಲ್ಲ. ಈಗ ಈ ದೇಹ, ಇದರ ಅಂತ್ಯದ ನಂತರ ಇನ್ನೊಂದು, ಈ ದೇಹಕ್ಕೆ ಪೂರ್ವದಲ್ಲಿಯೂ ಆತ್ಮದ ಅಸ್ತಿತ್ವವಿತ್ತು.
ದೇಹಕ್ಕೆ ಆನುವಂಶಿಕವಾಗಿ ಕೂಡ ಹಲವಾರು ಪ್ರವೃತ್ತಿಗಳು ಬರುತ್ತವೆ. ಆದರೆ ಅವು ಬರೇ ದೇಹದ ಸಂರಚನಾ ಸಂಬಂಧಿತ, ಯಾವುದರಿಂದ ವಿಶಿಷ್ಟವಾಗಿ ಮೆದುಳು ಮಾತ್ರ ವಿಶೇಷವಾಗಿ ನಡೆಯಲು ಸಾಧ್ಯ, ಮತ್ತೆ ಉಳಿದದ್ದು ಆತ್ಮದಿಂದಲೇ ಲಭಿತ ಮತ್ತು ಪೂರ್ವ ಜನ್ಮದ ಕ್ರಿಯಾ – ಕರ್ಮದ ಮೇಲೆ ಆಧಾರಿತ.
ನಮ್ಮ ನವಜಾತಶಿಶುವಿನ ಹವಾ – ಭಾವ, ಅಭ್ಯಾಸಗಳು ಈ ಜನ್ಮದಲ್ಲಿ ಕಲಿತಿದ್ದಲ್ಲ! ಹಾಗಾದರೆ ಅದು ಗತಜನ್ಮದಿಂದ ಬಂದ ಸಾಧ್ಯತೆ ಹೆಚ್ಚು. ಇಷ್ಟೆಲ್ಲಾ ಸಂಗ್ರಹಿಸದ ಮೇಲೆ ನಮಗೆ ಕಾಡುವ ಪ್ರಶ್ನೆ, ಗತ ಜನ್ಮದ ಘಟಿತಗಳು ನೆನಪಲ್ಲೇಕೆ ಇಲ್ಲ ಎಂದು? ಇದಕ್ಕೆ ಸ್ವಾಮಿ ವಿವೇಕಾನಂದರು ಹೀಗೆ ಉತ್ತರಿಸಿರುತ್ತಾರೆ: ನಾವು ಇಂಗ್ಲೀಷ್ ಮಾತನಾಡುತ್ತಿದ್ದರೆ ನಮಗೆ ನಮ್ಮ ಮಾತೃ ಭಾಷೆಯ ಯಾವ ಶಬ್ಧ – ಅರ್ಥಗಳೂ ಮನಸ್ಸಿಗೆ ಬರೋದಿಲ್ಲ. ಅಂತೆಯೇ ಪ್ರಯತ್ನಿಸಿದರೆ ಬಂದೇ ಬರುತ್ತದೆ ಅಲ್ಲವೇ? ಅಂತೇ ಜಾಗೃತ ಸ್ಥಿತಿ ಮಾನಸಿಕ ಸಾಗರದ ಮೇಲ್ಬಾಗವಷ್ಟೇ. ಆಳದಲ್ಲಿ ವ್ಯಕ್ತ ಸರ್ವ ಸ್ವಾನುಭವಸಾರ, ಮಾನಸಿಕ ಮಂಥನದಿಂದ ಮಾತ್ರ ಹಿಂದನ ಜನ್ಮದ ಅರಿವು ಸಾಧ್ಯ ಎಂದು.
ಇದು ನೇರ ಪಾರದರ್ಶಕ ಸಕ್ಷೀರ್ಭೂತ ಸಮರ್ಥನೆ, ಪರಿಶೀಲನೆಯಿಂದಲೇ ಒಂದು ಪ್ರಮೇಯದ ಓಚಿತ್ಯ ವಿಭಾಗ ಮಾಡಲು ಸಾಧ್ಯ. ಇದು ಜಗತ್ತಿಗೇ ಸಾಧಕ ಋಷಿಗಳು ಇತ್ತ ಅಂಶ, ಮಾನಸಿಕ ಸಾಗರದ ತಳಭಾಗದಲ್ಲಿದೆ ಗತ ಜನ್ಮದ ಅನುಭವ ಸಾರ, ಮಂಥನ ದಿಂದ ಪೂರ್ವಜನ್ಮದ ಪೂರ್ಣಸ್ಮರಣೆ ಸಾಧ್ಯ, ಆಮಂಥನಕ್ಕೆ ಹಲವಾರು ಮಾರ್ಗಗಳು. ಹಾಗಿದ್ದರೆ, ಒಬ್ಬ ಆದರ್ಶ ಹಿಂದುವಿನ ನಂಬಿಕೆ ಏನೆಂದರೆ, ತಾನು ದೇಹವಲ್ಲ ಆತ್ಮ. ಕತ್ತಿಯಿಂದ ಕಡಿಯಲಸಾಧ್ಯ, ಬೆಂಕಿಯಿಂದ ಸುಡಲಸಾಧ್ಯ, ಗಾಳಿಯಿಂದ ಒಣಗಿಸಿಸಲಸಾಧ್ಯ. ಎಲ್ಲ ಭೌತಿಕ ಒತ್ತಡಗಳಿಗೂ ಮೀರಿದ ಅಸ್ತಿತ್ವ ಎಂದು.
ಆತ್ಮವು ವೃತ್ತಕಾರದಲ್ಲಿದ್ದರೆ ಅದರ ಸುತ್ತಳತೆ ಅಜ್ಞಾತ, ಆದರೆ ಅದರ ವೃತ್ತದ ಕೇಂದ್ರ ಬಿಂದು ಮಾತ್ರ ದೇಹದಲ್ಲಿ ವ್ಯಾಪ್ತವಾಗಿದೆ ಎಂದು ನಂಬುವ ನಾವು, ಸಾವು ಎಂದರೆ ವೃತ್ತದ ಕೇಂದ್ರ ಬಿಂದುಮಾತ್ರ ದೇಹದಿಂದೆ ದೇಹಕ್ಕೆ ಬದಲಾವಣೆಯಾಗುತ್ತದೆ ಎಂದು Define ಮಾಡುತ್ತೇವೆ. ಆತ್ಮವೂ ಎಂದೂ ಭೌತವಸ್ತುಗಳಿಗೆ ಬದ್ಧವಲ್ಲ, ಅದುಪೂಜ್ಯ, ನಿರ್ಮಲ, ಸಂಪೂರ್ಣ, ಸ್ವತಂತ್ರ.
ಆದರೆ ನಾವು ಸಾಮಾನ್ಯವಾಗಿ, ನಮ್ಮನ್ನು ನಾವು ಭೌತ ವಸ್ತುವಿನೊಂದಿಗೆ ಸಂಬಂಧ ಕಲ್ಪಿಸಿಕೊಳ್ಳುತ್ತೇವೆ ಹಾಗೂ ನಾವೂ ಒಂದು ಭೌತ ವಸ್ತು ಎಂದು ಕಲ್ಪಿತ ಜೀವನ ಮಾಡುತ್ತೇವೆ.
(ಮುಂದುವರೆಯುವುದು)
ಜ್ಞಾನ ಋಣ – ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ
Discussion about this post