ನವದೆಹಲಿ: ನಾಯಕನಾದವನು ದಕ್ಷ, ಪ್ರಾಮಾಣಿಕ, ನಿಷ್ಪಕ್ಷಪಾತ, ಧೈರ್ಯದಿಂದ ಮುನ್ನುಗ್ಗುವ ಗುಣದ ಜೊತೆಯಲ್ಲಿ ಕರುಣೆ ಹಾಗೂ ಮಾನವೀಯತೆಯೂ ಸಹ ಇರಲೇ ಬೇಕು ಎಂದು ಚಾಣಕ್ಯ ಹೇಳಿದ್ದಾನೆ. ಇಂತಹ ಗುಣಗಳೇ ಮೇಳೈಸಿದ ದೇಶದ ಏಕೈಕ ನಾಯಕ ಪ್ರಧಾನಿ ನರೇಂದ್ರ ಮೋದಿ ಎನ್ನುವುದಕ್ಕೆ ಈಗ ಮತ್ತೊಂದು ಘಟನೆ ಸಾಕ್ಷಿಯಾಗಿದೆ.
ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ರೈತ ಸಮಾವೇಶ ಆಯೋಜನೆಗೊಂಡಿತ್ತು. ಇದರಲ್ಲಿ ಲಕ್ಷಾಂತರ ಮಂದಿ ರೈತರು ಸೇರಿದ್ದು, ಪ್ರಧಾನಿ ಮೋದಿ ಅವರ ಭಾಷಣ ನಡೆಯುತ್ತಿತ್ತು. ಈ ವೇಳೆ ಅಲ್ಲಿ ಹಾಕಲಾಗಿದ್ದ ಪೆಂಡಾಲ್ ಕುಸಿದುಬಿದ್ದು, ನೂರಾರು ಮಂದಿ ಗಾಯಗೊಂಡರು.

ಇದರಿಂದಾಗಿ ತಮ್ಮ ಭಾಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿ, ಅಗತ್ಯ ತುರ್ತು ಕ್ರಮ ಕೈಗೊಳ್ಳುವಂತೆ ತಮ್ಮ ಎಸ್‌ಪಿಜಿ ತಂಡಕ್ಕೆ ಸೂಚನೆ ನೀಡಿದರು. ತತಕ್ಷಣ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತು.

ಆನಂತರ ಭಾಷಣವನ್ನು ಮುಂದುವರೆಸಿ, ಮುಕ್ತಾಯಗೊಳಿಸಿದ ಮೋದಿಯವರು ದೆಹಲಿಗೆ ಹಿಂತಿರುಗಬಹುದಿತ್ತು. ಅದರೆ, ಅವರು ಹಾಗೆ ಮಾಡಲಿಲ್ಲ. ಅಲ್ಲಿಂದ ನೇರ ದೌಡಾಯಿಸಿದ್ದು, ಆಸ್ಪತ್ರೆಗೆ.. ಆಸ್ಪತ್ರೆಗೆ ಆಗಮಿಸಿದ ಮೋದಿ ಅಲ್ಲಿ ದಾಖಲಾಗಿದ್ದ ಪ್ರತಿಯೊಬ್ಬರ ಬಳಿಯೂ ಸಹ ಖುದ್ದು ತೆರಳಿ ಆರೋಗ್ಯ ವಿಚಾರಿಸಿ, ಸಾಂತ್ವನ ಹೇಳಿದರು. ನಾವಿದ್ದೇವೆ ಎಂಬ ಭರವಸೆ ನೀಡಿದರು. ಆ ಮೂಲಕ ತಮ್ಮೊಳಗಿರುವ ಮಾನವೀಯ ಗುಣಗಳಿಗೆ ಮತ್ತೊಮ್ಮೆ ಅರ್ಥ ನೀಡಿದ್ದರು ಮೋದಿ.
ಇನ್ನು, ಈ ಘಟನೆಗಳ ನಡುವೆಯೇ ಸ್ವಾರಸ್ಯಕರ ಪ್ರಸಂಗವೊಂದು ನಡೆದಿದೆ. ಮೋದಿಯವರು ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಸಂತ್ರಸ್ತೆಯೊಬ್ಬರನ್ನು ವಿಚಾರಿಸಿದ್ದಾರೆ. ಆಗ ಆಕೆ ಕೇಳಿದ್ದು, ನನಗೆ ನಿಮ್ಮ ಆಟೋಗ್ರಾಫ್ ಬೇಕು ಸರ್.

ತತಕ್ಷಣ ಕೊಂಚವೂ ಯೋಚಿಸಿದ ಮೋದಿ ಸಂಸತದಿಂದ ಆಕೆಗೆ ಹಸ್ತಾಕ್ಷರ ನೀಡಿದರು. ಈ ಫೋಟೋ ಈಗ ವೈರಲ್ ಆಗಿದೆ.
















