ಕಲ್ಪ ಮೀಡಿಯಾ ಹೌಸ್ | ಮುಂಜಾನೆ ಸುವಿಚಾರ |ಪ್ರಪಂಚದ ಜನರಿಗಾಗಿ ನಮ್ಮ ಮೂಲ ಸ್ವಭಾವ ಬದಲಾವಣೆ ಮಾಡಿಕೊಳ್ಳಬಾರದು. ಪ್ರಪಂಚ ಸೃಷ್ಟಿ ಮಾಡಿದ ಪರಮಾತ್ಮನೇ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪ್ರಪಂಚದಲ್ಲಿ ಯಾರದ್ದೋ ಸಲುವಾಗಿ ನಮ್ಮ ಗುಣ ಸ್ವಭಾವ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.
ನಮ್ಮಲ್ಲಿರುವ ಗುಣದಿಂದ ನಮ್ಮ ಜೀವನದಲ್ಲಿ ಹಾನಿಯಾಗುತ್ತಿದೆ ಕಷ್ಟಗಳು ಬರುತ್ತಿವೆ ಎನಿಸಿದಾಗ ಗುಣ ಗಳನ್ನ ಬದಲಿಸಿ ಕೊಂಡರೆ ತಪ್ಪಿಲ್ಲ.
ನಮ್ಮ ಗುಣ ಸ್ವಭಾವದಿಂದ ಮತ್ತೊಬ್ಬರಿಗೆ ಕಷ್ಟವಾದರೆ ಅಂತಾ ಗುಣ ಬದಲಾದರೆ ತಪ್ಪಿಲ್ಲ. ಯಾರನ್ನೋ ಮೆಚ್ಚಿಸುವ ಸಲುವಾಗಿ ಗುಣದಲ್ಲಿ ಇಷ್ಟವಿಲ್ಲದೇ ಬದಲಾವಣೆ ಮಾಡಿ ಕೊಂಡರೆ ನಮ್ಮ ಅಸ್ತಿತ್ವವನ್ನೇ ಕಳೆದು ಕೊಂಡಂತೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post