ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾವು ಪ್ರಾಣ ಬಿಟ್ಟರೂ ಸರಿ, ಹಿಜಾಬ್ #Hijab ತೆಗೆಯುವುದಿಲ್ಲ, ಇದು ನಮ್ಮ ಗೌರವ ಎಂದು ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುರ್ಖಾ ಹಾಗೂ ಹಿಜಾಬ್ ಧರಿಸಿ ಕಾಲೇಜು ಪ್ರವೇಶಿಸಲು ಅನುಮತಿಸದ ಹಿನ್ನೆಲೆಯಲ್ಲಿ ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ ಆಕೆ, ನಾವೇನು ಕೊಲೆ ಮಾಡೋಕೆ ಹೋಗ್ತಿದೀವಾ. ಓದೋಕೆ ಹೋಗ್ತಿದೀವಿ. ನಾವು ಹಿಜಾಬ್ ತೆಗೆಯುವುದಿಲ್ಲ ಎಂದಿದ್ದಾರೆ.
ಮುಸ್ಲಿಂ #Muslim ಹುಡುಗಿಯರು ಓದೋಕೆ ಬಂದರೆ ನೀವು ಗೌರವ ಕೊಡಬೇಕು. ಅದನ್ನು ಬಿಟ್ಟು ನೀವು ಮಾಡುತ್ತಿರುವುದು ಏನು. ನಾವು ಮುಸ್ಲಿಂ ಆಗಿ ಹಿಜಾಬ್ ತೆಗೆಯಬೇಕಾ? ಇದು ನಮ್ಮ ಗೌರವ. ಯಾವುದೇ ಕಾರಣಕ್ಕೂ ನಾವು ಇದನ್ನು ತೆಗೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Also Read: ಖ್ಯಾತ ಹಿರಿಯ ಕವಿ ಚನ್ನವೀರ ಕಣವಿ ವಿಧಿವಶ
ನ್ಯಾಯಾಲಯ ಆದೇಶವಿದೆಯಲ್ಲಾ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಆಕೆ, ಕೋರ್ಟ್ ಆರ್ಡರ್, ಕೋರ್ಟ್ ಆರ್ಡರ್… ಎಂಥ ಕೋರ್ಟ್ ಆರ್ಡರ್. ಇದನ್ನು ಹೇಳಿ ನಮಗೆ ಕಾಲೇಜು ಒಳಕ್ಕೆ ಬಿಡುತ್ತಿಲ್ಲ. ನಾವು ಬಹಳಷ್ಟು ತಾಳ್ಮೆ ವಹಿಸುತ್ತಿದ್ದೇವೆ. ಕೋರ್ಟ್ #Court ಆರ್ಡರ್ ಎಂದು ಹೇಳಿ ನಮ್ಮ ಶಿಕ್ಷಣಕ್ಕೆ ಅಡ್ಡಿ ಪಡಿಸುತ್ತಿದ್ದೀರಿ ಎಂದು ಆಕೆ ಕಿಡಿ ಕಿರಿ ಕಾರಿದ್ದಾರೆ.
Also Read: ಖ್ಯಾತ ಹಿರಿಯ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ವಿಧಿವಶ
ಹರಿದ ಬಟ್ಟೆ ಹಾಕಿಕೊಂಡು ಬಂದರೆ ಪ್ರವೇಶಕ್ಕೆ ನೀಡುತ್ತೀರಿ. ಆದರೆ, ನಾವು ಮೈತುಂಬಾ ಬಟ್ಟೆ ಹಾಕಿಕೊಂಡು ಬಂದರೆ ಪ್ರವೇಶ ನಿರಾಕರಿಸುತ್ತೀರಿ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post