No Result
View All Result
Mysuru Project Assistant Job Kits Leap 22 K Salary
English Articles

Mysuru Job Alert : Project Assistant Vacancy, 22,000 Salary, Apply by Oct 10

by kalpa News
September 21, 2026
0

Kalpa Media House  |  Mysuru  | Applications have been invited for one Project Assistant post for the Optical Sensing Biotechnology...

Read moreDetails
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
  • Advertise With Us
  • Grievances
  • About Us
  • Contact Us
Wednesday, September 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

445 ಕಿಮೀಗಳನ್ನು ಒಂದೇ ಗಂಟೆಯಲ್ಲಿ ತಲುಪುತ್ತಾರಂತೆ ಈ ಸಚಿವರು!!!

kalpa News by kalpa News
October 6, 2018
in Special Articles
0
Share on FacebookShare on TwitterShare on WhatsApp

ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಹೇಗೆ ಎಲ್ಲವೂ ಸರಿ ಇಲ್ಲವೋ ಹಾಗೆಯೇ, ರಾಜ್ಯ ಸರ್ಕಾರದ ಅಧಿಕಾರಿಗಳ ವಲಯದಲ್ಲೂ ಸಹ ಹೇಗೆ ದಿವ್ಯ ನಿರ್ಲಕ್ಷ್ಯ ಮನೆ ಮಾಡಿದೆ ಎಂಬುದಕ್ಕೆ ಇದೊಂದು ಜ್ವಲಂತ ನಿದರ್ಶನ.

ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ. ಖಾದರ್ ಅವರು ಅ.8ರ ಸೋಮವಾರದಿಂದ ಅ.10ರವರೆಗೂ ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಹಲವು ಸಭೆಗಳನ್ನು ನಡೆಸಲಿದ್ದಾರೆ. ಇದು ಸಚಿವ ಅಧಿಕೃತ ಭೇಟಿಯಾಗಿರುವ ಹಿನ್ನೆಲೆಯಲ್ಲಿ ಸಚಿವರ ಟಿಪಿ ಯನ್ನು ಮುನ್ನವೇ ಸಿದ್ದಪಡಿಸಿ, ಸಂಬಂಧಿಸಿದ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರವಾನಿಸಿ, ಸೂಕ್ತ ಸಿದ್ದತೆ ಮಾಡಿಕೊಳ್ಳಲು ಸೂಚಿಸಲಾಗುತ್ತದೆ.

ಅದೇ ರೀತಿಯಲ್ಲಿ ಖಾದರ್ ಅವರ ಮೂರು ದಿನಗಳ ಪ್ರವಾಸ ಕಾರ್ಯಕ್ರಮಗಳ ಪಟ್ಟಿಯನ್ನು ನಗರಾಭಿವೃದ್ಧಿ ಮತ್ತು ವಸತಿ ಸಚಿವರ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ ಅವರ ಲೆಟರ್ ಹೆಡ್‌ನಲ್ಲಿ ಅಕ್ಟೋಬರ್ 5ರಂದು ಬಿಡುಗಡೆ ಮಾಡಿದ್ದು, ಇದರಲ್ಲಿ ನಮೂದಾಗಿರುವ ಸಚಿವರ ಪ್ರವಾಸದ ಮಾರ್ಗ, ಉನ್ನತ ಅಧಿಕಾರಿ ವರ್ಗದಲ್ಲಿ ಬೇರೂರಿರುವ ನಿರ್ಲಕ್ಷ್ಯವನ್ನು ಹೊರ ಹಾಕಿದೆ.

ನಿನ್ನೆ ಬಿಡುಗಡೆಯಾದ ಪ್ರವಾಸದ ಪಟ್ಟಿಯಂತೆ ಅ.8ರಂದು ಬೆಳಗ್ಗೆ 9.30ಕ್ಕೆ ರಸ್ತೆ ಮಾರ್ಗವಾಗಿ ಶಿವಮೊಗ್ಗಕ್ಕೆ ಆಗಮಿಸುವ ಸಚಿವರು, ಸ್ಮಾರ್ಟ್ ಸಿಟಿ ಕುರಿತಂತೆ ಸಭೆ ನಡೆಸಲಿದ್ದಾರೆ. ಆನಂತರ ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಿಂದ ನಿರ್ಗಮಿಸುವ ಸಚಿವರು ಹಿರಿಯೂರು-ಹೊಸಪೇಟೆ ಮಾರ್ಗವಾಗಿ ರಸ್ತೆ ಮೂಲಕ ದಾವಣಗೆರೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ನಮೂದಿಸಲಾಗಿದೆ. ಇದರಲ್ಲಿ ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗ ಬಿಡಲಿರುವ ಸಚಿವರ ಹಿರಿಯೂರು-ಹೊಸಪೇಟೆ ಮಾರ್ಗವಾಗಿ ರಸ್ತೆ ಮೂಲಕ ಮಧ್ಯಾಹ್ನ ಮೂರು ಗಂಟೆಗೆಲ್ಲಾ ದಾವಣಗೆರೆ ತಲುಪಲಿದ್ದಾರಂತೆ..

ಈ ಮಾರ್ಗವಾಗಿ ಅದು ಹೇಗೆ ಒಂದು ಗಂಟೆಯಲ್ಲಿ ತಲುಪಲು ಸಾಧ್ಯ ಎನ್ನುವುದು ಈಗಿರುವ ಪ್ರಶ್ನೆ?

ಶಿವಮೊಗ್ಗದಿಂದ ಹಿರಿಯೂರಿಗೆ 141 ಕಿಮೀಗಳು, ಹಿರಿಯೂರಿನಿಂದ ಹೊಸಪೇಟೆಗೆ 183 ಕಿಮೀಗಳು, ಹೊಸಪೇಟೆಯಿಂದ ದಾವಣಗೆರೆಗೆ 121 ಕಿಮೀಗಳು. ಅಂದರೆ ಈ ಮಾರ್ಗದಲ್ಲಿ ಶಿವಮೊಗ್ಗದಿಂದ ದಾವಣಗೆರೆಗೆ 445 ಕಿಮೀಗಳಾಗುತ್ತವೆ? ರಸ್ತೆ ಮಾರ್ಗವಾಗಿ 445 ಕಿಮೀಗಳನ್ನು ಒಂದು ಗಂಟೆಯಲ್ಲಿ ತಲುಪಲು ಸಾಧ್ಯವೇ? ಗಂಟೆಗೆ ನೂರು ಕಿಮೀ ವೇಗದಲ್ಲಿ ತೆರಳಿದರೂ ಕನಿಷ್ಠ ನಾಲ್ಕು ಗಂಟೆ ಬೇಕಾಗುತ್ತದೆ.

ವಾಸ್ತವವಾಗಿ ಇಷ್ಟೇ ಆಗಿರುತ್ತದೆ. ಸಚಿವಾಲಯದ ಸಿಬ್ಬಂದಿಗಳು ಈ ಪಟ್ಟಿಯನ್ನು ಸಿದ್ದಪಡಿಸಿರುತ್ತಾರೆ. ಬಹುತೇಕ ಇದು ಸಚಿವರ ಗಮನಕ್ಕೇ ಬಂದಿರುವುದಿಲ್ಲ. ಆದರೆ, ಇದನ್ನು ಪರಿಶೀಲನೆ ನಡೆಸಿ ಸಹಿ ಹಾಕಿರುವುದು ಕೆಎಎಸ್ ಅಧಿಕಾರಿಯಾಗಿರುವ ಸಚಿವರ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ.. ಸಿಬ್ಬಂದಿಗಳು ಮಾರ್ಗವನ್ನು ತಪ್ಪಾಗಿ ನಮೂದಿಸಿರುತ್ತಾರೆ ಒಪ್ಪಿಕೊಳ್ಳೋಣ. ಆದರೆ, ಇದನ್ನು ಕೂಲಂಕಶವಾಗಿ ಪರಿಶೀಲನೆ ನಡೆಸದೇ ತಪ್ಪಾಗಿರುವ ಈ ಪಟ್ಟಿಗೆ ಕೆಎಎಸ್ ದರ್ಜೆಯ ಅಧಿಕಾರಿಯೊಬ್ಬರು ಸಹಿ ಹಾಕಿ, ರವಾನಿಸಿದ್ದಾರೆ ಎಂದರೆ ಈ ಅಧಿಕಾರಿಯದ್ದು ಇನ್ನೆಂತಹ ನಿರ್ಲಕ್ಷ್ಯವಿರಬೇಕು? ಜವಾಬ್ದಾರಿ ಸ್ಥಾನದಲ್ಲಿ ಕುಳಿತ ಹಿರಿಯ ಅಧಿಕಾರಿಯಾಗಿ ಇಂತಹ ತಪ್ಪನ್ನು ಮಾಡಿದ್ದಾರೆ ಎಂದರೆ, ಸಚಿವಾಲಯದಲ್ಲಿ ಇನ್ನೆಷ್ಟು ತಪ್ಪುಗಳು, ಅಕ್ರಮಗಳು ನಡೆಯುತ್ತಿವೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಇದು ಆದ ನಂತರ ಅಕ್ಟೋಬರ್ 6ರ ಇಂದು ಮತ್ತೊಂದು ಟಿಪಿಯನ್ನು ಬಿಡುಗಡೆ ಮಾಡಲಾಗಿದ್ದು, ಇದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಎಂ.ಎಸ್. ಮಂಜುನಾಥ್ ಅವರ ಹೆಸರಿನಲ್ಲಿದ್ದು, ಇದರಲ್ಲಿ ಶಿವಮೊಗ್ಗದಿಂದ ಹೊನ್ನಾಳಿ ಮಾರ್ಗವಾಗಿ ದಾವಣಗೆರೆ ತಲುಪಲಿದ್ದಾರೆ ಎಂದು ನಮೂದಾಗಿದೆ.

ತಪ್ಪಾಗಿದ್ದ ಪಟ್ಟಿಯನ್ನು ತಿದ್ದುಪಡಿ ಮಾಡಿ ಮತ್ತೆ ಬಿಡುಗಡೆ ಮಾಡಿದ್ದು ಸರಿ. ಆದರೆ, ಓರ್ವ ಕೆಎಎಸ್ ಅಧಿಕಾರಿಯಾಗಿ ಮಹೇಶ್ ಕರ್ಜಗಿ ಅವರು ಪಟ್ಟಿಯನ್ನು ಕೂಲಂಕಶವಾಗಿ ಪರಿಶೀಲನೆ ನಡೆಸದೇ ಅದು ಹೇಗೆ ಸಹಿ ಹಾಕಿದರು? ಇದನ್ನು ಕರ್ತವ್ಯ ನಿರ್ಲಕ್ಷ್ಯ ಎಂದೇ ಹೇಳಬೇಕಾಗುತ್ತದೆ. ಇಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿಚಾರದಲ್ಲಿ ಸಚಿವರು ಅಥವಾ ಸರ್ಕಾರ ಕ್ರಮಕ್ಕೆ ಮುಂದಾಗುತ್ತದೆಯೇ? ಪ್ರಮುಖವಾಗಿ ತಮ್ಮ ಆಪ್ತ ಕಾರ್ಯದರ್ಶಿ ಅವರ ಈ ನಿರ್ಲಕ್ಷ್ಯದ ಕರ್ತವ್ಯಕ್ಕೆ ಯು.ಟಿ. ಖಾದರ್ ಅವರು ಕ್ರಮ ಕೈಗೊಳ್ಳುವರೇ?

ಎಸ್.ಆರ್. ಅನಿರುದ್ಧ ವಸಿಷ್ಠ
ಮೊ: 9008761663

Tags: Minister TPMinister U T KhadarU T KhadharUrban development ministry karnataka
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕೇರಳದ ಹಲವೆಡೆ ರೆಡ್ ಅಲರ್ಟ್, ಇಡುಕ್ಕಿ ಡ್ಯಾಂನಿಂದ ನೀರು ಹೊರಕ್ಕೆ

Next Post

ಗುರುವಿನ ಅತಿಚಾರ ಫಲ ಅತಿಯಾದೀತೆ?

kalpa News

kalpa News

Next Post

ಗುರುವಿನ ಅತಿಚಾರ ಫಲ ಅತಿಯಾದೀತೆ?

Leave a Reply Cancel reply

Your email address will not be published. Required fields are marked *

No Result
View All Result
Mysuru Project Assistant Job Kits Leap 22 K Salary
English Articles

Mysuru Job Alert : Project Assistant Vacancy, 22,000 Salary, Apply by Oct 10

by kalpa News
September 21, 2026
0

Kalpa Media House  |  Mysuru  | Applications have been invited for one Project Assistant post for the Optical Sensing Biotechnology...

Read moreDetails
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL