ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ತಮ್ಮ ಗೃಹ ಕಚೇರಿ ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸ್ವಯಂ ಹೋಂ ಕ್ವಾರಂಟೈನ್’ನಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಮನೆಯಲ್ಲಿ ಹೇಗೆ ಕಾಲ ಕಳೆಯುತ್ತಿದ್ದಾರೆ? ಇಲ್ಲಿಗೆ ಅವರೇ ನೀಡಿದ ಉತ್ತರ.
ಈ ಕುರಿತಂತೆ ಸ್ವತಃ ಟ್ವೀಟ್ ಮಾಡಿರುವ ಅವರು, ನನ್ನ ವಿರಾಮದ ಸಮಯದಲ್ಲಿ ಪುಸ್ತಕ ಓದುವುದು ನನಗೆ ಖುಷಿಯ ಹವ್ಯಾಸ. ನಮ್ಮ ಸುತ್ತಮುತ್ತ ನಡೆಯುವ ಹಲವು ವಿಷಯಗಳ ಕುರಿತು ತಿಳಿದುಕೊಳ್ಳಲು ಸಾಕಷ್ಟು ಇರುತ್ತದೆ. ಜ್ಞಾನ ಪಡೆಯುವ ಪ್ರಕ್ರಿಯೆಗೆ ಕೊನೆಯಿಲ್ಲ. ಭಾನುವಾರದ ಲಾಕ್ ಡೌನ್ ದಿನ ಮತ್ತು ಸ್ವ ನಿರ್ಬಂಧನದಲ್ಲಿರುವಾಗ ನನಗೆ ಸಿಗುವ ವಿರಾಮದ ಸಮಯವನ್ನು ಖಾಂಡೇಕರ್ ಅವರ ಯಯಾತಿ ಕೃತಿಯನ್ನು ಓದುತ್ತಿದ್ದೇನೆ ಎಂದಿದ್ದಾರೆ.
ಬಿಡುವಿನ ವೇಳೆಯಲ್ಲಿ ನನಗೆ ಅತ್ಯಂತ ಪ್ರಿಯವಾದ ಕಾಲಕ್ಷೇಪವೆಂದರೆ ಓದುವುದು. ನೂರಾರು ಸಂಗತಿಗಳ ಬಗ್ಗೆ ತಿಳಿದಷ್ಟೂ ತಿಳಿಯಬಹುದಾದ ವಿಷಯಗಳಿವೆ, ಜ್ಞಾನಾರ್ಜನೆ ಎಂದೂ ಮುಗಿಯದ ಕಾಯಕ. ಇಂದಿನ ಭಾನುವಾರದ ಲಾಕ್ ಡೌನ್ ಮತ್ತು ಸ್ವ-ಕ್ವಾರಂಟೈನ್ ನಲ್ಲಿರುವ ವೇಳೆ ಸಿಕ್ಕ ಸ್ವಲ್ಪ ಬಿಡುವಿನ ಸಮಯವನ್ನು ಖಾಂಡೇಕರ್ ಅವರ ಯಯಾತಿಯ ಜೊತೆಗೆ ಕಳೆಯುತ್ತಿದ್ದೇನೆ. pic.twitter.com/F8MmXJvsrN
— B.S. Yediyurappa (@BSYBJP) July 12, 2020
Get In Touch With Us info@kalpa.news Whatsapp: 9481252093
Discussion about this post