ಬೆಂಗಳೂರು: ದೇಶದಾದ್ಯಂತ ಸಂಚಲನ ಸೃಷ್ಠಿಸಿರುವ ವಿಕ್ಕಿ ಕುಶಾಲ್ ಅಭಿನಯದ ಉರಿ ಚಿತ್ರವನ್ನು ವೀಕ್ಷಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಚಿತ್ರಮಂದಿರದಲ್ಲೇ ಘೋಷಣೆ ಕೂಗುವ ಮೂಲಕ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಬೆಳ್ಳಂದೂರಿನಲ್ಲಿರುವ ಸ್ಪಿರಿಟ್ ಸೆಂಟ್ರಲ್ ಮಾಲ್’ನಲ್ಲಿ ಉರಿ ಚಿತ್ರವನ್ನು ವೀಕ್ಷಿಸಿದ ಸಚಿವರು, ಚಿತ್ರದ ಕುರಿತಾಗಿ ಅತ್ಯಂತ ಪ್ರಶಂಸೆ ವ್ಯಕ್ತಪಡಿಸಿದರು.
ಚಿತ್ರ ವೀಕ್ಷಣೆಗಾಗಿ ಆಗಮಿಸಿದ ನಿರ್ಮಲಾ ಸೀತಾರಾಮನ್ ಅವರು ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿದರು. ಕೇಂದ್ರ ಸಚಿವರು ಆಗಮಿಸಿದ ಹಿನ್ನೆಲೆಯಲ್ಲಿ ಮಾಲ್’ನಲ್ಲಿ ಸಾರ್ವಜನಿಕರು ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಎಂದು ಘೋಷಣೆ ಕೂಗಿದರು. ಅತ್ಯಂತ ಸರಳ ಸ್ವಭಾವದ ನಿರ್ಮಲಾ ಸೀತಾರಾಮನ್ ಅವರನ್ನು ಕಂಡ ಸಾರ್ವಜನಿಕರು ಅವರಿಗೆ ಅಭಿನಂದಿಸುವ ಜೊತೆಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
Live from Central Spirit Mall, Bellandur, Bengaluru, to watch Uri (finally) with veterans. #HighJosh! 🙂
cc: @Aditya https://t.co/vQH1yhQcbc— Nirmala Sitharaman (@nsitharaman) January 27, 2019
ಚಿತ್ರ ವೀಕ್ಷಿಸಿದ ಸಚಿವರು ಚಿತ್ರ ತಯಾರಿಕೆಯ ಕುರಿತು ಪ್ರಶಂಸೆ ವ್ಯಕ್ತಪಡಿಸಿದ, ಚಿತ್ರವನ್ನು ರೂಪಿಸಿರುವ ಹಿಂದಿನ ಶ್ರಮ ಹಾಗೂ ಆನಂತರದ ಅದರ ಯಶಸ್ಸನ್ನು ಕೊಂಡಾಡಿದರು.
And it starts. #highjosh pic.twitter.com/PV7EQqvD9e
— Nirmala Sitharaman (@nsitharaman) January 27, 2019
ಉರಿ ಚಿತ್ರದಲ್ಲಿ ನಾಯಕ ತನ್ನ ಬೆಟಾಲಿಯನ್’ನನ್ನು ಹುರಿದುಂಬಿಸಲು ಹೌಈಸ್ ದಿ ಜೋಷ್ ಎಂದು ಹುರಿದುಂಬಿಸುತ್ತಾರೆ. ಚಿತ್ರವನ್ನು ವೀಕ್ಷಿಸಿದ ನಂತರ ಕೊನೆಯಲ್ಲಿ ಸಂತಸಗೊಂಡ ಸಚಿವರು ಅದೇ ರೀತಿಯಲ್ಲಿ ಹೌಈಸ್ ದಿ ಜೋಷ್ ಎಂದು ಸಂಭ್ರಮಿಸುವ ಮೂಲಕ ಸಾರ್ವಜನಿಕರನ್ನು ಹುರಿದಂಬಿಸಿ, ದೇಶಪ್ರೆÃಮ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
What a power-packed movie @AdityaDharFilms and @RonnieScrewvala. Brilliant performances @yamigautam @vickykaushal09 @SirPareshRawal ji, @mohituraina. Recharged also by the energy in the cinema hall! #HighJosh pic.twitter.com/NPtfmRkD8i
— Nirmala Sitharaman (@nsitharaman) January 27, 2019
ಸರಳತೆಗೆ ಹೆಸರಾಗಿರುವ ನಿರ್ಮಲಾ ಸೀತಾರಾಮನ್ ಅವರು ಸಾಮಾನ್ಯರಂತೆ ಮಾಲ್’ಗೆ ಆಗಮಿಸಿ ಚಿತ್ರ ವೀಕ್ಷಿಸಿದ್ದು ಮಾತ್ರವಲ್ಲದೇ, ಚಿತ್ರಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ತಾವೊಬ್ಬ ರಕ್ಷಣಾ ಸಚಿವರು ಎಂಬ ಯಾವುದೇ ರೀತಿಯ ಹಮ್ಮುಬಿಮ್ಮು ಇಲ್ಲದೇ ಸಾರ್ವಜನಿಕರೊಂದಿಗೆ ಬೆರೆತು, ಹುರಿದುಂಬಿಸುವ ಘೋಷಣೆ ಕೂಗಿದ್ದು ಪ್ರಶಂಸೆಗೆ ಪಾತ್ರವಾಗಿದೆ. ನಿಜಕ್ಕೂ ಇಂತಹ ರಕ್ಷಣಾ ಸಚಿವರನ್ನು ಪಡೆದ ದೇಶ ಹೆಮ್ಮೆಯಿಂದ ಬೀಗುತ್ತಿದೆ.
2016ರಲ್ಲಿ ಉರಿ ಸೆಕ್ಟರ್ ಮೇಲೆ ಉಗ್ರರು ನಡೆಸಿದ ದಾಳಿ ಹಿನ್ನೆಲೆಯಲ್ಲಿ ಭಾರತೀಯ ಸೇನೆ ನಡೆಸಿದ ಯಶಸ್ವಿ ಕಾರ್ಯಾಚರಣೆ ಸರ್ಜಿಕಲ್ ಸ್ಟ್ರೈಕ್ ಕುರಿತಾಗಿ ಉರಿ ಚಿತ್ರ ರೂಪಿತಗೊಂಡಿದೆ.
How’s the josh?! pic.twitter.com/8hxuCxt0P5
— Nirmala Sitharaman (@nsitharaman) January 27, 2019
Discussion about this post