ಕಲ್ಪ ಮೀಡಿಯಾ ಹೌಸ್ | ಮುಂಬೈ |
ವಿಶ್ವದಾದ್ಯಂತ ಬಿಡುಗಡೆಗೊಂಡು ಭರ್ಜರಿ ಯಶಸ್ಸು ಕಂಡಿರುವ ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಬಾಲಿವುಡ್ ಸಹ ಸಲಾಂ ಎಂದಿದೆ. ಕಾಂತಾರ -1 ಚಿತ್ರ ವೀಕ್ಷಿಸಿದ ರಿತೇಶ್ ದೇಶಮುಖ್ ಅವರು ರಿಷಬ್ ಶೆಟ್ಟಿ ಅವರನ್ನು ಹಾಡಿ ಹೊಗಳಿದ್ದಾರೆ.
ಐಮ್ಯಾಕ್ಸ್’ನಲ್ಲಿ ಸಿನಿಮಾ ವೀಕ್ಷಿಸಿದ ರಿತೇಶ್ ದೇಶಮುಖ್ ಕಾಂತಾರಕ್ಕೆ ಮೆಚ್ಚುಗೆ ಚಪ್ಪಾಳೆ ತಟ್ಟಿ ಸಿನಿಮಾ ತಂಡವನ್ನು ಅಭಿನಂದಿಸಿರುವುದು ವಿಶೇಷವಾಗಿದೆ.
ರಿತೇಶ್ ದೇಶಮುಖ್ ಹೇಳಿದ್ದೇನು?
ಕಾಂತಾರವನ್ನು ನೋಡಿದ್ದು ನಿಜಕ್ಕೂ ಒಂದು ಅದ್ಭುತ ಭಾರತೀಯ ಚಲನಚಿತ್ರ ವೀಕ್ಷಣೆಯ ಅನುಭವವಾಗಿತ್ತು. ನಟ, ಬರಹಗಾರ ಮತ್ತು ನಿರ್ದೇಶಕರಾಗಿರುವ ರಿಷಬ್ ನೀವೊಬ್ಬ ಅದ್ಭುತ ವ್ಯಕ್ತಿ ಎಂದು ಹೊಗಳಿದ್ದಾರೆ.

ರುಕ್ಮಿಣಿ ವಸಂತ್ ಉತ್ತಮ ನಟಿ. ನಿಮಗೆ ಹೆಚ್ಚಿನ ಶಕ್ತಿ ಸಿಗಲಿ. ಗುಲ್ಶನ್ ದೇವಯ್ಯ ನಿಮ್ಮ ದುಷ್ಟ ವ್ಯಕ್ತಿತ್ವದ ಅಭಿನಯ ಅಮಲೇರಿಸುವಷ್ಟು ಅದ್ಭುತವಾಗಿತ್ತು. ಈ ಬ್ಲಾಕ್ ಬಸ್ಟರ್ ಯಶಸ್ಸಿಗೆ ಕಾರಣರಾದ ಹೊಂಬಾಳೆ ಫಿಲ್ಮ್ಂ ಅವರಿಗೆ ಅಭಿನಂದನೆಗಳು ಸಲ್ಲಿಸಿದ್ದು, ಚಿತ್ರದ ಯಶಸ್ಸಿಗೆ ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಬರೆದು ಶ್ಲಾಘಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post