ನವದೆಹಲಿ: ಪುಲ್ವಾಮಾದಲ್ಲಿ ಕಳೆದ ಗುರುವಾರ ಪಾಕ್’ನ ಜೈಷ್ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ 42 ಯೋಧರು ಬಲಿಯಾದ ಹಿನ್ನೆಲೆಯಲ್ಲಿ, ಪಾಕ್ ವಿರುದ್ಧ ಪ್ರತೀಕಾರ ಆರಂಭಿಸಿರುವ ಭಾರತ ಸರ್ಕಾರ, ಜಲಾಸ್ತ್ರ ಪ್ರಯೋಗ ಮಾಡಿದೆ.
ಈ ಕುರಿತಂತೆ ಘೋಷಣೆ ಮಾಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಪಾಕಿಸ್ಥಾನಕ್ಕೆ ಹರಿಯುತ್ತಿರುವ ಮೂರು ನದಿಗಳ ನೀರನ್ನು ನಿಲ್ಲಿಸಿ ಅದನ್ನು ಯಮುನಾ ನದಿಗೆ ಸೇರುವಂತೆ ತಿರುಗಿಸುವ ಸಂಬಂಧ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ ಎಂದು ತಿಳಿಸುವ ಮೂಲಕ ಪಾಕ್’ಗೆ ಭಾರೀ ಆಘಾತ ನೀಡಿದ್ದಾರೆ.
ಇಷ್ಟೇ ಅಲ್ಲದೆ 1960ರಿಂದ ಚಾಲ್ತಿಯಲ್ಲಿರುವ ಸಿಂಧು ನದಿ ಒಪ್ಪಂದ ಮರುಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ.
ಪುಲ್ವಾಮಾ ಭೀಕರ ಉಗ್ರ ದಾಳಿಯ ಬಳಿಕ ಪರಮಾಪ್ತ ರಾಷ್ಟ್ರದ ಸ್ಥಾನಮಾನ ತೆಗೆದು ಹಾಕಿದ್ದು, ಆಮದು ಸುಂಕವನ್ನು ಶೇ.200ರಷ್ಟು ಹೆಚ್ಚಿಸಿ ಭರ್ಜರಿ ಶಾಕ್ ನೀಡಿದ ಬೆನ್ನಲ್ಲೆ ಕೇಂದ್ರ ಸರ್ಕಾರ ಪಾಕಿಸ್ಥಾನಕ್ಕೆ ಇನ್ನೊಂದು ಶಾಕ್ ನೀಡಿದ್ದು, ನದಿ ನೀರನ್ನು ನಿಲ್ಲಿಸುವುದಾಗಿ ಹೇಳಿರುವುದು ಶತ್ರು ರಾಷ್ಟçಕ್ಕೆ ಮೊದಲ ಆಘಾತ ನೀಡಿದೆ.
ಪಾಕಿಸ್ಥಾನಕ್ಕೆ ಹರಿಯುತ್ತಿರುವ ಮೂರು ನದಿಗಳ ನಿರು ನಿಲ್ಲಿಸಿ ಅದನ್ನು ಯಮುನೆಗೆ ಹರಿಯುವಂತೆ ಮಾಡುವ ಯೋಜನೆ ಇದೆ. ಹಾಗೆ ಮಾಡಿದ್ದಾದರೆ ಯಮುನೆಯಲ್ಲಿ ವರ್ಷಪೂರ್ತಿ ಸಾಕಷ್ಟು ಪ್ರಮಾಣದ ನೀರು ಇರಲಿದೆ.
ರಾವಿ ನದಿಗೆ ಈಗಾಗಲೇ ಶಾಹಾಪುರ್ -ಕಾಂಡಿಯಲ್ಲಿ ಡ್ಯಾಂ ನಿರ್ಮಾಣ ಮಾಡಲಾಗಿದ್ದು, ಪಾಕ್‌ಗೆ ಹರಿಯುವ ನೀರನ್ನು ಇಲ್ಲಿ ತಡೆ ಹಿಡಿಯಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Discussion about this post