ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಇದಕ್ಕೆ ಸುಪ್ರಸಿದ್ಧವಾದ ಎರಡು ಪಾಠ ಸಂಪ್ರದಾಯಗಳಿವೆ. ಅವುಗಳಲ್ಲಿ ಆದಿ, ಭೂಮಿ, ಬ್ರಹ್ಮ, ಪಾತಾಳ, ಸೃಷ್ಟಿ, ಉತ್ತರಖಂಡಗಳೆಂಬ ಆರು ಭಾಗಗಳುಳ್ಳದ್ದು ಹೆಚ್ಚು ಅರ್ವಾಚೀನ; ಸೃಷ್ಟಿ, ಭೂಮಿ, ಸ್ವರ್ಗ, ಪಾತಾಳ, ಉತ್ತರ ಖಂಡಗಳೆಂಬ ಐದು ಭಾಗಗಳಿರುವ ಬಂಗಾಲಿ ಹಸ್ತಪ್ರತಿಯ ಪಾಠಸಂಪ್ರದಾಯ ಹೆಚ್ಚು ಪ್ರಾಚೀನ. ಈ ಖಂಡಗಳೆಲ್ಲವೂ ಬಹುಶಃ ಬೇರೆ ಬೇರೆ ಕಾಲಾವಧಿಗಳಲ್ಲಿ ಬರೆದ ಪ್ರತ್ಯೇಕ ಕೃತಿಗಳು. ಅನಂತರ ಯಾರೋ ಅವೆಲ್ಲವನ್ನೂ ಸಂಕಲಿಸಿ ಪದ್ಮಪುರಾಣವೆಂಬ ಹೆಸರನ್ನು ಕೊಟ್ಟಿರಬೇಕು.
ಏಕೆಂದರೆ, ಅತ್ಯಂತ ಅರ್ವಾಚೀನವೆನ್ನಬಹುದಾದ ಭಾಗವತ ಪುರಾಣದಲ್ಲಿರುವ ಕೆಲ ಅಂಶಗಳಿಗೂ ಇತ್ತೀಚಿನವೆನ್ನಿಸುವ ಅಂಶಗಳಿದರಲ್ಲಿವೆ. ಸೃಷ್ಟಿಕ್ರಮ, ಸೂರ್ಯ ವಂಶದ ರಾಜರ ಅನುಚರಿತ, ಶ್ರಾದ್ಧವಿಚಾರ, ಚಂದ್ರವಂಶದ ರಾಜರ ವೃತ್ತಾಂತ, ದೇವಾಸುರಸಮರ, ಪುಷ್ಕರಸರಸ್ಸಿನ ವರ್ಣನೆ, ದುರ್ಗಾರಾಧನೆಯ ವ್ರತ ಮತ್ತು ಹಬ್ಬಗಳು, ಸೃಷ್ಟಿಯ ಪುನರ್ ವಿವರಣೆ, ವಿಷ್ಣು ಅಸುರಾಂತಕನಾದುದು, ಸ್ಕಂದನಜನನ ಮತ್ತು ಸ್ಕಂದವಿವಾಹ, ಸೋಮಶರ್ಮ ಪ್ರಹ್ಲಾದನಾಗಿ ಹುಟ್ಟಿದ ಕತೆ; ಪವಿತ್ರಸ್ಥಳಗಳಲ್ಲದೆ ತಂದೆ, ಗುರು, ಅಥವಾ ಹೆಂಡತಿಯರು ತೀರ್ಥ ಸ್ವರೂಪ ವಾದುದರ ನಿದರ್ಶನ; ದೇವಲೋಕದ ವರ್ಣನೆ, ಶಕುಂತಲಾವೃತ್ತಾಂತ, ಊರ್ವಶೀ ಪುರೂರವರ ಕಥೆ, ವರ್ಣಾಶ್ರಮಧರ್ಮ, ವಿಷ್ಣುಪೂಜೆ ನಾಗಲೋಕದ ವಿಸ್ತಾರ, ರಾಮೋಪಾಖ್ಯಾನ, ಋಷ್ಯಶೃಂಗಚರಿತ ತೀರ್ಥಮಾಹಾತ್ಮ್ಯ, ರಾಧಾಕೃಷ್ಣ ಲೀಲೆ, ಸಾಲಿಗ್ರಾಮಪಾವಿತ್ರ್ಯ, ವಿಷ್ಣುವ್ರತ, ವಿಷ್ಣುನಿಯಮ, ವಿಷ್ಣೋತ್ಸವಗಳು, ಭಗವದ್ಗೀತಾಪ್ರಾಶಸ್ತ್ಯ, ವಿಷ್ಣುಸಹಸ್ರನಾಮ ಮೊದಲಾದ ವಿಷಯಗಳಲ್ಲದೆ, ಉತ್ತರ ಖಂಡದ ಬಳಿಕ ಬರುವ ಕ್ರಿಯಾಯೋಗಸಾರವೆಂಬ ಅನುಬಂಧ ವಿಷ್ಣುವಿನ ನಿಜವಾದ ಆರಾಧನೆಗೆ ಧ್ಯಾನಯೋಗಕ್ಕಿಂತ ಕರ್ಮಯೋಗವೇ ಹೆಚ್ಚು ಪ್ರಶಸ್ತವೆಂದು ಬೋಧಿಸಿದೆ. ಇದರ ಪಂಚಖಂಡಗಳ ಒಟ್ಟು ಶ್ಲೋಕಸಂಖ್ಯೆ 48,452. ಇದರ ಇಂದಿನ ರೂಪದ ಕಾಲ ಸು. ಕ್ರಿ.ಶ. 12ನೆಯ ಶತಮಾನವೆನ್ನಬಹುದು.
Get in Touch With Us info@kalpa.news Whatsapp: 9481252093
Discussion about this post