No Result
View All Result
PESITM hosts Mock CET 2026 to Strengthen KCET Preparation
English Articles

PESITM hosts Mock CET 2026 to Strengthen KCET Preparation

by ಕಲ್ಪ ನ್ಯೂಸ್
March 31, 2026
0

Kalpa Media House  |  Shivamogga  | PES Institute of Technology and Management #PESITM conducted Mock CET 2026 on March 30...

Read moreDetails
India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

March 30, 2026
SWR to run special trains for Good Friday, Easter rush

SWR to run special trains for Good Friday, Easter rush

March 30, 2026
ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಪಿಆರ್‌ಓ ಪ್ರವೀಣ್ ಅಧಿಕಾರ ಸ್ವೀಕಾರ

South Western Railway | Praveen Takes Charge as Hubballi Divisional Public Relations Officer

March 28, 2026
26 ವರ್ಷದ ಯುವಕನಿಗೆ ಮರುಜೀವ ಕೊಟ್ಟ ಮೆಡಿಕವರ್ ಆಸ್ಪತ್ರೆ | ಏನಾಗಿತ್ತು ಯುವಕನಿಗೆ?

Critical Condition Turned Around with Timely Medical Intervention

March 27, 2026
  • Advertise With Us
  • Grievances
  • About Us
  • Contact Us
Wednesday, April 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂ. ಗ್ರಾಮಾಂತರ

ಕಾಡು ಬೆಳೆಸುವುದು ಎಂದರೆ ಏನು ಗೊತ್ತಾ? ರಾಷ್ಟ್ರೋತ್ಥಾನದ ಈ ಅಭಿಯಾನ ಬಗ್ಗೆ ಓದಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 9, 2018
in ಬೆಂ. ಗ್ರಾಮಾಂತರ
0
Share on FacebookShare on TwitterShare on WhatsApp

ಬೆಂಗಳೂರು: ಭೂಮಿ, ಕಾಡು ಮತ್ತು ದೇಶಿಯ ಗೋವುಗಳ ನಡುವೆ ಅವಿನಾಭಾವ ಸಂಬಂಧ ಇದೆ. ಇದನ್ನು ಅರಿತು ಇಲ್ಲಿ ವೈವಿಧ್ಯಮಯ ದೇಶಿಯ ಸಸಿಗಳನ್ನು ಬೆಳೆಸಲು ಒತ್ತು ನೀಡಲಾಗಿದೆ ಎಂದು ಪರಿಸರ ತಜ್ಞ ಡಾ. ಯಲ್ಲಪ್ಪ ರೆಡ್ಡಿ ಹೇಳಿದರು.

ಅವರು ದೊಡ್ಡಬಳ್ಳಾಪುರದ ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ನಡೆಸಲಾಗುತ್ತಿರುವ ಗೋಶಾಲೆಯ ಆವರಣದ ಸುಮಾರು ಐದು ಎಕರೆ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಕೆಲಸಕ್ಕೆ ಚಾಲನೆ ನೀಡಿ ಮಾತನಾಡಿದರು.

 

ಕಾಡು ಬೆಳೆಸುವುದೆಂದರೆ ಕೇವಲ ಗಿಡನೆಟ್ಟು ಮರ ಬೆಳೆಸುವುದಷ್ಟೇ ಅಲ್ಲ. ಅದರಿಂದ ಭೂಮಿಯ ಕೆಳಗಿನ ಇಪ್ಪತ್ತು ಅಡಿ ಹಾಗೂ ಮೇಲಿನ ನೂರು ಅಡಿಗಳಿಗೂ ಮಿಕ್ಕಿ ಒಂದು ಆರೋಗ್ಯಕರ ವಾತಾವರಣ ನಿರ್ಮಾಣವಾಗಬೇಕು. ರಾಷ್ಟ್ರೋತ್ಥಾನ ಪರಿಷತ್‌ನ ವೃಂದಾವನ ಯೋಜನೆಯಂತೆ ಅಂತಹ ಒಂದು ವನ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ ಗೋಶಾಲೆಯ ಆವರಣದಲ್ಲಿ ಬೆಳೆಸಲಾಗುತ್ತಿರುವ ಸುಮಾರು 150 ಬಗೆಯ ವಿವಿಧಬಗೆಯ ದೇಶಿಯ ತಳಿಗಳನ್ನು ಗುರುತಿಸಿ ಸಸಿಗಳನ್ನು ಬೆಳೆಸಲಾಗುತ್ತದೆ. ಮೊದಲ ಹಂತದಲ್ಲಿ 5 ಎಕರೆಯಲ್ಲಿ ಒಂದು ಸಾವಿರ ಸಸಿಗಳನ್ನು ನಾಟಿ ಮಾಡಲಾಗುವುದು ಎಂದು ಯೋಜನೆಯ ಮಾರ್ಗದರ್ಶಕರೂ ಆದ ಯಲ್ಲಪ್ಪ ರೆಡ್ಡಿ ಅವರು ತಿಳಿಸಿದರು.

ಗೋಶಾಲೆ ಆವರಣದಲ್ಲಿ ನಾಟಿ ಮಾಡಲಾಗಿರುವ ಸಸಿಗಳು ಬೆಳೆದು ದೊಡ್ಡವಾದ ನಂತರ ಇಡೀ ದಿನ ಇಲ್ಲಿನ ಮರಗಳ ಮಧ್ಯದಲ್ಲಿ ಕುಳಿತು ಕಾಲ ಕಳೆದರು ಸಾಕು ಹಲವಾರು ಅನಾರೋಗ್ಯದ ಸಮಸ್ಯೆಗಳು ನಿವಾರಣೆ ಮಾಡುವಂತಹ ಶಕ್ತಿ ಇಲ್ಲಿನ ಗಾಳಿಗೆ ಬರಲಿದೆ. ಇಂತಹ ಒಂದು ವನವನ್ನು ನಿರ್ಮಿಸಬೇಕು ಎನ್ನುವ ನನ್ನ 30 ವರ್ಷಗಳ ಕನಸು ನನಸಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಮಹಾವನದ ಬಳಿಕ ಮುಂದೆ ಇಲ್ಲಿ ತಪೋವನ, ಶ್ರೀವನಗಳನ್ನು ರೂಪಿಸಲಾಗುವುದು. ಇಲ್ಲಿಗೆ ಬಂದವರ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುವಂತಹ ವಾತಾವರಣವನ್ನು ನಿರ್ಮಿಸಲಾಗುವುದು ಎಂದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಂಗಳೂರಿನ ಐಸಿಆರ್- ಎನ್‌ಡಿಆರ್‌ಐನ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಕೆ.ಪಿ. ರಮೇಶ್ ಅವರು ಗಾವೋ ವಿಶ್ವಸ್ವ ಮಾತರ: (ಗೋವು ಜಗತ್ತಿನ ತಾಯಿ) ಎಂಬ ಮಾತನ್ನು ಬೆಂಬಲಿಸಿ ಮಾತನಾಡಿದರು.

ಮುಖ್ಯಮಂತ್ರಿಯವರು ಇತ್ತೀಚೆಗೆ ನಡೆಸಿದ ಸಭೆಗೆ ಆಗಮಿಸಿದ ಆಂಧ್ರಪ್ರದೇಶದ ತಜ್ಞರು ಸಾವಯವ ಕೃಷಿ ಇಂದಿನ ಅಗತ್ಯ ಎಂದರಲ್ಲದೆ ಅದರಲ್ಲಿ ಗೋವಿನ ಪಾತ್ರವನ್ನು ತಿಳಿಸಿದರು. ಹಸುವಿನ ಹೊಟ್ಟೆಯಲ್ಲಿ ನಾಲ್ಕು ಭಾಗಗಳಿದ್ದು, ಅದರಿಂದ ಅನೇಕ ಸೂಕ್ಷ್ಮಜೀವಿಗಳು, ಫಂಗಸ್, ಫಲವತ್ತತೆಯ ಮೈಕ್ರೋಬ್ ಮುಂತಾದವು ನಮಗೆ ಸಿಗುತ್ತವೆ. ಕೃಷಿಗೆ ಕೇವಲ ಎನ್‌ಪಿಕೆ ಗೊಬ್ಬರ ಸಾಲದು. ಮೈಕ್ರೋಬ್ ಬೇಕು. ಅದು ಇರುವುದು ದನದಲ್ಲಿ ಮಾತ್ರ ಎಂದು ಅವರು ತಿಳಿಸಿದರು.

ದೇಶೀ ಹಸುಗಳು ಭುಜ ಮತ್ತು ದೊಗಲಿನಲ್ಲಿರುವ ಉಷ್ಣಗ್ರಂಥಿಗಳು ಉಷ್ಣವನ್ನು ಹೊರಹಾಕುತ್ತವೆ. ವಿದೇಶಿ ಹಸುಗಳಲ್ಲಿ ಅದು ಇಲ್ಲ. ಹೀಗಾಗಿ ಉಷ್ಣತೆ ಹೆಚ್ಚಾದಂತೆ ವಿದೇಶಿ ಹಸುಗಳ ಹಾಲು ಕಡಮೆಯಾಗುತ್ತದೆ. ದೇಶೀ ಹಸುಗಳಲ್ಲಿ ಹಾಗಾಗುವುದಿಲ್ಲ. ನಮ್ಮ ದನಗಳು ಬಿಸಿಲಿಗೆ ಹೆದರುವುದಿಲ್ಲ; ಆದರೆ ವಿದೇಶಿ ಹಸುಗಳು ನೆರಳಿಗೆ ಹೋಗುತ್ತವೆ. ಅದರಿಂದಾಗಿ ಹಾಲಿನಲ್ಲಿ ಪೌಷ್ಟಿಕಾಂಶ ಕಡಮೆಯಾಗಿ ಜನರಲ್ಲಿ ಬೆನ್ನುನೋವಿನಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಮಕ್ಕಳಲ್ಲಿ ಬುದ್ದಿಶಕ್ತಿ ಬೆಳೆಯಲು ಬೇಕಾದ ಲ್ಯಾಕ್ಟೋಫೆರಿನ್ ಮಲೆನಾಡು ಗಿಡ್ಡದಂತಹ ದನಗಳ ಹಾಲಿನಲ್ಲಿ ಅಧಿಕ ಇರುತ್ತದೆ. ದೇಸೀ ಹಸುಗಳ ಹಾಲಿನಿಂದ ಕರೋಟಿನೈಡ್ ಸಿಗುತ್ತಿದ್ದು, ಅದರಿಂದಾಗಿ ಕನ್ನಡಕಧಾರಿಗಳು ಕಡಮೆ ಇರುತ್ತಿದ್ದರು ಎಂದ ವಿಜ್ಞಾನಿ ಡಾ. ರಮೇಶ್ ಹಸುಗಳನ್ನು ಮೇಯಲು ಕಾಡಿಗೆ ಹೋಗದಂತೆ ತಡೆಯಬಾರದು. ಬಹಳಷ್ಟು ಬೀಜಗಳು ದನದ ಸೆಗಣಿಯಲ್ಲಿ ಹೊರಬಂದಾಗ ಮಾತ್ರ ಗಿಡಹುಟ್ಟಿ ಬೆಳೆಯುತ್ತವೆ ಎಂದು ದೇಶಿಯ ತಳಿಯ ಹಸುಗಳ ಮಹತ್ವವನ್ನು ತಿಳಿಸಿದರು.

ಪತ್ರಕರ್ತ ಕೆ.ಎನ್. ಚನ್ನೇಗೌಡ ಮಾತನಾಡಿ, ಗೋ ಶಾಲೆ ಆವರಣದಲ್ಲಿ ನಡೆದಿರುವ ಕೆಲಸ ಸಾರ್ಥಕವಾಗಿರುವಂತಹದ್ದು. ಪರಿಸರ ತಜ್ಞರು ರೂಪಿಸಿರುವ ಈ ಯೋಜನೆ ಸಫಲವಾಗಲು ಎಲ್ಲರ ಸಹಕಾರ ಅಗತ್ಯ ಎಂದು ಶ್ಲಾಘಿಸಿದರು.

ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗಡೆ ಮಾತನಾಡಿ, 53 ವರ್ಷಗಳಿಂದ ಶಿಕ್ಷಣ, ಆರೋಗ್ಯ, ಸಾಹಿತ್ಯ, ಗೋಸೇವೆ ಮುಂತಾದ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ನೋಂದಾಯಿತ ಸ್ವಯಂಸೇವಾ ಸಂಸ್ಥೆಯಾದ ರಾಷ್ಟ್ರೋತ್ಥಾನ ಪರಿಷತ್ ಇದೀಗ ಕಾಡು ಬೆಳೆಸಲು ನಿರ್ಧರಿಸಿದೆ. ಘಾಟಿ ಸುಬ್ರಹ್ಮಣ್ಯ ಪರಿಸರದ ದೇಸಿ ಗೋತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ನಡೆಯುತ್ತಿರುವ ಈ ಗೋಶಾಲೆಯಲ್ಲಿ 10 ಬಗೆಯ ದೇಶಿಯ ತಳಿಯ 500ಕ್ಕೂ ಅಧಿಕ ಹಸುಗಳನ್ನು ಸಾಕಲಾಗುತ್ತಿದೆ. ಇದೇ ಪರಿಸರದ 20 ಎಕರೆ ಜಾಗದಲ್ಲಿ ಕಾಡು ಬೆಳೆಸಲಾಗುವುದು. ಡಾ. ಯಲ್ಲಪ್ಪ ರೆಡ್ಡಿ ಅವರ ಮಾರ್ಗದರ್ಶನದಂತೆ ಇಲ್ಲಿನ ಅರಣ್ಯವನ್ನು ಇಡೀ ರಾಜ್ಯಕ್ಕೆ ಮಾದರಿಯನ್ನಾಗಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಹೇಳಿದರು.

ಬೆಂಗಳೂರಿನ ವಿವಿಧ ಐಟಿ ಕಂಪನಿಗಳಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವ ಶ್ರೀರಾಮ್, ಅರ್ಕಾವತಿ ಜಲಾನಯನ ಪ್ರದೇಶ ಸಮಿತಿಯ ರವೀಂದ್ರ, ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯ ಮುರುಳಿಧರ್, ಗೋ ಶಾಲೆಯ ಉಸ್ತುವಾರಿ ಜೀವನ್‌ಕುಮಾರ್ ಉಪಸ್ಥಿತರಿದ್ದರು.

ಸಾರ್ವಜನಿಕರೂ ಈ ಯೋಜನೆಯಲ್ಲಿ ಕೈಜೋಡಿಸಬಹುದು…

ನಮಗೆ ಸರ್ವವನ್ನೂ ನೀಡುವ ಪ್ರಕೃತಿಯ ಸಂರಕ್ಷಣೆಗೆ ಮುಂದಾಗೋಣ ಬನ್ನಿ…

ಕನಿಷ್ಠ ರೂ. 1000 ನೀಡಿದವರ ಹೆಸರಿನಲ್ಲಿ 2 ಗಿಡಗಳನ್ನು ನೆಟ್ಟು ಹಲವು ವರ್ಷಗಳ ಕಾಲ ಅವುಗಳನ್ನು ಪೋಷಿಸಿ, ಬೆಳೆಸಿ, ಸಂರಕ್ಷಿಸಲಾಗುವುದು.

Tags: ecological stepGhati Subhramanyarashtrotthana parishat
Share196Tweet123Send
Previous Post

ಬಾಂಗ್ಲಾದಲ್ಲಿ ದೊರೆತಿದೆ ಕೋಟ್ಯಾಂತರ ರೂ. ಬೆಲೆ ಬಾಳುವ ವಿಷ್ಣು ವಿಗ್ರಹ

Next Post

ನಿರಂತರ ಮಹಾಮಳೆಗೆ ಮುಂಬೈ ತತ್ತರ: ಪ್ರವಾಹ ಪರಿಸ್ಥಿತಿ, ಜನಜೀವನ ಅಸ್ತವ್ಯಸ್ತ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ನಿರಂತರ ಮಹಾಮಳೆಗೆ ಮುಂಬೈ ತತ್ತರ: ಪ್ರವಾಹ ಪರಿಸ್ಥಿತಿ, ಜನಜೀವನ ಅಸ್ತವ್ಯಸ್ತ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಉಗ್ರ ಹೋರಾಟ: ಮಾಜಿ ಡಿಸಿಎಂ ಈಶ್ವರಪ್ಪ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಉಗ್ರ ಹೋರಾಟ: ಮಾಜಿ ಡಿಸಿಎಂ ಈಶ್ವರಪ್ಪ

April 1, 2026
ಸಂಕೇತ್‌ ಸಮಾಧಿ ಧ್ವಂಸ | ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಆಗ್ರಹ

ಸಂಕೇತ್‌ ಸಮಾಧಿ ಧ್ವಂಸ | ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮಾಜಿ ಡಿಸಿಎಂ ಈಶ್ವರಪ್ಪ ಆಗ್ರಹ

April 1, 2026
ಶಿವಮೊಗ್ಗ | ಸರಣಿ ಅಪಘಾತಗಳಿಗೆ ಯಾರು ಹೊಣೆ? ಕ್ರೇಜ್’ಗೆ ಇನ್ನೊಬ್ಬರ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ

ಶಿವಮೊಗ್ಗ | ಸರಣಿ ಅಪಘಾತಗಳಿಗೆ ಯಾರು ಹೊಣೆ? ಕ್ರೇಜ್’ಗೆ ಇನ್ನೊಬ್ಬರ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ

April 1, 2026
ಮಳೆಯಿಂದಾಗಿ ಜನಸಾಮಾನ್ಯರಿಗೆ ಸಂಕಷ್ಟ: ಶಾಸಕ ಚನ್ನಬಸಪ್ಪ ವಿಷಾದ

ಮಳೆಯಿಂದಾಗಿ ಜನಸಾಮಾನ್ಯರಿಗೆ ಸಂಕಷ್ಟ: ಶಾಸಕ ಚನ್ನಬಸಪ್ಪ ವಿಷಾದ

April 1, 2026
ಏಪ್ರಿಲ್ ಫೂಲ್: ನಗು ಮತ್ತು ವಿವೇಚನೆಗಳ ಸಮಾಗಮ

ಏಪ್ರಿಲ್ ಫೂಲ್: ನಗು ಮತ್ತು ವಿವೇಚನೆಗಳ ಸಮಾಗಮ

April 1, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL