ಶಿವಮೊಗ್ಗ: ಮಲೆನಾಡಿನ ಚಿಣ್ಣರ ಸಾಧಕರ ಸಾಲಿಗೆ ಇನ್ನೊಬ್ಬ ಪೋರಿ ಸೇರ್ಪಡೆಗೊಂಡಿದ್ದು, ಶಿವಮೊಗ್ಗ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಹಾರಿಸಿದ್ದಾಳೆ.
ಅಶ್ವತ್ಥ್ ನಗರದ ಚಾಣಕ್ಯ ಪ್ರೀ ಸ್ಕೂಲ್’ನ ವಿದ್ಯಾರ್ಥಿನಿ ಶಿಬಾನಿ ಪಿ. ರಾಜು ಐದು ವರುಷದೊಳಗಿನ ದಸರಾ ರಾಜ್ಯಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಶಾಲೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಈ ಪುಟಾಣಿ ಅಶ್ವತ್ಥ್ ನಗರದ ಪ್ರೇಮ ಹಾಗೂ ಪೃಥ್ವಿರಾಜ್ ದಂಪತಿಗಳ ಪುತ್ರಿ. ಈ ಪ್ರತಿಭಾನ್ವಿತೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.
Discussion about this post