ಮೋದಿ ಅಮೆರಿಕಾಕ್ಕೆ ಹೋದರು. ಅಲ್ಲಿ ಹೌಡಿ ಕಾರ್ಯಕ್ರಮ ಹಮ್ಮಿಕೊಂಡಿತ್ತು, ಅದರಲ್ಲಿ ಮೋದಿಯವರು ಭಾಗವಹಿಸಿದ್ದರು. ಆದರೆ ಟ್ರಂಪ್’ಗೆ ಮೋದಿಯ popularity ಬಗ್ಗೆ ಗೊತ್ತಿದೆ. ಎದುರು ಹೇಳಿಕೊಳ್ಳಲು ಸ್ವಲ್ಪ ಮತ್ಸರವೂ, ಮುಜುಗರವೂ ಆಗುತ್ತದೆ. ಅಂದರೆ ಅಮೆರಿಕಾ ಈಗ ದೊಡ್ಡಣ್ಣನ ಸ್ಥಾನದಲ್ಲಿ ಅಲ್ವೋ?
ಟ್ರಂಪ್ ಅಲ್ಲೊಂದು ಯೋಚನೆ ಮಾಡಿದ. ಹೇಗೂ ನಮ್ಮ ರಾಷ್ಟ್ರದ ಕಾರ್ಯಕ್ರಮ. ಮೋದಿ ಬಂದರೆ ಲಕ್ಷ ಜನ ಸೇರುವುದಂತೂ ಖಂಡಿತ. ನಾನೂ ಮೋದಿಯವರಿಗೆ ಗೌರವ ನೀಡುವ ಕಾರ್ಯವೂ ಆಗುತ್ತದೆ, ಮುಂದಿನ ಚುನಾವಣೆಗೆ ಅಡಿಪಾಯವೂ ಆಯ್ತು ಎಂದು ಸೇರಿಕೊಂಡೇ ಬಿಟ್ಟರು. ಕೈಕೈ ಹಿಡಿದು ಗ್ರೌಂಡ್ ಸುತ್ತಾಡಿಯೇ ಬಿಟ್ಟರು.
ಪುಣ್ಯಕ್ಕೆ ಆ ಹುಡುಗ ಒಂದು ಸೆಲ್ಫಿ ತೆಗೆದುಕೊಂಡ. ಮೋದಿಯವರು ಹುಡುಗನನ್ನು ಬೆನ್ನು ತಟ್ಟಿ ತನ್ನ ಪ್ರೀತಿ ವಾತ್ಸಲ್ಯ ತೋರಿದರು. ಇದು ಮಾತ್ರ ಹೃದಯಾಂತರಾಳದ್ದೇ ಆದರೂ ಇಲ್ಲೊಂದು ಆಕರ್ಷಣೆಯೂ ಇರುತ್ತದೆ. ಟ್ರಂಪ್ shake hand ಕೊಟ್ಟು ನಾನೂ ಇಷ್ಟ ಪಟ್ಟೆ ಎಂದು ತೋರಿದರು.
ಇಲ್ಲಿ ಒಳ ಮರ್ಮಕ್ಕೆ ಬರೋಣ. ಮುಂದೆ ಮೋದಿಯವರು ಜಾಗತಿಕ ನಾಯಕರಾದರೆ, ದೊಡ್ಡಣತ್ವ ಭಾರತಕ್ಕೇ ಬಂದರೆ? ಎಂಬ ಆತಂಕವೂ ಟ್ರಂಪ್’ನಲ್ಲಿ ಇತ್ತು. ಆದರೆ ಮೋದಿಯವರ ಅಂತರಂಗದ politics ಬೇರೆಯೇ ಇದೆ. ಆ ಕಡೆ ಪಾಕಿಗೆ ಉರಿ ಹತ್ತಿಕೊಳ್ಳಲಿ, ಭಯೋತ್ಪಾದಕರಿಗೆ ಭಯ ಹುಟ್ಟಲಿ, ಭಾರತದ ಕೀರ್ತಿ ಪತಾಕೆ ಇಡೀ ವಿಶ್ವದಲ್ಲೇ ವಿಜ್ರಂಭಿಸಲಿ ಎಂಬುದೇ ಮೋದಿಯವರ ಹೃದಯಾಂತರಾಳದ ಚಿಂತನೆ. ಅಲ್ಲಿ ಕಸ ಹೆಕ್ಕಿದ ದೃಶ್ಯ, ಬಾಲಕನ ಸೆಲ್ಫಿ ಎಲ್ಲವೂ ಪ್ರಚಾರವಾಯ್ತು. ಮನುಷ್ಯತ್ವ ಎಂದರೇನು ಎಂಬುದನ್ನು ಜಗತ್ತಿಗೇ ತೋರಿಸಲು ಇದೊಂದು ಅವಕಾಶ ಮೋದಿಗೆ ವರವೂ ಆಯ್ತು.
ಮೋದಿಯವರಿಗೆ ಟ್ರಂಪ್ ಉಲ್ಟಾ ಆಡಲೂಬಹುದು ಎಂಬ ಭಾರತೀಯ ಪ್ರಜ್ಞಾವಂತ ಪ್ರಜೆಗಳಿಗೊಂದು ಗೊಂದಲವೂ ಆಗಿದೆ. ಆದರೆ ಆತಂಕ ಬೇಡ. ಟ್ರಂಪ್ ಜಾತಕದಲ್ಲಿ ಶನಿಯು 4 ಡಿಗ್ರಿ ದುರ್ಬಲ. ಅಂದರೆ ಹಿಂದು ಮುಂದಿನ ಯೋಚನೆ ಇಲ್ಲ. ಕೇವಲ ವರ್ತಮಾನದ ಚಿಂತನೆ. ಆದರೆ ನರೇಂದ್ರ ಮೋದಿಗೆ ಸಿಂಹ ರಾಶಿಯಲ್ಲಿ ಅತ್ಯಂತ ಬಲಿಷ್ಟ ಶನಿ 29.5 ಡಿಗ್ರಿಯಲ್ಲಿ ಇದ್ದಾನೆ. ಭೂತ, ವರ್ತಮಾನ, ಭವಿಷ್ಯ ಚಿಂತನೆ ಇದು. ಅಂದರೆ checkmate ಮಾಡುವುದರಲ್ಲಿ ಮೋದಿಯವರು ನಿಸ್ಸೀಮ. ಇನ್ನೂ ಹೇಳಬೇಕೆಂದರೆ, ಶತ್ರು ಚಾಪೆಯಡಿ ನುಗ್ಗಿ ಬಂದರೆ ಮೋದಿ ರಂಗೋಲಿಯಡಿ ನುಗ್ಗಿ ತಪ್ಪಿಸಿಕೊಳ್ಳುವವರು. ಟ್ರಂಪ್ ಬದಲಿಗೆ ರಷ್ಯಾ ಅಧ್ಯಕ್ಷ ಪುಟಿನ್ ಆಗುತ್ತಿದ್ದರೆ ಇಂತಹ ಸನ್ನಿವೇಶದಲ್ಲಿ ಸ್ವಲ್ಪ ಯೋಚಿಸಬೇಕಾಗುತ್ತಿತ್ತು. ಏನೇ ಆಗಲಿ ಈ ಸಲದ ಭೇಟಿ ದೇಶದ ಒಳಗಿನ ದ್ರೋಹಿಗಳಿಗೂ, ದೇಶದ ಹೊರಗಿನ ಭಯೋತ್ಪಾದಕರಿಗೂ ಭಯ ಹುಟ್ಟಿಸಿದ್ದಂತೂ ಸತ್ಯವೇ.
Discussion about this post