ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅಂದು ಇಂದಿರಾ ಗಾಂಧಿ ಅವರು ಇಡಿಯ ಭಾರತಕ್ಕೆ ತಮ್ಮ ಸ್ವಂತಕ್ಕೊ ಅಥವಾ ದೇಶದ ಒಳಿತಿಗಾಗಿಯೋ ಇಡಿಯ ಭಾರತವನ್ನು ಎಮರ್ಜೆನ್ಸಿ ಎಂಬ ಕರಾಳ ಅಧ್ಯಾಯದ ಭಾರತಕ್ಕೆ ತಂದೊಡ್ಡಿದರು.
ಅಂದು ಹಲವಾರು ಸ್ವಯಂ ಸೇವಕರು ಹಾಗೂ ಸಂಘದ ಹಲವಾರು ಸೇವಕರು ತಮ್ಮದೇ ಶೈಲಿಯಲ್ಲಿ ಅದನ್ನು ವಿರೋಧಿಸಿದರು.
ಆದರೆ ಇಂದಿನ ಎಮರ್ಜೆನ್ಸಿ ಯಾವ ಪಕ್ಷದ ಪ್ರಣಾಳಿಕೆಗೊ ಅಥವಾ ಪಕ್ಷದ ಸ್ವಾರ್ಥ ಅಥವಾ ಹಿತಾಸಕ್ತಿಗೊ ಅಲ್ಲಾ ಜನರ ರಕ್ಷಣೆ ಮತ್ತು ಜನರ ಆರೋಗ್ಯದ ದೃಷ್ಟಿಯಿಂದ ಇದು ಮಾಡಿದ್ದಾರೆ.
ಆದರೆ ಇದು ನಿಜವಾದ ಕಾರಣ ಅಲ್ಲವೇ ಅಲ್ಲ. ಹಲವಾರು ದಿನಗಳ ಹಿಂದೆ ಜಗತ್ತಿನ ಅತ್ಯುತ್ತಮ ಆಸ್ಪತ್ರೆ ಹಾಗೂ ಮುಂದುವರಿದ ದೇಶಗಳು ತಮ್ಮಲ್ಲಿ ಇನ್ನು ಮುಂದೆ ಏನು ಮಾಡಲು ಆಗಲ್ಲ ಎಂದು ಕೈ ಚೆಲ್ಲಿ ಕುಳಿತಿವೆ.
ಇದು ಹರಡಲು ಮೂಲ ಕಾರಣ ಚೀನಾ ಹಾಗೂ ಇಟಲಿ ಜನವರಿಯಿಂದಿಚೆಗೆ ಇಟಲಿಯಲ್ಲಿ ವಾಸವಿರುವ ಜನರು ಚೀನಿಯರನ್ನು ತಬ್ಬಿಕೊಳ್ಳುವ ಒಂದು ವಿಶೇಷ ಹಬ್ಬ ಆಚರಿಸುವ ಸಂಪ್ರದಾಯ ಅಲ್ಲಿದೆ ಇದರ ಪರಿಣಾಮವಾಗಿ ಅಲ್ಲಿ ಆ ಮಟ್ಟಿಗೆ ಹರಡಿದೆ ಎಂಬ ಒಂದು ವಿಶ್ಲೇಷಣೆ ಹೇಳುತ್ತದೆ.
ಇನ್ನು ಹಲವು ವಿಶ್ಲೇಷಣೆಗಳು ಚೀನಾ ತನ್ನ ಜಿಡಿಪಿ ಹೆಚ್ಚಿಸಲು ಜೈವಿಕ ಅಸ್ತ್ರವನ್ನಾಗಿ ಕರೊನ ಎಂಬ ಅಸ್ತ್ರ ಪ್ರಯೋಗ ಮಾಡಿದೆ ಎಂಬ ಸಣ್ಣ ಅನುಮಾನ ಜಗತ್ತಿನೆಲ್ಲೆಡೆ ಹಬ್ಬಿದೆ.
ಭಾರತ ಲಾಕ್ ಡೌನ್ ಮಾಡಿದರೆ ಭಾರತಕ್ಕೆ ನಷ್ಟ ಆದರೆ ಭಾರತ ವಿದೇಶದಂತೆ ಹೆಣಗಳ ರಾಶಿ ಬೀಳದಂತೆ ನೋಡಿಕೊಳ್ಳುವುದು ಒಂದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯ ಆಗಿರುತ್ತದೆ…
ಆದರೆ ಕೇವಲ ಸರ್ಕಾರದ ಕರ್ತವ್ಯ ಆಗದೆ ನಮ್ಮದೇ ಜವಾಬ್ದಾರಿ ಹಾಗೂ ಮನೆಯಲ್ಲೇ ಕೂರುವುದು ನಮ್ಮ ಹಕ್ಕು ಎಂದು ಅರಿತುಕೊಂಡರೆ ಸಾವಿರಾರು ಹೆಣಗಳ ರಾಶಿಯನ್ನು ನಿಲ್ಲಿಸಲು ನಮ್ಮದೊಂದು ಸಣ್ಣ ಅಳಿಲು ಸೇವೆ ಸಲ್ಲಿಸಿದಂತಾಗುತ್ತದೆ.
Get in Touch With Us info@kalpa.news Whatsapp: 9481252093
Discussion about this post