ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಕಿಂಗ್ ಸ್ಟಾರ್ ಯಶ್ #RockingStarYash ಅಭಿನಯದ ಟಾಕ್ಸಿಕ್ ಸಿನಿಮಾ ಸೆಟ್’ಗಾಗಿ ನೂರಾರು ಮರಗಳನ್ನು ನಾಶ ಮಾಡಿರುವ ಗಂಭೀರ ಆರೋಪ ಎದುರಾಗಿದ್ದು, ಖುದ್ದು ಅರಣ್ಯ ಸಚಿವರೇ ಸ್ಥಳ ಪರಿಶೀಲನೆ ನಡೆಸಿ, ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಎಚ್ ಎಂಟಿ ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ಟಾಕ್ಸಿಕ್ ಸಿನಿಮಾ #ToxicMovie ಶೂಟಿಂಗ್’ಗಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಲಾಗಿದೆ ಎಂಬ ಆರೋಪವನ್ನು ಸ್ವತಃ ಅರಣ್ಯ ಸಚಿವರೇ ಮಾಡಿರುವುದು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಈ ಆರೋಪದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಚಿತ್ರತಂಡದ ವಿರುದ್ಧ ಅರಣ್ಯ ಅಪರಾಧ ಪ್ರಕರಣ ದಾಖಲಿಸುವ ಕುರಿತು ಚಿಂತನೆಯೂ ನಡೆದಿದೆ.

ಚಿತ್ರತಂಡದ ಮೇಲಿನ ಆರೋಪವೇನು?
ಟಾಕ್ಸಿಕ್ ಸಿನಿಮಾ ಚಿತ್ರೀಕರಣದ ಸೆಟ್’ಗಾಗಿ ನೂರಾರು ಮರಗಳನ್ನು ಕಡಿದು ನಾಶ ಮಾಡಲಾಗಿದೆ. ಸೆಟ್ ಪೂರ್ವದ ಹಾಗೂ ಸೆಟ್ ಬಳಿಕ ಹಾಕಿರುವ ಸ್ಯಾಟಲೈಟ್ ಫೋಟೋ ಇದ್ದು, ಅಕ್ರಮವಾಗಿ ಅರಣ್ಯ ಪ್ರದೇಶವನ್ನು #Forest ಬಳಸಿಕೊಳ್ಳಲಾಗಿದೆ.
Also read: ಮಕ್ಕಳ ಪ್ರತಿಭೆ ಗುರುತಿಸುವುದು ನಮ್ಮೆಲ್ಲರ ಕರ್ತವ್ಯ: ನಿವೃತ್ತ ಪೋಲೀಸ್ ವರಿಷ್ಠಾಧಿಕಾರಿ ಚಬ್ಬ

ಆದರೆ, ಈ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಚಿತ್ರತಂಡ, ಸೆಟ್ ಹಾಕಲು ಅನುಮತಿ ಕರಾರು ಪತ್ರಕ್ಕೆ ಸಹಿ ಹಾಕುವ ಮುನ್ನ ತೆಗೆದ ಸ್ಯಾಟಲೈಟ್ ಫೋಟೋ ನಮ್ಮ ಬಳಿಯೂ ಇದ್ದು, 2022 ರಲ್ಲೇ ದಾಖಲಾದ ಸ್ಯಾಟಲೈಟ್ ಫೋಟೋ ಸಾಕ್ಷಿ ಇದೆ ಎಂದಿದೆ.
ನಾವು ಯಾವುದೇ ಪರಿಸರ ನಾಶ ಮಾಡಿಲ್ಲ. ಬದಲಾಗಿ, ಖಾಲಿ ಇದ್ದ ಜಾಗವನ್ನೇ ಬಳಸಿಕೊಂಡು ಸೆಟ್ ನಿರ್ಮಾಣ ಮಾಡಿದ್ದೇವೆ. ಸೆಟ್ ಹಾಕೋದಕ್ಕೂ ಮುನ್ನ ಅಲ್ಲಿನ ಚಿತ್ರಣದ ದಾಖಲೆ ಇದೆ ಎಂದು ಹೇಳಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post