ಲಂಡನ್: ಪಾಕಿಸ್ಥಾನಕ್ಕೆ ಕಾಶ್ಮೀರವನ್ನು ಆಳುವ ತಾಕತ್ತು ಇಲ್ಲ ಎಂದಿರುವ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ, ಕಾಶ್ಮೀರವನ್ನು ಸ್ವತಂತ್ರ ದೇಶ ಮಾಡುವುದೇ ಈ ಸಮಸ್ಯೆಗೆ ಪರಿಹಾರ ಎಂದಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಪಾಕಿಸ್ಥಾನಕ್ಕೆ ನಾಲ್ಕು ಪ್ರಾಂತ್ಯಗಳನ್ನು ಆಳುವ ತಾಕತ್ತು ಇಲ್ಲ. ಹೀಗಾಗಿ, ಕಾಶ್ಮೀರಕ್ಕಾಗಿ ಪಾಕ್ ಬೇಡಿಕೆ ಇಡುವುದು ಸರಿಯಲ್ಲ. ಪಾಕಿಸ್ಥಾನವನ್ನು ನಡೆಸಲೇ ಹಾಗೂ ಉಗ್ರಗಾಮಿಗಳನ್ನು ಹತ್ತಿಕ್ಕಿ, ಜನರನ್ನು ರಕ್ಷಿಸುವಲ್ಲಿ ವಿಫಲವಾಗಿದ್ದು, ಜನ ಸಾಯುವುದು ಹೇಯ ಹಾಗೂ ನೋವನ್ನು ಉಂಟು ಮಾಡುತ್ತಿದೆ ಎಂದು ಪಾಕ್ ವಿರುದ್ಧ ಕಿಡಿ ಕಾರಿದ್ದಾರೆ.
ಇನ್ನು, ಕಾಶ್ಮೀರ ಸಮಸ್ಯೆಗೆ ಸರಳ ಪರಿಹಾರ ಇದೆ ಎಂದಿರುವ ಆಫ್ರಿದಿ, ಕಾಶ್ಮೀರವನ್ನು ಸ್ವಾತಂತ್ರ ದೇಶ ಮಾಡಿದರೆ, ಎಲ್ಲ ರೀತಿಯ ಸಮಸ್ಯೆಗಳು ಪರಿಹಾರವಾಗುತ್ತದೆ. ಇದರಿಂದ ಅಲ್ಲಿ ಶಾಂತಿ ನೆಲೆಸುತ್ತದೆ ಎಂದಿದ್ದಾರೆ.
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
Kalpa Media House | Manipal | Manipal Institute of Technology (MIT), Manipal, a constituent unit of Manipal Academy of Higher...
Read moreDetails
















