ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪ್ರಾಣ ಇದೆ ಎನ್ನುವುದು ಮನುಷ್ಯನ ಉಸಿರಾಟವನ್ನು ಗಮನಿಸಿದಾಗ. ಉಸಿರು ನಿಂತರೆ ಶವ. ಅಂದರೆ ಹೆಸರು ಇರುವುದು ಉಸಿರಿಗಷ್ಟೇ. ಉಸಿರು ನಿಂತ ದೇಹವನ್ನು ’ಬಾಡಿ’ ಎಂದು ಬಿಡುತ್ತೇವೆ. ಸುಪ್ತ ಪ್ರಜ್ಞೆಯಲ್ಲಿ ಅದಾಗಲೇ ಉಸಿರಿನ ಮತ್ತು ಜೀವದ ಸಂಬಂಧ ನಮಗೆ ದಾಖಲಾಗಿದೆ.
ಪ್ರಾಣ ಎಂದರೆ ಆತ್ಮ, ಅಸು ಎಂದು ಋಗ್ವೇದದಲ್ಲಿ ಉಲ್ಲೇಖಗಳಿವೆ. ಕಾಲದ ಅಧಿಪತಿಗಳು ಸೂರ್ಯ ಮತ್ತು ಯಮ ಎಂದು ಕಾಲಯಾನ ಕೃತಿಯಲ್ಲಿ ಸದ್ಯೋಜಾತರು ಹೇಳಿದ್ದಾರೆ. (ವಿಸ್ತಾರವಾದ ಓದಿಗೆ ಆಸಕ್ತರು ಗಮನಿಸಿ).
ನೀವು ಗಮನಿಸಿರಬಹುದು, ಮನುಷ್ಯ ಕೋಪಗೊಂಡಾಗ ಉಸಿರಿನ ಲಯ ತೀವ್ರಗತಿಯಲ್ಲಿ ಇರುತ್ತದೆ ಮತ್ತು ದೇಹ ದಣಿಯುತ್ತದೆ. ಹೀಗೆ ಸದಾ ಕೋಪದಲ್ಲೆ ಬುಸುಗುಡುತ್ತಾ ಇರುವವರು ತಮ್ಮ ದೇಹವನ್ನು ಶಿಥಿಲಗೊಳಿಸಿಕೊಳ್ಳುತ್ತಾರೆ. ಅದರಿಂದಲೇ ರಕ್ತದೊತ್ತಡ ತರಹದ ಕಾಯಿಲೆಗಳು ದೇಹವನ್ನು ಆವರಿಸುತ್ತವೆ.ಬಹಳ ಬಾರಿ ವೈದ್ಯರು ಸಹ ಯೋಗ, ಧ್ಯಾನ, ವಾಕಿಂಗ್, ವ್ಯಾಯಾಮ ಮಾಡಿ ಎಂದು ಪರಿಹಾರ ಸೂಚಿಸುತ್ತಾರೆ. ಪ್ರಾಣಾಯಾಮದಲ್ಲಿ ಉಸಿರನ್ನು ನಿಯಂತ್ರಣ ಮಾಡುವ ವ್ಯಾಯಾಮ ಮಾಡುತ್ತೇವೆ.
ಪೂರಕ, ಕುಂಭಕ ಮತ್ತು ರೇಚಕ ಎಂಬ ಮೂರು ಹಂತಗಳು. ಪೂರಕ ಎಂದರೆ ಉಸಿರನ್ನು ಒಳಗೆ ಎಳೆದುಕೊಳ್ಳುವುದು, ಕುಂಭಕ ಎಂದರೆ ಉಸಿರನ್ನು ಹಿಡಿದಿಟ್ಟುಕೊಳ್ಳುವ ಮತ್ತು ರೇಚಕ ಎಂದರೆ ಉಸಿರು ಹೊರಹಾಕುವ ಪ್ರಕ್ರಿಯೆಗಳು.
ಶ್ವಾಸಪ್ರಶ್ವಾಸಯೋರ್ಗತಿ ವಿಚ್ಛೇಧಹ ಪ್ರಾಣಾಯಾಮಹ ಎನ್ನುತ್ತದೆ ಪತಂಜಲಿ ಯೋಗ ಸೂತ್ರ. ಅಂದರೆ ಶ್ವಾಸ ನಿಶ್ವಾಸಗಳ ಗಮನವನ್ನು ಅಡಗಿಸುವವರೆಗೆ ಪ್ರಾಣಾಯಾಮ ಮಾಡಬೇಕು. ಉಸಿರಿನ ಲಯದ ಮೂಲಕ ಮನಸಿನ ಚಂಚಲತೆಯ ನಿಯಂತ್ರಣ ಮಾಡುವ ಪ್ರಕ್ರಿಯೆ. ಅಂದರೆ ಪ್ರಾಣ, ಮನಸ್, ಇಂದ್ರಿಯಗಳ ಸಮನ್ವಯ ಸಾಧಿಸಿ ಧ್ಯಾನಸ್ಥ ಸ್ಥಿತಿಗೆ ಏರುವ ಹಂತವನ್ನು ಸಾಧ್ಯವಾಗಿಸುತ್ತದೆ. ಪ್ರಾಣಾಯಾಮವನ್ನು ಸಂಧ್ಯಾವಂದನೆಯ ಭಾಗವಾಗಿ, ಯೋಗ, ಧ್ಯಾನದ ಭಾಗವಾಗಿ ಸಹ ಮಾಡಲಾಗುತ್ತದೆ. ಪ್ರಾಣಾಯಾಮದ ಸ್ವರೂಪ ಪ್ರಣವ ಅಥವಾ ಈ ಸೃಷ್ಟಿಯಲ್ಲಿ ಇರುವ ನಾದ ಝೇಂಕಾರ ಎನ್ನಲಾಗುತ್ತದೆ. ಅದಕ್ಕೆ ಪರಬ್ರಹ್ಮನೇ ಋಷಿ, ಪರಮಾತ್ಮನೇ ದೇವತೆ, ಗಾಯತ್ರೀ ಛಂಧಸ್ಸು ಎನ್ನಲಾಗುತ್ತದೆ.
ಪ್ರಾಣಾಯಾಮದಲ್ಲಿ ದೇಹದ ಏಳೂ ಚಕ್ರಗಳನ್ನು ಧ್ಯಾನಿಸಲಾಗುತ್ತದೆ ಮತ್ತು ಭೂಲೋಕದಿಂದ ಸತ್ಯ ಲೋಕದವರೆಗೆ ಊರ್ಧ್ವ ಮುಖವಾಗಿ ಪ್ರಾಣಾಯಾಮದ ಮೂಲಕ ಜಪಿಸಲಾಗುತ್ತದೆ. ಹೀಗೆ ಪ್ರಾಣ, ಮನಸ್ ಇಂದ್ರಿಯಗಳ ಚಂಚಲತೆ ನಶಿಸಿ, ಮನಸು ಏಕಾಕಾರವಾಗಿ ಭೂಲೋಕದಿಂದ ಸತ್ಯ ಲೋಕದವರೆಗೆ ಧ್ಯಾನಿಸುತ್ತಾ, ದೇಹದ ಮೂಲಾಧಾರದಿಂದ ಸಹಸ್ರಾರದವರೆಗೆ ಅನುಸಂಧಾನ ಮಾಡಿ ಬ್ರಹ್ಮ ತತ್ವವನ್ನು ಅರಿಯುವ ಸಾಧನವೇ ಪ್ರಾಣಾಯಾಮ.
ಈ ಜಗತ್ತಿನ ಪ್ರಣವ ಸ್ವರೂಪವನ್ನರಿಯಲು ಪ್ರಾಣಾಯಾಮ ಮತ್ತು ಧ್ಯಾನಗಳು ಸಹಾಗಾಯತ್ರಿ ಮಂತ್ರದ ಸಂಪೂರ್ಣ ಅರ್ಥ ನಿಮಗಾಗಿ ಗಾಯತ್ರೀ ಮಂತ್ರ ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಬ್ರಹ್ಮ ಪವಿತ್ರವಾದ ಸೂರ್ಯ ನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ ಅತ್ಯಂತ ಪ್ರಭಾವಶಾಲಿಯಾದುದು. ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ನಮ್ಮ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ನಮ್ಮ ಜನ್ಮವನ್ನು ನಾವೇ ಉದ್ಧಾರ ಮಾಡಿಕೊಳ್ಳಬಹುದಾದ ದಿವ್ಯಮಂತ್ರವಾಗಿದೆ ಎಂದರೆ ತಪ್ಪಾಗಲಾರದು.
ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್॥
ಬೆಳಕಿನ ಪ್ರತೀಕವಾದ ಸೂರ್ಯದೇವನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ನಮ್ಮ ಬುದ್ಧಿ ಮತ್ತು ಕರ್ಮಗಳು ಸದಾ ಉತ್ತಮ ಮಾರ್ಗದಲ್ಲಿ ನೆಲೆಗೊಳ್ಳುವಂತೆ ಪ್ರಚೋದಿಸು’ ಎಂದು ಪ್ರಾರ್ಥಿಸುವ ಮಹಾಮಂತ್ರವೇ ಗಾಯತ್ರಿಮಂತ್ರ. ಒಟ್ಟು 24 ಅಕ್ಷರಗಳನ್ನು ಒಳಗೊಂಡಿರುವ ಗಾಯತ್ರೀ ಮಂತ್ರವನ್ನು ನಿತ್ಯ ಜಪಿಸುವುದರಿಂದ ದೇಹದ ಆರಿಸಿದ 24 ಗ್ರಂಥಿಗಳನ್ನು ಬಲಗೊಳಿಸುತ್ತದೆ. ಪವಿತ್ರ ಗಾಯತ್ರಿ ಉಚ್ಚಾರದ ಮೊದಲಿಗೆ ಭೂಃ ಭುವಃ ಸ್ವಃ ಎಂಬ ವ್ಯಾಕೃತಿಗಳು ಚೈತನ್ಯರೂಪಿ ಆನಂದದ ಪ್ರತೀಕಗಳು. ಭೂಃ ಎಂದರೆ ಅಗ್ನಿ, ಭುವಃ ಎಂದರೆ ವಾಯು, ಸ್ವಃ ಎಂದರೆ ಆದಿತ್ಯ. ಈ ಮೂವರೂ ಕೂಡಿಕೊಂಡ ರೂಪ ಭಗವಾನ್ ಸೂರ್ಯನದು. ಸರ್ವಶಕ್ತಿರೂಪನ ಭಕ್ತಿಯುತ ಪೂಜೆಗೆ ಇದು ನಾಂದಿ.
ಯುಗಯುಗಗಳಿಂದಲೂ ಈ ಮಂತ್ರವನ್ನು ಅಗ್ನಿಸಮ್ಮುಖದಲ್ಲೇ ಸ್ವೀಕರಿಸುತ್ತ ಬಂದ ವಾಡಿಕೆ ನಮ್ಮದು. ಅಗ್ನಿಸಮ್ಮುಖದಲ್ಲೇ ಸ್ವೀಕರಿಸಲಾಗುವ ಏಕ ಮಾತ್ರ ಮಂತ್ರ ಇದು. ಇದರಲ್ಲಿ ಗಾಯತ್ರಿ ಪ್ರತಿಪಾದ್ಯವಾದ 24 ಭಗವಂತನ ರೂಪಗಳಿವೆ.ಕೇಶವ, ನಾರಾಯಣ, ಮಾಧವ, ಗೋವಿಂದ, ವಿಷ್ಣು , ಮಧುಸೂದನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷೀಕೇಶ, ಪದ್ಮನಾಭ, ದಾಮೋದರ, ಸಂಕರ್ಷಣ, ವಾಸುದೇವ, ಪ್ರದ್ಯುಮ್ನ , ಅನಿರುದ್ಧ, ಪುರುಷೋತ್ತಮ, ಅಧೋಕ್ಷಜ, ನರಸಿಂಹ, ಅಚ್ಯುತ, ಜನಾರ್ದನ, ಉಪೇಂದ್ರ, ಹರಿ, ಕೃಷ್ಣ.
ಅಷ್ಟೇ ಅಲ್ಲ ಗಾಯತ್ರಿಯಲ್ಲಿ ಹತ್ತು ಶಬ್ದಗಳಿವೆ ಅವು ವಿಷ್ಣುವಿನ 10 ಸ್ವರೂಪಗಳುವಿಷ್ಣುವಿನ ಹತ್ತು ಅವತಾರಗಳನ್ನು ಸೂಚಿಸುತ್ತದೆ.
ತತ್ ಅಂದರೆ ಮತ್ಸ್ಯಾವತಾರತತ್ ಭಗವಂತನ ಮತ್ಸ್ಯಾವತಾರವನ್ನು ಹೇಳುವ ಶಬ್ದ. ತತ ಅಂದರೆ ವಿಸ್ತಾರಗೊಳ್ಳುವುದು. ಹೀಗೆ ಮಾನವನಾದ ವೈವಸ್ವತ ಮನುವನ್ನು ಒಂದು ಭಾರಿ ಪ್ರಳಯದಿಂದ ಕಾಪಾಡಿದ ರೂಪವೇ ಮತ್ಸ್ಯಾವತಾರ.
ಸವಿತುಃ ಅಂದರೆ ಕೂರ್ಮಾವತಾರ ಆಮೆಯ ರೂಪದಲ್ಲಿ ಅವತರಿಸಿ ದೇವತೆಗಳು ತಾವು ಕಳೆದುಕೊಂಡ ಅಮರತ್ವ ಹಾಗೂ ದೈವಿಕ ಶಕ್ತಿ, ಪ್ರಭಾವಗಳನ್ನು ಮರು ಸಿಗುವಂತೆ ಮಾಡಿಕೊಟ್ಟ ರೂಪ ಕೂರ್ಮಾವತಾರ.
ವರೇಣ್ಯಂ ಅಂದರೆ ವರಾಹಾವತಾರ ವರೇಣ್ಯ, ವರಾಹ ಎರಡೂ ಪರ್ಯಾಯ ಶಬ್ದಗಳು. ಕಪಿರ್ವರಾಹ ಶ್ರೇಷ್ಠಶ್ಚ ವರಾಹ ಅಂದರೆ ಶ್ರೇಷ್ಠವಾದದ್ದು. ದೈತ್ಯ ಹಿರಣ್ಯಾಕ್ಷನು ಭೂಮಿಯನ್ನು ಕದ್ದು ಆಕೆಯನ್ನು ಆದಿಸ್ವರೂಪದ ನೀರಿನಲ್ಲಿ ಬಚ್ಚಿಟ್ಟಾಗ, ವಿಷ್ಣು ಆಕೆಯನ್ನು ಕಾಪಾಡಲು ವರಾಹನಾಗಿ ಕಾಣಿಸಿಕೊಂಡು ರಾಕ್ಷಸ ಹಿರಣ್ಯಾಕ್ಷನನ್ನ ಸಂಹಾರ ಮಾಡುತ್ತಾನೆ.
ಭರ್ಗಃ ಅಂದರೆ ನರಸಿಂಹಾವತಾರ, ಶತ್ರುಗಳನ್ನು ನಾಶಮಾಡಿದ ಉಗ್ರರೂಪ ಭಕ್ತ ಪ್ರಹ್ಲಾದನ ರಕ್ಷಣೆ ಮತ್ತು ಹಿರಣ್ಯಕಶ್ಯಪೂವಿನ ನಾಶಕ್ಕಾಗಿ ಶ್ರೀ ವಿಷ್ಣು ನರಸಿಂಹ ಅವತಾರ ತಾಳುತ್ತಾನೆ. ದುಷ್ಟರನ್ನು, ದೋಷಗಳನ್ನು, ಅಜ್ಞಾನವನ್ನು ನಾಶಮಾಡಿ ಅದರ ಮೂಲಕ ಭ ರತಿ ಜ್ಞಾನರೂಪ ಇದಾಗಿದೆ.
ದೇವಸ್ಯ ಅಂದರೆ ವಾಮನಾವತಾರಬಲಿಯ ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರ ವಾಮನಾವತಾರ. ಬಲಿಯ ಜೊತೆಗೆ ಮೂರು ಹೆಜ್ಜೆಗಳ ವ್ಯವಹಾರ ಮಾಡಿದ ರೂಪ ಇದಾಗಿದೆ.
ಧೀಮಹಿ ಅಂದರೆ ಪರಷುರಾಮಾವತಾರ ಮಹಿ’ ಅಂದರೆ ಭೂಮಿ. ದಿನು ಅಂದರೆ ಪುಷ್ಟೌ. ಭೂಮಿಯ ಮೇಲೆ ಇಪ್ಪತ್ತೊಂದು ಬಾರಿ ದುಷ್ಟ ಕ್ಷತ್ರಿಯರ ಸಂಹಾರ ಮಾಡಿ ಭೂಮಿಗೆ ಸಂತೋಷವನ್ನು ಕೊಟ್ಟ ರೂಪವೇ ಪರುಷರಾಮಾವತಾರ
ಧಿಯಃ ಅಂದರೆ ರಾಮಾವತಾರ
ಯಂ ಅಂದರೆ ಜ್ಞಾನ ಸ್ವರೂಪರಾದಂತ ವಾಯುದೇವ ಅವನಿಗೆ ದಿನೋತಿ ಆನಂದವನ್ನು ಕೊಟ್ಟ ರೂಪ ಧಿಯಃ ಅಂದರೆ ರಾಮರೂಪ. ದುಷ್ಟ ಶಿಕ್ಷಕ ಶಿಷ್ಟ ರಕ್ಷಕನಾಗಿ ಅಯೋಧ್ಯೆಯ ಸೂರ್ಯವಂಶದ ದಶರಥ ನಂದನ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಮಾಡುತ್ತಾನೆ.
ಯಃ ಅಂದರೆ ಕೃಷ್ಣಾವತಾರ ಯಕಾರ ವಾಚ್ಯನಾಗಿ , ಯಃ-ಜ್ಞಾನಾವತಾರ. ಒಟ್ಟು ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಕರ್ಮ, ಧ್ಯಾನ ಮತ್ತು ಜ್ಞಾನ ಮಾರ್ಗಗಳನ್ನು ನೀಡಿ ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳನ್ನು ಸಮಾಗಮವಾದ ಭಗವದ್ಗೀತೆಯ ಮೂಲಕ ಸಮಸ್ತ ವೇದಸಾರವನ್ನು ಆವಿಷ್ಕಾರ ಮಾಡಿದವ ಕೃಷ್ಣ. ಅದುವೇ ಕೃಷ್ಣಾವತಾರ.
ನಃ ಅಂದರೆ ಬುದ್ಧಾವತಾರ, ನಃ ಅಂದರೆ ಬುದ್ಧ. ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದವ. ಕಲಿಯುಗದಲ್ಲಿ ಬುದ್ಧ ಅವತಾರದಲಿ ಶ್ರೀಮಾನ್ ಮಹಾವಿಷ್ಣುವು ಮನುಷ್ಯನಾಗಿ ಅವತರಿಸುತ್ತಾನೆ.
ಪ್ರಚೋದಯಾತ್ ಅಂದರೆ ಕಲ್ಕ್ಯಾವತಾರ
ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಧರ್ಮಸಂಸ್ಥಾಪನೆಗೆ ಪರಮಾತ್ಮ ಕಾಲಕಾಲಕ್ಕೆ ಯಾವುದೋ ಒಂದು ರೂಪದಲ್ಲಿ ಭೂಮಿಗೆ ಇಳಿದು ಬಂದು ಹೇಗೆ ಕಾಪಾಡುತ್ತಾನೆ ಅನ್ನುವುದರ ಬಗ್ಗೆ ಸ್ಪಷ್ಟವಾಗಿ ಗಾಯತ್ರಿಯ ಮಂತ್ರದಲ್ಲಿ ಧರ್ಮ ಸಂಸ್ಥಾಪನಾದ ವಿಷ್ಣುವಿನ ಹತ್ತು ಅವತಾರಗಳ ಬಗ್ಗೆ ಮಂತ್ರದಲ್ಲಿ ಉಲ್ಲೇಖವಿದೆ. ಯಕವಾಗುತ್ತವೆ.
ನಾಳೆ: ಉಪನಯನ ಎಂದರೇನು? ಲೇಖನ ಸರಣಿ-7: ಆಚಮನ ವಿಧಿ
Get in Touch With Us info@kalpa.news Whatsapp: 9481252093
Discussion about this post