ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶ್ರೀ ಗುರುಭ್ಯೋ ನಮಃ
ಮೊದಲಿಗೆ ಬ್ರಾಹ್ಮಣ ಜನ್ಮ ಪಡೆದಂತಹ ನಾವು ಎಷ್ಟೋ ಪುಣ್ಯವನ್ನು ಮಾಡಿರತಕ್ಕವರೇ, ಈ ಜನ್ಮದ ಸಾರ್ಥಕತೆ ಮಾಡಿಕೊಳ್ಳಲು ನಾವು ನಮ್ಮ ಜೀವನದ ಮುಖ್ಯ ಸಂಸ್ಕಾರವಾದ ಸಂಧ್ಯಾವಂದನೆ ಮಾಡತಕ್ಕದ್ದು, ಈ ಸಂಧ್ಯೆ ಕ್ರಿಯೆಯಲ್ಲಿ ಆಚಮನ ವಿಧಿಯ ಕುರಿತು ನಾನು ಇಂದು ಇಲ್ಲಿ ತಿಳಿಸಿಕೊಡುತ್ತಿದ್ದೇನೆ.
ಆಚಮನ ಎಂದರೆ ಒಂದು ಶುದ್ಧೀಕರಣ ಪ್ರಕ್ರಿಯೆ, ನಾವು ಸಂಧ್ಯಾವಂದನೆ ಕ್ರಿಯೆಗೂ ಮೊದಲು ನಮ್ಮ ಅಂತರಂಗ ಹಾಗೂ ಬಹಿರಂಗ ಶುದ್ದಿ ಮಾಡಿಕೊಳ್ಳುವ ಪ್ರಕ್ರಿಯೆ. ಈ ಮಂತ್ರಚಾಮನೆ ಕ್ರಿಯೆಯಿಂದ ದೈಹಿಕ ಹಾಗು ಮಾನಸಿಕ ತೊಂದರೆಗಳಿಂದ ಮುಕ್ತಿ ಇರುವುದು. ಹಾಗು ಇದನ್ನು (ನಾಮ ತ್ರೆಯಿ ವಿದ್ಯೆ) ಎಂದರೆ ಮೂರು ಹೆಸರಿನ ಆರಾಧನೆ ಎಂದು ಕರೆಯಲ್ಪಡುತ್ತದೆ.
ವಿಧಿ
ಕೈಕಾಲು ಚೆನ್ನಾಗಿ ತೊಳೆದುಕೊಂಡು, ಪೂರ್ವಾಭಿಮುಖವಾಗಿ ಕುಳಿತು ಶುದ್ಧ ಜಾಗದಲ್ಲಿ ಕುಳಿತು ಬಲ ತೋಳನ್ನು ಮಂಡಿಯ ಮಧ್ಯದಲ್ಲಿಟ್ಟುಕೊಂಡು ಯಜ್ನೋಪಯುಕ್ತನಾಗಿ ಕಾಲುಗಳನ್ನು ಹೆಚ್ಚು ಕಡಿಮೆ ಇಲ್ಲದೆ ಸಮ ಮಾಡಿಕೊಂಡು, ಕುಕ್ಕುರು ಕಾಲಿನಲ್ಲಿ ಕುಳಿತು, ಜುಟ್ಟು ಗಂಟು ಹಾಕಿ ಆಚಮನ ಮಾಡಬೇಕು.
ಆಚಮನ ಮಾಡಬೇಕಾದರೆ ಪಾಲಿಸಬೇಕಾದ ನಿಯಮಗಳು
-ನಿಂತು ಆಚಮನ ಮಾಡಬಾರದು
-ಬೇರೆಯವರ ನೋಡಬಾರದು, ಮಾತನಾಡಬಾರದು
-ಕ್ರಿಯೆಯಲ್ಲಿ ಅವಸರ ಪಡಬಾರದು
-ಕೋಪಯುಕ್ತನಾಗಿರಬಾರದು
-ಆಚಮನದ ನೀರು ಶುದ್ಧವಾಗಿ ಮಡಿಯುಕ್ತವಾಗಿರಬೇಕು
-ನೀರು, ಬಿಸಿಯಾಗಿ, ನೊರೆಯಿಂದ, ರುಚಿಯುಕ್ತ, ವಾಸನೆಯುಕ್ತವಾಗಿ ಇರಬಾರದು
-ನೊರೆಯುಕ್ತ ನೀರಿನಿಂದ ಆಚಮನ ಮಾಡಿದರೆ ಅದು ಮದ್ಯಕ್ಕೆ ಸಮಾನ
ಬ್ರಾಹ್ಮಣನ ಜೀವನದಲ್ಲಿ ತೀರ್ಥಗಳ ಮಹತ್ವ ಹಾಗು ಅವುಗಳ ವಿಧಿ
ಬ್ರಾಹ್ಮಣನ ಬಲಗೈನಲ್ಲಿ ದೇವತೀರ್ಥ, ಪಿತೃತೀರ್ಥ, ಬ್ರಹ್ಮ ತೀರ್ಥ, ಪ್ರಜಾಪತಿ ತೀರ್ಥ ಹಾಗೂ ಸೌಮ್ಯ ತೀರ್ಥ ಎಂಬ 5 ವಿಧವಾದ ತೀರ್ಥಗಳು ಅಡಕವಾಗಿ ಇರುತ್ತವೆ.
ಎಲ್ಲಿ ಈ ತೀರ್ಥಗಳು ಅಡಕವಾಗಿರುತ್ತವೆ
(1 ) ಬ್ರಹ್ಮ ತೀರ್ಥ – ಅಂಗುಷ್ಠದ ಮೇಲಿಂದ ಬರತ್ತಕ್ಕ ನೀರು (ಆಚಮನ ವಿಧಿಯಲ್ಲಿ)
(2 ) ಪ್ರಜಾಪತಿ ತೀರ್ಥ -ಕಿರುಬೆರಳಿನ ತುಧಿಯಿಂದ ಬರುವಂಥದ್ದು (ಸೋಮದೇವತೆಗೆ, ಅಣ್ಣ ನಿರ್ವಪಣ, ಅಗ್ನಿಗೆ ಗಾಳಿ ಹಾಕುವುದು ಇತ್ಯಾದಿ)
(3 )ದೈವ ತೀರ್ಥ -ಅಂಗುಲಿಯ ತುಧಿಯಿಂದ ಬರುವಂಥದ್ದು(ದೈವ ಕಾರ್ಯಕ್ಕೆ ಉತ್ತಮ, ವೈಶ್ವದೇವ, ಭೂತ ಯಜ್ಞಾದಿ ಇತ್ಯಾದಿಗಳಲ್ಲಿ ಮಾಡತಕ್ಕದ್ದು)
(4 )ಪಿತೃ ತೀರ್ಥ -ತರ್ಜನಿ ಹಾಗೂ ಅಂಗುಷ್ಟ ಮಧ್ಯೆಯ ರೇಖೆ ಕೊನೆಗೆ ಬರುವುದು (ಪಿತೃ ದೇವತೆಗಳಿಗೆ ತರ್ಪಣ ನೀಡುವುದು)
(5 ) ಸೌಮ್ಯ ತೀರ್ಥ -ಅಂಗೈ ಮಧ್ಯೆ ಇರತಕ್ಕಂಥದ್ದು(ಕಮಂಡಲದಿಂದ ಮಾಡುವ ಆಚಮನ)
ಆಚಮನ ವಿಧಿ-ಹೇಗೆ ಮಾಡಬೇಕು
(ಕೈ ಬೆರಳು ಒಟ್ಟಾಗಿ ಸೇರಿಸಿ, ಮಂತ್ರಸಮೇತ ಜಲ ಸೇವಿಸುವಾಗ ಬಾಯಲ್ಲಿ ಸದ್ದಾಗದಂತೆ, ಮೂರು ಬಾರಿಯೂ ಏಕಾಗ್ರಚಿತ್ತನಾಗಿ ಮಾಡಬೇಕು)
ಮೊದಲಬಾರಿ ಭುಜಿಸಿದಾಗ ಋಗ್ವೇದವು
ಎರಡನೇ ಬಾರಿ ಭುಜಿಸಿದಾಗ ಯಜುರ್ವೇದವು
ಮೂರನೇ ಬಾರಿ ಭುಜಿಸಿದಾಗ ಸಾಮವೇದವು
ದಕ್ಷಿಣ ಅಂಗುಷ್ಟ ಮೂಲದಿಂದ ಮೊದಲ ಬಾರಿ ಮುಖ ಮಾರ್ಜನ ಮಾಡಿದರೆ ಅಥರ್ವಣ ವೇದವು ತೃಪ್ತಿ ಆಗುತ್ತವೆ.
ಎರಡನೇ ಬಾರಿ ಮುಖಮಾರ್ಜನೆ ಮಾಡಿದರೆ ಇತಿಹಾಸ, ಪುರಾಣಗಳು ಲಭ್ಯವಾಗುವವು.
ಆಚಮನ ವಿಧಿಯ ಜಲ ಪ್ರೋಕ್ಷಣೆ ಹಾಗು ಅವುಗಳ ಮಹತ್ವ
ತಲೆಗೆ ಪ್ರೋಕ್ಷಣೆ ಮಾಡುವುದರಿಂದ-ರುದ್ರ
ಶಿಖಾ ಪ್ರೋಕ್ಷಣೆ ಮಾಡುವುದರಿಂದ-ಋಷಿಗಳು ತೃಪ್ತಿ ಪಡುತ್ತಾರೆ
ಕಣ್ಣು ಸ್ಪರ್ಶದಿಂದ-ಸೂರ್ಯ ಸಂಪ್ರೀತನಾಗುತ್ತಾನೆ
ನಾಸಿಕ ಸ್ಪರ್ಶದಿಂದ-ವಾಯು ಸಂಪ್ರೀತನಾಗುತ್ತಾನೆ
ಶ್ರೋತೃಗಳ ಸ್ಪರ್ಶದಿಂದ-ದಿಕ್ಕುಗಳ ತೃಪ್ತಿ
ತೋಳುಗಳಿಗೆ ಪ್ರೋಕ್ಷಿಣೆಯಿಂದ-ಯಮ, ಕುಬೇರ, ವರುಣ, ಇಂದ್ರ, ಅಗ್ನಿ ತೃಪ್ತಿ ಪಡುತ್ತಾರೆ
ನಾಭಿ ಸ್ಪರ್ಶದಿಂದ-ಪ್ರಾಣ ಗ್ರಂಥಿಗಳು ತೃಪ್ತಿಯಾಗುತ್ತವೆ
ಪಾದಗಳ ಪ್ರೋಕ್ಷಣೆಯಿಂದ-ಮಹಾವಿಷ್ಣು ಸಂಪ್ರೀತನಾಗುತ್ತಾನೆ
ಭೂಸ್ಪರ್ಶ ಮಾಡಿದ ನೀರಿಂದ ದೇಹ ಪ್ರೋಕ್ಷಣೆ ಮಾಡಿದರೆ-ವಾಸುಕಿ ಹಾಗು ನಾಗರಗಳು ತೃಪ್ತಿ ಪಡುತ್ತಾರೆ
ಇಂದ್ರಿಯಗಳ ತೃಪ್ತಿ ಪಡಿಸುವ ವಿಧಾನ
(1) ಹೆಬ್ಬೆಟ್ಟು ಹಾಗೂ ತರ್ಜನಿ ಸೇರಿಸಿ ಮಾಡೋ ಪ್ರೋಕ್ಷಣೆ-2 ಕಣ್ಣು ಶುದ್ಧವಾಗುತ್ತದೆ
(2)ಹೆಬ್ಬೆಟ್ಟು ಹಾಗೂ ಅನಾಮಿಕ ಸೇರಿಸಿ ಮಾಡೋ ಪ್ರೋಕ್ಷಣೆ-ಮೂಗು ಶುದ್ಧವಾಗುತ್ತದೆ
(3)ಮಧ್ಯಮ ಹಾಗೂ ಅಂಗುಷ್ಠದಿಂದ ಮಾಡಿದ ಪ್ರೋಕ್ಷಣೆ-ಬಾಯಿ ಶುದ್ಧವಾಗುತ್ತದೆ
(4)ಕನಿಷ್ಠ ಹಾಗೂ ಅಂಗುಷ್ಟ ಸೇರಿ ಮಾಡಿ ಪ್ರೋಕ್ಷಣೆ-ಕಿವಿಗಳು ಶುದ್ಧವಾಗುತ್ತವೆ
ನಂತರದಲ್ಲಿ ಎಲ್ಲ ಬೆರಳುಗಳಲಿಂದ ಭುಜವನ್ನು, ಅಂಗುಷ್ಠದಿಂದ ನಾಭಿ ಮಂಡಲ ಸ್ಪರ್ಶಿಸಬೇಕು, ಕೊನೆಗೆ ಬೆರಳುಗಳಿಂದ ಶಿರವನ್ನು ಸ್ಪರ್ಶಿಸಬೇಕು.
ಬ್ರಾಹ್ಮಣನ ಕೈ ಬೆರಳುಗಳ ತತ್ವಗಳು
ಅಂಗುಷ್ಟ-ಅಗ್ನಿ
ತರ್ಜನಿ-ವಾಯು
ಅನಾಮಿಕ-ಸೂರ್ಯ
ಮಧ್ಯಮ-ಬ್ರಹ್ಮ ದೇವತೆ
ಕನಿಷ್ಠಕ -ಇಂದ್ರ
ಎಂದು ತಿಳಿಯಬೇಕು.
ಇದೆ ಕಾರಣದಿಂದ ಬ್ರಾಹ್ಮಣ ಪೂಜಾ ಯೋಗ್ಯನೂ ಹಾಗೂ ಸರ್ವದಯಾಮಯನು ಆಗಿರುವನು. ಆಚಮನ ಮಾಡಿದಾಗ ನೀರು ಹೃದಯ ಬಾಗ ಸೇರಿದರೆ ಬ್ರಾಹ್ಮಣ ಪರಿಪೂರ್ಣನಾಗಿ ಶುದ್ಧನಾಗುತ್ತಾನೆ. ಬ್ರಾಹ್ಮಣನ ಕೈಗಳ ಮಧ್ಯೆ ರೇಖೆಗಳನ್ನು ಗಂಗಾಧಿ ಸಮಸ್ತ ನಧಿಗಳೆಂದು ತಿಳಿಯತಕ್ಕದ್ದು, ಬೆರಳುಗಳ ಗಿಣ್ಣಿನ ಗೆರೆಗಳು ಪರ್ವತ ಎಂದು ತಿಳಿಯಬೇಕು. ಇದೇ ಕಾರಣಕ್ಕೆ ಬ್ರಾಹ್ಮಣನ ಬಲಗೈ ಸರ್ವ ದೇವಮಯವಾದುದು.
ನಾಳೆ ಉಪನಯನ ಎಂದರೇನು? ಲೇಖನ ಸರಣಿ-8: ಗಾಯತ್ರೀ ಮಂತ್ರದ ಮಹತ್ವ
Get in Touch With Us info@kalpa.news Whatsapp: 9481252093
Discussion about this post