ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶ್ಲೋಕ ಉತ್ತಮಾ ತಾರಕೋಪೇತಾ ಮಧ್ಯಮಾಲುಪ್ತತಾರಕಾಃ ಅಧಮಾ ಸೂರ್ಯಸಹಿತ ಪ್ರಾತಃ ಸಂಧ್ಯಾ ತ್ರಿಧಾಮತಾ. ಅಂದರೆ ಪ್ರಾತಃಕಾಲದಲ್ಲಿ ಅರುಣೋದಯ ಮೊದಲು ನಕ್ಷತ್ರಗಳಿರುವಾಗಲೇ ಸಂಧ್ಯಾವಂದನೆ ಪ್ರಾರಂಭ ಮಾಡಿ ಸೂರ್ಯೋದಯವಾಗುವವರೆಗೆ ಮುಗಿಸುವುದು ಉತ್ತಮ ಪರ್ಯಾಯ.
ಸಂಧೌಭವಾಸಂಧ್ಯಾ ಎಂಬ ಅವಯವಾರ್ಥದ ಪ್ರಕಾರ‌್ಸಂಧಿ ಕಾಲದಲ್ಲಿ ಉತ್ಪನ್ನವಾಗುವ ಪರಮೇಶ್ವರಿ ಶಕ್ತಿಯು ಸಂಧ್ಯಾ ಎನಿಸಿಕೊಳ್ಳುವುದು. ಈ ಶಕ್ತಿಗೆ ವಂದನೆ ಮಾಡುವದಕ್ಕೆ ಸಂಧ್ಯಾವಂದನೆ ಎನ್ನುವರು. ಬೆಳಗಿನ ಝಾವ ನಾಲ್ಕು ಗಂಟೆಗಳ ಕಾಲ ಸತ್ವಗುಣ ಎನಿಸಿಕೊಳ್ಳುವುದು. ಈ ಕಾಲದಲ್ಲಿ ನಕ್ಷತ್ರಗಳು ಮುಳುಗುವುದರೊಳಗಾಗಿ ಪ್ರಾತಃಸಂಧ್ಯಾವಂದನೆಯನ್ನು ಮಾಡುವುದು ಉತ್ತಮ. ನಕ್ಷತ್ರಗಳು ಮುಳುಗಿ ಸೂರ್ಯನು ಉದಯಿಸುವುದರೊಳಗಾಗಿ ಸಂಧ್ಯಾವಂದನೆಯನ್ನು ಪುರೈಸುವುದು ಮಧ್ಯಮ. ಸೂರ್ಯನು ಹುಟ್ಟಿದ ಮೇಲೆ ಸಂಧ್ಯಾವಂದನೆಯನ್ನು ಸತ್ವಗುಣ ಕಾಲವು ಮುಗಿಯುವುದರೊಳಗಾಗಿ ಮುಗಿಸುವದು ಅಧಮ ಪರ್ಯಾಯ.
ಮಧ್ಯಾಹ್ನಿಕ ಸಂಧ್ಯಾಕಾಲ
ಸೂರ್ಯನು ನೆತ್ತಿಯ ಮೇಲೆ ಇರುವ ಕಾಲವೇ ಮಧ್ಯಾಹ್ನಿಕಕ್ಕೆ ಮುಖ್ಯವಾದ ಕಾಲ. ಇದಕ್ಕಿಂತ ಮುಂಚಿತವಾಗಲೀ ಅಥವಾ ಅನಂತರವೇ ಆಗಲಿ ಶ್ರೇಷ್ಠವಲ್ಲ.
ಸಾಯಂ ಸಾಂಧ್ಯಾಕಾಲ
ಶ್ಲೋಕ ಉತ್ತಮ ಸೂರ್ಯ ಸಹಿತಾ ಮಧ್ಯಮಾಲುಪ್ತಸೂರ್ಯಕಾ ಅಧಮಾ ತಾರಕೋಪೇತಾ ಸಾಯಂಸಂಧ್ಯಾ ತ್ರಿಧಾಮತಾ ಅಂದರೆ ಸೂರ್ಯನು ಅರ್ದ ಮುಳುಗುತ್ತಿರುವಾಗಲೇ ಸಂಧ್ಯಾವಂದನೆ ಮಾಡುವುದು ಉತ್ತಮ. ಸೂರ್ಯನು ಅಸ್ತಮಿತನಾಗಿ ನಕ್ಷತ್ರಗಳು ಹುಟ್ಟುವುದಕ್ಕೆ ಮುಂಚೆಯೇ ಸಂಧ್ಯಾವಂದನೆ ಮಾಡುವುದು ಮಧ್ಯಮ. ನಕ್ಷತ್ರಗಳು ಹುಟ್ಟಿದ ಮೇಲೆ ಮಾಡುವುದು ಅಧಮ. ಮಧ್ಯಾಹ್ನ ನಾಲ್ಕು ಘಂಟೆಯಿಂದ ರಾತ್ರಿ ಎಂಟು ಘಂಟೆಯವರೆಗೆ ಸಾತ್ವಿಕ ಕಾಲ ಎನಿಸಿಕೊಳ್ಳುವುದು. ನಿರ್ಧಿಷ್ಟ ಕಾಲದಲ್ಲಿ ಪ್ರಾತಃ ಸಂಧ್ಯಾವಂದನೆಯನ್ನಾಗಲಿ, ಸಾಯಂಸಂಧ್ಯಾವಂದನೆಯನ್ನಾಗಲಿ ಸತ್ವಗುಣಕಾಲದ ಒಳಗಾಗಿ ಮಾಡಲು ಅಶಕ್ತರಾದ ಪಕ್ಷದಲ್ಲಿ ಕರ್ಮವನ್ನು ಖಂಡಿತವಾಗಿ ಬಿಡದೆ ಅಧಮ ಪಕ್ಷವಾದ ಸತ್ವಗುಣಕಾಲಾವಕಾಶ ನಂತರವಾದರೂ ಆಚರಿಸಬೇಕು.
ಸಂಧ್ಯಾಕರ್ಮವನ್ನು ಆಚರಿಸದೇ ಇತರ ಯಾವ ದೇವತಾ ಪೂಜೆಯನ್ನಾಗಲೀ, ದಾನ, ಧರ್ಮ, ಪರೋಪಕಾರಗಳನ್ನಾಗಲಿ ಮಾಡಿದರೂ ಸಾರ್ಥಕವಾಗುವದಿಲ್ಲ . ಇಹಪರಗಳೆರಡಕ್ಕೂ ಸಾಧನವಾದ ಸಂಧ್ಯಾಕರ್ಮವನ್ನು ಪ್ರತಿ ನಿತ್ಯವೂ ಅವಶ್ಯಕವಾಗಿ ಆಚರಿಸಬೇಕು.
(ವಿವಿಧ ಮೂಲಗಳಿಂದ)
(ನಾಳೆ: ಉಪನಯನ ಎಂದರೇನು? ಲೇಖನ ಸರಣಿ-10: ಜಪ ಎಂದರೇನು? ಜಪದಲ್ಲಿ ಎಷ್ಟು ವಿಧ?)
Get in Touch With Us info@kalpa.news Whatsapp: 9481252093
Discussion about this post