ಬೆಂಗಳೂರು: ಸ್ಟಾರ್ ನಟ ಜಗ್ಗೇಶ್ ಆ ಸ್ಥಳಕ್ಕೆ ಸಾಧಾರಣ ಲುಂಗಿ ಉಟ್ಟು, ಕಾಲಿಗೆ ಹವಾಯ್ ಚಪ್ಪಲಿ ಹಾಗೂ ತಲೆಗೆ ಮಂಕಿ ಟೋಪಿ ಧರಿಸಿ ತೆರಳಿದ್ದು, ಈಗ ವೈರಲ್ ಆಗಿದೆ. ಹಾಗಾದಾರೆ, ಅವರು ಹಾಗೆ ತೆರಳಿದ್ದು ಎಲ್ಲಿಗೆ?
ಅದಕ್ಕೆ ಉತ್ತರ ಕೆಜಿಎಫ್ ಚಿತ್ರ ವೀಕ್ಷಣೆಗೆ. ಹೌದು ಈ ಅನುಭವವನ್ನು ಅವರೇ ಸ್ವತಃ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಲುಂಗಿ ಹವಾಯ್ ಚಪ್ಪಲಿ ಮಂಕಿಕ್ಯಾಪ್: ಹಾಕಿ ಬಹಳ ದಿನದ ನಂತರ ಒಬ್ಬನೆ ಮುಂದಿನ ಕ್ಲಾಸ್ ಗೆ ಹೋಗಿ #ಕೆಜಿಎಫ್ ನೋಡಿದೆ.. ೩೮ವರ್ಷದ ಹಿಂದೆ ನಾನು ಹೀಗೆ ಸಿನಿಮಾಗೆ ಹೋಗುತ್ತಿದ್ದದ್ದು!
ಲುಂಗಿ ಹವಾಯ್ ಚಪ್ಪಲಿ ಮಂಕಿಕ್ಯಾಪ್
ಹಾಕಿ ಬಹಳ ದಿನದ ನಂತರ ಒಬ್ಬನೆ ಮುಂದಿನ ಕ್ಲಾಸ್ಗೆ ಹೋಗಿ #kgf ನೋಡಿದೆ..38ವರ್ಷದ ಹಿಂದೆ ನಾನು ಹೀಗೆ ಸಿನಿಮಾಗೆ ಹೋಗುತ್ತಿದ್ದದ್ದು!
ಹಾಗೆ ಹೋದದ್ದು ಸಾಮಾನ್ಯ ಜೀವನ enjoy ಮಾಡಲು..ಕಾರಾಪುರಿ ಟೀ #interval ನಲ್ಲಿ ಮಜನೀಡಿತು..ಯಾರು ಗುರುತು ಹಿಡಿಯದಂತೆ ಜಾಗ್ರತೆ ವಹಿಸಿದೆ
ಕಾರಣ ಏಕಾಂತ enjoyment..— ನವರಸನಾಯಕ ಜಗ್ಗೇಶ್ (@Jaggesh2) December 25, 2018
ಹಾಗೆ ಹೋದದ್ದು ಸಾಮಾನ್ಯ ಜೀವನ ಎಂಜಾಯ್ ಮಾಡಲು.. ಕಾರಾಪುರಿ ಟೀ ಇಂಟರ್‌ವಲ್‌ನಲ್ಲಿ ಮಜನೀಡಿತು.. ಯಾರು ಗುರುತು ಹಿಡಿಯದಂತೆ ಜಾಗ್ರತೆ ವಹಿಸಿದೆ. ಕಾರಣ ಏಕಾಂತ ಎಂಜಾಯ್‌ಮೆಂಟ್ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇನ್ನು, ಚಿತ್ರಮಂದಿರದ ತಮ್ಮ ಇನ್ನೊಂದು ಅನುಭವವನ್ನೂ ಸಹ ಜಗ್ಗೇಶ್ ಹಂಚಿಕೊಂಡಿರುವುದು ವಿಶೇಷ. ನನ್ನಪಕ್ಕ ಸುಮಾರು 17 ಪ್ರಾಯ ಹುಡುಗ ಹೋಟೆಲ್ ಸರ್ವರ್ ಕೂತಿದ್ದ! ಅವನ ಜೊತೆ ದ್ವನಿ ಬದಲಾಯಿಸಿ ನಡುನಡುವೆ ಚರ್ಚಿಸುತ್ತಿದೆ. ಪ್ರತಿ ಪ್ರಶ್ನೆಗೆ ಅವನ ಉತ್ತರ ಚಿಂದಿ ಅನ್ನುತ್ತಿದ್ದ! ಅವನು ಪಕ್ಕ ದರ್ಶನ ಫ್ಯಾನ್ ಅಂತೆ! ಅವನು ಹೇಳಿದ ಮಾತು ಕಣ್ಣು ಒದ್ದೆಯಾಯಿತು! ಕನ್ನಡ ಗೆಲ್ಲಬೇಕು ಸಾರ್, ಮಗಂದು ಬರಿ ಬೇರೆ ಭಾಷೆಗೆ ಜೈ ಅಂತಾರೆ ಈಗ ಅವರ ಪುಂಗಿ ಬಂದ್ ಅಂದ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
#kgf ನನ್ನಪಕ್ಕ ಸುಮಾರು 17ಪ್ರಾ ಹುಡುಗ ಹೋಟೆಲ್ ಸರ್ವರ್ ಕೂತಿದ್ದ!ಅವನಜೊತೆ ದ್ವನಿಬದಲಾಯಿಸಿ ನಡುನಡುವೆ ಚರ್ಚಿಸುತ್ತಿದೆ ಪ್ರತಿಪ್ರಶ್ನೆಗೆ ಅವನ ಉತ್ತರ ಚಿಂದಿಅನ್ನುತ್ತಿದ್ದ!ಅವನು ಪಕ್ಕ ದರ್ಶನ #fan ಅಂತೆ!ಅವನು ಹೇಳಿದ ಮಾತು ಕಣ್ಣುಒದ್ದೆಯಾಯಿತು!ಕನ್ನಡ ಗೆಲ್ಲಬೇಕು ಸಾರ್ ಮಗಂದು ಬರಿ ಬೇರೆ ಭಾಷೆಗೆ ಜೈಅಂತಾರೆ ಈಗ ಅವರ ಪುಂಗಿಬಂದ್ ಅಂದ 👍🙏
— ನವರಸನಾಯಕ ಜಗ್ಗೇಶ್ (@Jaggesh2) December 25, 2018














