ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮನುಷ್ಯನದ್ದಾಗಲೀ, ಇತರ ಪ್ರಾಣಿಗಳದ್ಧಾಗಲೀ ದೇಹದಲ್ಲಿ ಕಂಠದಲ್ಲಿ ಕಂಠರೋಹಿಣಿ ಎಂಬ ಭಾಗ ಇದೆ. ಲಘುನ್ಯಾಸದಲ್ಲಿ ಪರಶಿವನ ಲಿಂಗಾರ್ಚನೆ ಮಾಡುವಾಗ ಕಂಠ ಕಲ್ಪನೆಯನ್ನು ಮಾಡಿ, ’ಕಂಠೇ ವಸವಸ್ತಿಷ್ಠಂತು’ ಎಂದು ಸ್ಪರ್ಷ ಮಾಡುತ್ತಾರೆ. ವಸ ಎಂದರೆ ಮೇಧಸ್ಸು ಎಂಬ ಅರ್ಥವಿದೆ. ಇದು ಬೇರೆ ಬೇರೆ ಯಕ್ಷ್ಮಾದಿ ಸೂಕ್ತಗಳಲ್ಲಿ ದೇಹ ರಕ್ಷಾರ್ಥವಾಗಿ ಜಪಿಸುವಾಗ ಕಂಠಕ್ಕೆ ಬಹಳ ಪ್ರಾಮುಖ್ಯತೆ ಕೊಡಲಾಗಿದೆ. ಯಾಕೆ? ಇದರ ಹಿಂದೆ ಬಲಿಷ್ಟವಾದ ವೈಜ್ಞಾನಿಕತೆ ಇದೆ.
ಯಾವುದೇ ಆಹಾರ, ಗಾಳಿ ಬಾಯಿಯ ಮೂಲಕ ದೇಹದೊಳಗೆ ಪ್ರವೇಶಿಸುವಾಗ ಸಿಗುವ ಮೊದಲ ದ್ವಾರವೇ ಕಂಠ. ಇಲ್ಲೊಂದು security station ಇದೆ.(ಹೇಗೆ ಈಗ ಕರೋನ ವ್ಯಾಧಿ ಪೀಡಿತರೋ ಎಂದು ಪರೀಕ್ಷಿಸಲು ಅದ್ಯಾವುದೋ monitor ಉಪಕರಣದಲ್ಲಿ ಮೊದಲ stepನಲ್ಲಿ ಈ ಸಾಧನ ಬಳಸುವಂತೆ) ನಾವು ತಿನ್ನುವ ಸಕಲ ಆಹಾರವಾಗಲೀ, ಗಾಳಿಯೇ ಆಗಲಿ ಅದರಲ್ಲಿ ಬಾಹ್ಯದಿಂದ ಒಳಬಂದಾಗ ಈ ದ್ವಾರ ದಾಟುತ್ತಿದ್ದಂತೆ ಅಲ್ಲೊಂದು first checking ಇರುತ್ತೆ. ಅದು ಆಹಾರ ಮತ್ತು ಗಾಳಿಯಲ್ಲಿದ್ದ ವಿಷವನ್ನು absorb ಮಾಡಿಕೊಂಡು ಜಠರಕ್ಕೆ ಶುದ್ಧ ಆಹಾರವನ್ನೂ, ಶ್ವಾಸಕೋಶಗಳಿಗೆ ಶುದ್ಧ ಗಾಳಿಯನ್ನೂ ಕಳುಹಿಸುತ್ತದೆ. ಈ ವಿಷ ಸಂಗ್ರಹಣೆಯ ಭಾಗವನ್ನು ಶಿವನ ಚಿತ್ರದಲ್ಲಿ ನೀಲ ವರ್ಣದ ಮೂಲಕ ಸೂಚಿಸಿದೆ. ವಿಷ ಅಂದರೆ ಸಯನೈಡ್. ದೇಹದ ಒಳಗೆ ಆಹಾರವು ಕನಿಷ್ಟವಾಗಿ ವಿಷವನ್ನೂ produce ಮಾಡುತ್ತದೆ.
ಜಾತಕದಲ್ಲಿ ರಾಹುವಿನ ಮೂಲಕ ಈ ವಿಚಾರ ತಿಳಿಯಬೇಕು. 108 elementsಗಳನ್ನು ನಮ್ಮ ಆಹಾರ ಉತ್ಪತ್ತಿ ಮಾಡುತ್ತದೆ. ನವಾಂಶಗಳು 108. ಇದು ಅದರ ಸೂಚಕ. ಇದು ಕೇವಲ ಮಾನವನಲ್ಲಿ ಮಾತ್ರವಲ್ಲ, ಸಕಲ ಚರಾಚರ ಜೀವರಾಶಿಗಳಲ್ಲೂ ಇರುತ್ತದೆ. ಮನುಷ್ಯರಿಗೆ ಆಹಾರದಲ್ಲಿ ಇದಕ್ಕೆ ವಿರುದ್ಧವಾಗ ವಿಷವಸ್ತು ಒಳ ಹೊಕ್ಕರೆ ಅಪಾಯ ಬರುತ್ತದೆ. ಆದರೂ ಅದಕ್ಕೆ ತಕ್ಕಂತಹ ಔಷಧೋಪಚಾರಗಳೂ ಇವೆ. ತಿಳಿದಿರಬೇಕಷ್ಟೆ.
ಸಾಮಾನ್ಯ ಸಸ್ಯಾಹಾರಿ ಮನುಷ್ಯರು ಪ್ರಕೃತಿಯಲ್ಲಿ ಲಭಿಸುವ ಎಲ್ಲಾ ಕಾಯಿ, ಹಣ್ಣುಗಳನ್ನು ತಿನ್ನೋಲ್ಲ. ಅದಕ್ಕೊಂದು ನಿಯಮವೇ ಆಗಿಬಿಟ್ಟಿದೆ. ಪ್ರಾಣಿಗಳೂ ಎಲ್ಲವನ್ನೂ ತಿನ್ನುವುದಿಲ್ಲ. ಅದು ಆರೋಗ್ಯಕರ, ಇದು ಅನಾರೋಗ್ಯ ಎಂಬ ವಿಂಗಡನೆಗಳಿವೆ. ಅದೇ ರೀತಿ ಮಾಂಸಾಹಾರದಲ್ಲೂ ನಿಯಮಗಳಿವೆ. ಮೀನು, ಕೋಳಿ, ಕುರಿ, ಹಂದಿ ಇತ್ಯಾದಿ ಪೌಷ್ಟಿಕ ಎಂದು ಅದನ್ನು ತಿನ್ನಲು ಶುರು ಮಾಡಿದರು. ಅದರೂ ಅವುಗಳ ಕತ್ತಿನ ಭಾಗವು ವಿಷವಾಗಿರುವುದರಿಂದ(ನನಗೆ ಲಭಿಸಿದ ಮಾಹಿತಿ ಪ್ರಕಾರ) ಅದನ್ನು ಕೊಯ್ದು ಬಿಸಾಡುತ್ತಾರೆ. ಆದರೆ ಈಗೇನಾಗಿದೆ ಅಂದರೆ ಪ್ರಾಣಿಗಳೆಲ್ಲವೂ ಮಾಂಸಾಹಾರ ಎಂದಾಗಿಬಿಟ್ಟಿದೆ.
ಗೋವು ಕೇವಲ ಹಾಲಿಗಾಗಿ ಮಾತ್ರ ಇರುವುದು. ಅದನ್ನೂ ತಿಂದರು. ಚೈನಾದಲ್ಲಂತೂ ಹುಳ ಹುಪ್ಪಟೆ, ಹಾವುಗಳನ್ನೂ ಬಿಡೋದಿಲ್ಲ. ಅದಕ್ಕೊಂದು wet market ರೂಪುಗೊಂಡಿದೆ. ಇಷ್ಟೆಲ್ಲ ಆದ ಮೇಲೆ ಮನುಷ್ಯನ ಕತ್ತಿನಲ್ಲಿರುವ poison Absorber dead ಆಗ್ತಾ ಹೋಯ್ತು. ಹೊಸ ಹೊಸ ರೋಗಗಳು entry ಕೊಟ್ಟವು. ಸದ್ಯ ಕರೋನವೇ ಅತಿದೊಡ್ಡ ಮಾರಿಯಾಗಿದೆ. ಔಷಧಿಯೂ ಲಭ್ಯವಾಗದೆ ಇದ್ದಾಗ ಮರಣವೇ ಗತಿ.
ಇನ್ನೊಂದೆಡೆ ಪ್ರಕೃತಿ ನಿಯಮ ವಿರುದ್ಧ ಆಹಾರ ಸೇವನೆ ಅಂದರೆ ಸಮಯಾಸಮಯವಿಲ್ಲದ ಆಹಾರ ಸೇವನೆ, ದೇವತಾ ಭಕ್ತಿ ಶ್ರದ್ಧೆ ಇಲ್ಲ. ಹಳೆಯ ಸಂಪ್ರದಾಯಗಳು ಮೂಢನಂಬಿಕೆಯಾಯ್ತು. ಅಜ್ಜಿ ಮಾಡಿದ ಉದ್ದಿನ ದೋಸೆಗೆ ಬೆಲೆಯಿಲ್ಲ. ವಿದೇಶೀ ಸಂಪ್ರದಾಯದ ಪಿಜ್ಜ-ಗಿಜ್ಜ, ಬರ್ಗರ್ ಗಿರ್ಗರ್ ಶ್ರೇಷ್ಟತೆ ಪಡೆಯಿತು. ದ್ರವ ಪಾನೀಯ ಪಾನಕ ಹಳೆಯದಾಯ್ತು. ಹೊಸ ಹೊಸ ಚಿಲ್ಡ್ soft drinks famous ಆಯ್ತು. ಹೀಗೇ ಮುಂದುವರಿಯುತ್ತಾ ಇನ್ನೂ ಏನೇನೋ ಹೊಸ ಹೊಸ ರೋಗ ಸೃಷ್ಟಿಯಾಗುತ್ತೋ ಏನೊ ಗೊತ್ತಿಲ್ಲ. ಅಂತೂ ಮನುಕುಲ ನಾಶಕ್ಕೆ ಮನುಷ್ಯರೇ ಕಾರಣವಾಗುತ್ತಾ ಇದ್ದಾರೆ. ಆದರೆ ಸದ್ಯ ಪೂರ್ಣ ನಾಶ ಆಗುವ ಸಮಯ ಅಲ್ಲ ಇದು. ಎಂದೋ ಒಂದು ದಿನ ಆಗಲಿದೆ. ಅಲ್ಲಿಯವರೆಗೆ ಹೀಗೆ ಏರು ಪೇರು. ಇದನ್ನು ಪ್ರಕೃತಿಯೇ ನಿಯಂತ್ರಿಸಿಕೊಳ್ಳುತ್ತಾಳೆ.
ನಮ್ಮ ಪೂರ್ವಜರು ಆಹಾರ ವಿಚಾರದಲ್ಲಾಗಲೀ, ಜೀವನ ಕ್ರಮದಲ್ಲಾಗಲೀ, ಶುದ್ಧಾಚಾರ(ಮಡಿವಂತಿಕೆ) ವಿಚಾರದಲ್ಲಾಗಲೀ ಪ್ರತಿಯೊಂದಕ್ಕೂ ನಿಯಮ ಮಾಡಿಟ್ಟಿದ್ದಾರೆ. ಅದನ್ನು ಉಲ್ಲಂಘಿಸಿ ಹೋದದ್ದೇ ಈ ದುರಂತಗಳಿಗೆ ಕಾರಣ ಎನ್ನಬಹುದು.
ನಮ್ಮ ಆಹಾರವು ಜಠರ ಸೇರುವಾಗ ಮೂರು ರೂಪ ತಾಳುತ್ತದೆ. ಒಂದನೆಯದ್ದು ಘನ, ಎರಡನೆಯದ್ದು ದ್ರವ, ಮೂರನೆಯದ್ದು ಅನಿಲ. ಘನವು ಮಲದ ರೂಪದಲ್ಲಿ ಹೊರ ಹೋಗುತ್ತದೆ. ದ್ರವವು ರಕ್ತ ಮಾಂಸಗಳಾಗಿ ಮಾರ್ಪಡುತ್ತೆ. ಅನಿಲವು ಮೆದುಳಿಗೆ ಪೋಷಕವಾಗಿ ಮಾರ್ಪಡುತ್ತದೆ. ಅಮಲು ಸೇವಿಸಿದರೆ ಮೆದುಳು ಏನಾಗುತ್ತೆ ಎಂದು ಹೇಳಬೇಕಾಗಿಲ್ಲ. ಈ ರೀತಿಯ ಆಹಾರ ನಿಯಮಕ್ಕೆ ವಿರುದ್ಧವಾದಾಗಲೇ ಅನಾರೋಗ್ಯ. ನಾಲಿಗೆಗೆ ಪಥ್ಯವಾದದ್ದೆಲ್ಲಾ ದೇಹಕ್ಕೆ ಪಥ್ಯವಾಗದು. ದೇಹಕ್ಕೆ ಪಥ್ಯವಾದದ್ದೆಲ್ಲಾ ಮೆದುಳಿಗೆ ಪಥ್ಯ ಎಂದು ಹೇಳುವುದಕ್ಕಾಗದು.
ಸಾಕಷ್ಟು ಗ್ರಂಥಗಳು ಆಹಾರದ ಬಗ್ಗೆ ತಿಳಿಸಿದೆ. ಅಲ್ಲದೆ ಅದನ್ನು ತಿಳಿದ ವೈದ್ಯರುಗಳಿದ್ದಾರೆ. ಅವರನ್ನು ಏನು ಕೇಳೋದು ಅಂತ ಮುಕ್ಕಿದರೆ ಕೊನೆಗೆ ಅವರೇ ಗತಿಯೂ ಆಗುತ್ತಾರೆ. ಮಿತವಾದ ಆಹಾರ ಹಿತವಾದ ಜೀವನವನ್ನು ಕೊಡುತ್ತದೆ.
ಮುಂದಿನ ಲೇಖನದಲ್ಲಿ ಪ್ರಾಣಾಯಾಮದ ವಿಚಾರ ತಿಳಿಸುತ್ತೇನೆ.
ಸರ್ವೇ ಜನಾಃ ಸುಖಿನೋ ಭವಂತು
Get in Touch With Us info@kalpa.news Whatsapp: 9481252093
Discussion about this post